KKR vs SRH: ದಶಕದ ಬಳಿಕ ಐಪಿಎಲ್ ಚಾಂಪಿಯನ್ ಆದ ಕೆಕೆಆರ್
ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿ ಪ್ರಶಸ್ತಿ ಗೆದ್ದಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪಾಟ್ ಕಮ್ಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ತಂಡದ ಸ್ಫೋಟಕ ಬ್ಯಾಟಿಂಗ್ ಪಡೆ ಮೇಲೆ ನಂಬಿಕೆ ಇಟ್ಟ ಅವರು, ಬೃಹತ್ ಮೊತ್ತ ಕಲೆಹಾಕುವ ಯೋಜನೆ ಹೊಂದಿದ್ದರು.

ಆದರೆ ಕೋಲ್ಕತಾ ನೈಟ್ ರೈಡರ್ಸ್ ಬೌಲರ್ ಗಳ ಅಬ್ಬರದ ಮುಂದೆ ಸನ್‌ರೈಸರ್ಸ್ ಹೈದರಾಬಾದ್ ಸ್ಫೋಟಕ ಬ್ಯಾಟಿಂಗ್ ಪಡೆ ತಬ್ಬಿಬ್ಬಾಗಿತ್ತು. 18.3 ಓವರ್ ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಕೇವಲ 113 ರನ್‌ಗಳಿಗೆ ಆಲೌಟ್ ಆಗುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ಫೈನಲ್‌ನಲ್ಲಿ ಅತಿ ಕಡಿಮೆ ರನ್ ಗಳಿಸಿದ ಕೆಟ್ಟ ದಾಖಲೆ ಬರೆಯಿತು.
ಇದೇ ಆವೃತ್ತಿಯಲ್ಲಿ ಐಪಿಎಲ್‌ನ ಅತಿ ದೊಡ್ಡ ಮೊತ್ತ ಕಲೆಹಾಕಿದ್ದ ಎಸ್‌ಆರ್‌ಎಚ್ ಫೈನಲ್‌ನಲ್ಲಿ ಅತಿ ಕಡಿಮೆ ರನ್ ಗಳಿಸಿತು. ನಾಯಕ ಪ್ಯಾಟ್ ಕಮ್ಮಿನ್ಸ್ 24 ರನ್ ಗಳಿಸಿದ್ದೇ ಇಂದು ಸನ್‌ರೈಸರ್ಸ್ ತಂಡದ ಬ್ಯಾಟರ್ ಗಳಿಸಿದ ಅತಿ ಹೆಚ್ಚು ರನ್ ಆಗಿದೆ.
ಅಭಿಷೇಕ್ ಶರ್ಮಾ 2 ರನ್ ರನ್ ಗಳಿಸಿದರೆ, ಟ್ರಾವಿಸ್ ಹೆಡ್ ಮೊದಲ ಎಸೆತದಲ್ಲೇ ಔಟ್ ಆದರು. ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಶಹಬಾಝ್ ಅಹ್ಮದ್, ಅಬ್ದುಲ್ ಸಮದ್ ಬ್ಯಾಟಿಂಗ್‌ನಲ್ಲಿ ವಿಫಲವಾದರು.
ಕೆಕೆಆರ್ ಪರವಾಗಿ ಆಂಡ್ರೆ ರಸೆಲ್ 3 ವಿಕೆಟ್ ಪಡೆದರೆ, ಹರ್ಷಿತ್ ರಾಣಾ ಮತ್ತು ಮಿಚೆಲ್ ಸ್ಟಾರ್ಕ್ ತಲಾ 2 ವಿಕೆಟ್ ಪಡೆದರು. ವೈಭವ್ ಅರೋರಾ, ಸುನಿಲ್ ನರೇನ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ವೆಂಕಟೇಶ್ ಅಯ್ಯರ್ ಅಬ್ಬರ
114 ರನ್‌ಗಳ ಸುಲಭ ಸವಾಲನ್ನು ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ಆರಂಭದಲ್ಲೇ ಸುನಿಲ್ ನರೇನ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ವೆಂಕಟೇಶ್ ಅಯ್ಯರ್ ಮತ್ತು ರೆಹಮಾನುಲ್ಲಾ ಗುರ್ಬಾಜ್ ಎರಡನೇ ವಿಕೆಟ್‌ಗೆ 91 ರನ್‌ಗಳನ್ನು ಕಲೆಹಾಕಿದರು.
ರೆಹಮಾನುಲ್ಲಾ ಗುರ್ಜಾಜ್ 32 ಎಸೆತಗಳಲ್ಲಿ 39 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 3 ಎಸೆತಗಳಲ್ಲಿ ಅಜೇಯ 6 ರನ್ ಗಳಿಸುವ ಮೂಲಕ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.












Click it and Unblock the Notifications