KKR vs SRH: ಸ್ಟಾರ್ಕ್ ಮಾರಕ ದಾಳಿ; 159 ರನ್‌ಗಳಿಗೆ ಸನ್‌ರೈಸರ್ಸ್ ಹೈದರಾಬಾದ್ ಆಲೌಟ್

ಮಂಗಳವಾರ ನಡೆಯುತ್ತಿರುವ ಐಪಿಎಲ್ 2024ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 19.3 ಓವರ್ ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡಕ್ಕೆ ಸ್ಫೋಟಕ ಆರಂಭ ನೀಡುತ್ತಿದ್ದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಮುಖ್ಯ ಪಂದ್ಯದಲ್ಲೇ ವೈಫಲ್ಯ ಕಂಡರು.

KKR vs SRH KKR Needs 160 to Reach IPL 2024 Final After Bowling Out SRH for 159

ಟ್ರಾವಿಸ್ ಹೆಡ್ ಕೇವಲ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಔಟಾದರೆ, ಅಭಿಷೇಕ್ ಶರ್ಮಾ ಕೇವಲ ಮೂರು ರನ್ ಗಳಿಸಿ ಔಟಾದರು. ಐಪಿಎಲ್‌ನ ದುಬಾರಿ ಬೌಲರ್ ಪ್ರಮುಖ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.

ಆರಂಭದಲ್ಲೇ ಮೂರು ವಿಕೆಟ್ ಪಡೆದು ಸನ್‌ರೈಸರ್ಸ್ ಹೈದರಾಬಾದ್‌ಗೆ ಆಘಾತ ನೀಡಿದರು. ರಾಹುಲ್ ತ್ರಿಪಾಠಿ 35 ಎಸೆತಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ಆಸರೆಯಾದರು, ಹೆನ್ರಿಚ್ ಕ್ಲಾಸೆನ್ 21 ಎಸೆತಗಳಲ್ಲಿ 32 ರನ್ ಗಳಿಸಿದರು.

ನಿತೀಶ್ ರೆಡ್ಡಿ ಕೇವಲ 9 ರನ್ ಗಳಿಸಿದರೆ, ಶಹಬಾಜ್ ಅಹಮದ್ ಮತ್ತು ಸನ್ವೀರ್ ಸಿಂಗ್ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್‌ ಆದರು. ಭುವನೇಶ್ವರ್ ಕುಮಾರ್ ಕೂಡ ಸೊನ್ನೆಗೆ ಔಟಾದರು.

ನಾಯಕ ಪಾಟ್ ಕಮ್ಮಿನ್ಸ್ ಕೊನೆಯಲ್ಲಿ 24 ಎಸೆತಗಳಲ್ಲಿ 30 ರನ್ ರನ್ ಗಳಿಸುವ ಮೂಲಕ ತಂಡದ ಸ್ಕೋರ್ 150ರ ಗಡಿ ದಾಟಲು ಸಹಾಯ ಮಾಡಿದರು. ಅಂತಿಮವಾಗಿ 159 ರನ್‌ಗಳಿಗೆ ಆಲೌಟ್ ಆಗಿದೆ. ಕೆಕೆಆರ್ ಫೈನಲ್ ತಲುಪಲು 160 ರನ್ ಗಳಿಸಬೇಕಿದೆ.

ಮಿಚೆಲ್ ಸ್ಟಾರ್ಕ್ ಮಾರಕ ದಾಳಿ

ಬರೋಬ್ಬರಿ ₹24.75 ಕೋಟಿಗೆ ಹರಾಜಾಗಿದ್ದ ಮಿಚೆಲ್ ಸ್ಟಾರ್ಕ್ ಮಹತ್ವದ ಪಂದ್ಯದಲ್ಲಿ ಮಿಂಚಿದರು. 4 ಓವರ್ ಗಳಲ್ಲಿ 34 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ವರುಣ್ ಚಕ್ರವರ್ತಿ 4 ಓವರ್ ಗಳಲ್ಲಿ 26 ರನ್ ನೀಡಿ ಎರಡು ವಿಕೆಟ್ ಪಡೆದರು.

ವೈಭವ್ ಅರೋರಾ, ಹರ್ಷಿತ್ ರಾಣಾ, ಸುನಿಲ್ ನರೇನ್ ಮತ್ತು ಆಂಡ್ರೆ ರಸೆಲ್ ತಲಾ ಒಂದು ವಿಕೆಟ್ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+