KL Rahul: ಟೀಮ್ ಇಂಡಿಯಾ ಪರ ಅಮೋಘ ಸಾಧನೆಗೆ ಸಜ್ಜಾದ ಕನ್ನಡಿಗ ಕೆಎಲ್ ರಾಹುಲ್

KL Rahul: ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ (ಸೆಪ್ಟೆಂಬರ್ 30) ಭಾರತವು ವೆಸ್ಟ್‌ ವಿರುದ್ಧ ಎರಡನೇ ಏನಕದಿನ ಪಂದ್ಯವನ್ನು ಆಡಲಿದೆ. ಇದೇ ವೇಳೆ ಕನ್ನಡಿಗ ಕೆ.ಎಲ್.ರಾಹುಲ್‌ ಅವರು ಅತ್ಯದ್ಭುತ ಸಾಧನೆ ಮಾಡಲಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ವಿಕೆಟ್ ಕೀಪರ್-ಬ್ಯಾಟರ್ ಕೇಎಲ್ ರಾಹುಲ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲೊಂದನ್ನು ತಲುಪಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅವರು ತಮ್ಮ 100ನೇ ಏಕದಿನ ಪಂದ್ಯ ಪೂರೈಸಲಿದ್ದು, ಈ ಸಾಧನೆ ಮಾಡಿದ 38ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

KL Rahul 100th ODI 5 Best Innings Ahead of His Milestone Match vs West Indies Know Details

ಕೆಎಲ್‌ ರಾಹುಲ್‌ ಅವರ ಅದ್ಭುತ ಇನ್ನಿಂಗ್ಸ್‌ಗಳು

ಯಾವುದೇ ಕ್ರಮಾಂಕದಲ್ಲೂ (ಆರಂಭಿಕರಾಗಿ ಅಥವಾ ಮಿಡಲ್ ಆರ್ಡರ್ ಬ್ಯಾಟರ್ ಆಗಿ) ಬ್ಯಾಟ್ ಬೀಸಬಲ್ಲ ಸಾಮರ್ಥ್ಯವುಳ್ಳ ಕೆ.ಎಲ್‌.ರಾಹುಲ್ ಅವರು ಭಾರತ ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರ ಏಕದಿನ ಕೆರಿಯರ್‌ನ 5 ಪ್ರಮುಖ ಅತ್ಯುತ್ತಮ ಇನ್ನಿಂಗ್ಸ್‌ಗಳ ವಿವರವನ್ನು ಇಲ್ಲಿ ಗಮನಿಸಿ.

5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯದ್ಭುತ ಸಾಧನೆ

2020ರಲ್ಲಿ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾ ಆರಂಭದಲ್ಲೇ 62 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್.ರಾಹುಲ್ ಜವಾಬ್ದಾರಿಯುತ ಆಟವಾಡಿದರು. ಶ್ರೇಯಸ್ ಅಯ್ಯರ್ ಜೊತೆಗೂಡಿ ತಂಡಕ್ಕೆ ನೆರವಾದ ಅವರು 104 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದರು. ಒಟ್ಟು 112 ರನ್‌ಗಳ ಕೊಡುಗೆ ನೀಡಿ ಭಾರತ ಬೃಹತ್ ಮೊತ್ತ ಕಲೆಹಾಕಲು ಪ್ರಮುಖ ಪಾತ್ರವಹಿಸಿದರು.

ಶ್ರೀಲಂಕಾ ವಿರುದ್ಧ ದಾಖಲೆ

2019ರ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್.ರಾಹುಲ್ ಅವರು, ತಮ್ಮ ಚೊಚ್ಚಲ ವಿಶ್ವಕಪ್ ಶತಕ ಸಿಡಿಸಿ ಮಿಂಚಿದರು. 118 ಎಸೆತಗಳಲ್ಲಿ 111 ರನ್ ಬಾರಿಸಿದ ಅವರು ರೋಹಿತ್ ಜೊತೆಗೂಡಿ 189 ರನ್‌ಗಳ ಕೊಡುಗೆ ನೀಡಿ ಭಾರತದ ಸುಲಭ ಗೆಲುವಿಗೆ ಹಾದಿಯನ್ನು ಸುಲಭಗೊಳಿಸಿದರು.

ನೆದರ್ಲ್ಯಾಂಡ್ಸ್ ಕೆಎಲ್‌ ರಾಹುಲ್ ಸಾಧನೆ

2023ರ ತಾಯ್ನಾಡಿನ ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ಕೆಎಲ್ ರಾಹುಲ್, ಕೇವಲ 62 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತೀಯ ಬ್ಯಾಟರ್ ಒಬ್ಬರು ಬಾರಿಸಿದ ಅತ್ಯಂತ ವೇಗದ ಶತಕಗಳಲ್ಲಿ ಒಂದಾಗಿ ದಾಖಲಾಯಿತು. ಅಷ್ಟೇ ಅಲ್ಲದೆ, ಭಾರತ 410 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾಯಿತು.

ರೋಹಿತ್ ಶರ್ಮಾ ಆಕ್ರಮಣಕಾರಿ ಆಟ

2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತ ಮೊದಲ ಪಂದ್ಯ ಸೋತು ಹಿನ್ನಡೆಯಲ್ಲಿತ್ತು. ಈ ವೇಳೆ ಎರಡನೇ ಪಂದ್ಯದಲ್ಲಿ ಕೆ.ಎಲ್‌.ರಾಹುಲ್ ಅವರು ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ರೋಹಿತ್ ಶರ್ಮಾ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ನಡೆಸಿ 102 ಬಾಲ್‌ಗಳಲ್ಲಿ 102 ರನ್ ಗಳಿಸಿದರು. ಈ ಬ್ಯಾಟಿಂಗ್ ಪ್ರದರ್ಶನ ಭಾರತ ಸರಣಿಯಲ್ಲಿ ಮರಳಲು ಮತ್ತು ಜಯಗಳಿಸಲು ಸಹಕಾರಿಯಾಯಿತು.

2016ರಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಕೆ.ಎಲ್‌. ರಾಹುಲ್ ಅವರು, ಪಾದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೊಸ ಇತಿಹಾಸ ಬರೆದರು. 169 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿ ತಂಡಕ್ಕೆ 9 ವಿಕೆಟ್‌‌ಗಳ ಭರ್ಜರಿ ಗೆಲುವು ತಂದುಕೊಟ್ಟರು. ಒಟ್ಟಿನಲ್ಲಿ ಕೆಎಲ್‌ ರಾಹುಲ್‌ ಅವರು 100ನೇ ಏಕದಿನ ಪಂದ್ಯ ಆಡಲಿದ್ದು, ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+