ಕಿಂಗ್ ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕ ಆಗ್ತಾರಾ, ಅಧಿಕೃತ ಮಾಹಿತಿ ಇಲ್ಲಿದೆ !
rcb captain in ipl 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಲ್ಲಿಯವರೆಗೆ ಏಳುಬೀಳುಗಳ ನಡುವೆಯೂ ತನ್ನ ಅಭಿಮಾನಿಗಳನ್ನು ಕಳೆದುಕೊಂಡಿಲ್ಲ. ಆರ್‌ಸಿಬಿ ಮಹಿಳಾ ತಂಡವು ಒಂದು ಬಾರಿ ಕಪ್ ಗೆದಿದ್ದೆ. ಆದರೆ, ಪುರುಷರ ಕ್ರಿಕೆಟ್ ತಂಡವು ಕಪ್ ಗೆಲ್ಲುವಲ್ಲಿ ಎಡವುತ್ತಲ್ಲೇ ಇದೆ. ಈ ಸಲ ಕಪ್ ನಮ್ದೇ ಎನ್ನುವ ಘೋಷಾವಾಕ್ಯವೂ ಪ್ರತಿ ಬಾರಿಯೂ ರಿಪೀಟ್ ಆಗುತ್ತಿದೆಯಾದರೂ, ಕಪ್ ಕನಸಾಗೇ ಉಳಿದಿದೆ. ಈ ನಡುವೆ ಆರ್‌ಸಿಬಿ ತಂಡದ ನಾಯಕನಾಗಿ ಮತ್ತೆ ವಿರಾಟ್ ಕೊಹ್ಲಿ ಅವರು ಮತ್ತೆ ಬರಲಿದ್ದಾರೆಯೇ ಎಂದು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಹೇಳಿದ್ದೇನು ಎನ್ನುವುದು ಇಲ್ಲಿದೆ.
ಆರ್‌ಸಿಬಿ.. ಆರ್‌ಸಿಬಿ ಇದು ಪ್ರತಿ ಬಾರಿಯೂ ಆರ್‌ಸಿಬಿ ತಂಡ ಕ್ರೀಡಾಂಗಣಕ್ಕೆ ಇಳಿದಾಗ ಕೇಳುವ ಹರ್ಷೋದ್ಗಾರ. ಸೋಲಲಿ ಇಲ್ಲವೇ ಗೆಲ್ಲಲಿ ಆರ್‌ಸಿಬಿ ಎಂದೆಂದಿಗೂ ಅನ್ನೋದು ಆರ್‌ಸಿಬಿ ಅಭಿಮಾನಿಗಳ ಧ್ಯೇಯವಾಕ್ಯ. ಇನ್ನು ಭಾರತದ ಮೇರು ಕ್ರಿಕೆಟಿಗ ಹಾಗೂ ಆರ್‌ಸಿಬಿಯ ಮಾಜಿ ಆಟಗಾರ ವಿರಾಟ್ ಕೊಹ್ಲಿ ಅವರು ನಾಯಕನಾಗಿರುವಾಗಲೇ ಒಮ್ಮೆಯಾದರೂ, ಆರ್‌ಸಿಬಿ ಕಪ್ ಎತ್ತಿ ಹಿಡಿಯಬೇಕು ಎಂದು ಕೋಟ್ಯಾಂತರ ಅಭಿಮಾನಿಗಳು ಆಸೆಪಟ್ಟಿದ್ದರು.

ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ಅದು ಸಾಧ್ಯವಾಗಲಿಲ್ಲ. ಅಲ್ಲದೇ ಫಾಫ್ ಡುಪ್ಲೆಸಿಸ್ ಅವರ ನಾಯಕತ್ವದಲ್ಲೂ ಇದು ಈಡೇರಲಿಲ್ಲ. ಕಳೆದ ಬಾರಿ ಅತ್ಯಂತ ರೋಚಕ ಆಟ ಆಡಿದ್ದ ಆರ್‌ಸಿಬಿ, ಐಪಿಎಲ್ ಇತಿಹಾಸದಲ್ಲಿ ಎಂದೂ ಮರೆಯಲಾಗದ ಇತಿಹಾಸವನ್ನು ಸೃಷ್ಟಿ ಮಾಡಿತ್ತು. ಇನ್ನೇನು ಆರ್‌ಸಿಬಿ ಕಪ್ ಗೆದ್ದೇ ಬಿಡ್ತು ಎನ್ನುವಾಗಲೇ ಕಪ್ ಕೈತಪ್ಪಿತ್ತು. ಇದೀಗ ಈ ಬಾರಿಯ ಅಂದರೆ 2025ನೇ ಸಾಲಿನ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಿಂಗ್ ವಿರಾಟ್ ಕೊಹ್ಲಿ ಅವರು ಮತ್ತೆ ಆರ್‌ಸಿಬಿ ತಂಡದ ನಾಯಕನಾಗಲಿದ್ದಾರೆಯೇ ಎಂದು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದಕ್ಕೆ ಆರ್‌ಸಿಬಿ ಮ್ಯಾನೇಜ್ಮೆಂಟ್ ನಿರಾಸೆಯ ಉತ್ತರವನ್ನು ನೀಡಿದೆ.
ಐಪಿಎಲ್ 18ನೇ ಆವೃತ್ತಿಯಲ್ಲಿ ವಿರಾಟ್ ಪರ್ವ ಶುರವಾಗಲಿದೆ ಎಂದೇ ಸುದ್ದಿಯಾಗಿತ್ತು. ವಿರಾಟ್ ಮತ್ತೆ ಬರ್ಬೇಕು (ನಾಯಕನಾಗಿ) ಕಪ್ ಒಂದು ಸಲವಾದರೂ ಅವರ ಕೈಯಲ್ಲಿ ನೋಡಬೇಕು ಎನ್ನುವುದು ಅವರ ಅಭಿಮಾನಿಗಳ ಆಶಯ. ಆರ್‌ಸಿಬಿ ಕಪ್ ಗೆಲ್ಲಬೇಕು ಎನ್ನುವಷ್ಟೇ ವಿರಾಟ್ ಕೈಯಲ್ಲಿ ಕಪ್ ಇರುವುದನ್ನು ಕಣ್ತುಂಬಿಕೊಳ್ಳಬೇಕು ಎನ್ನುವುದು ಅಭಿಮಾನಿಗಳ ಆಸೆ. ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಕ್ಯಾಪ್ಟನ್ ಆಗಿ ಮಿಂಚಿದ್ದರು. ಆದರೆ, 2022ರಲ್ಲಿ ಆರ್‌ಸಿಬಿ ನಾಯಕತ್ವವನ್ನು ಫಾಫ್ ಡು ಪ್ಲೆಸಿಸ್ ಹಸ್ತಾಂತರಿಸಿ, ಆಟಗಾರನಾಗಿ ಮುಂದುವರಿದಿದ್ದರು.
𝗛𝗼𝘄 𝗱𝗼𝗲𝘀 𝗥𝗖𝗕 𝗽𝗿𝗲𝗽𝗮𝗿𝗲 𝗳𝗼𝗿 𝘁𝗵𝗲 #𝗜𝗣𝗟 𝗠𝗲𝗴𝗮 𝗔𝘂𝗰𝘁𝗶𝗼𝗻 𝗳𝗿𝗼𝗺 𝗵𝗲𝗿𝗲 𝗼𝗻?
— Royal Challengers Bengaluru (@RCBTweets) November 4, 2024
Mo Bobat and Andy Flower decode the auction prep process for fans on @bigbasket_com presents RCB Bold Diaries.#PlayBold #ನಮ್ಮRCB #IPLAuction pic.twitter.com/BZR8gWTBus
ಈ ಬಾರಿಯ ಆವೃತ್ತಿಯಲ್ಲಿ ಆರ್‌ಸಿಬಿ ತಂಡವು ಫಾಫ್ ಡು ಪ್ಲೆಸಿಸ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಹೀಗಾಗಿ, ವಿರಾಟ್ ಮತ್ತೊಮ್ಮೆ ನಾಯಕನಾಗಿ ಮಿಂಚಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ. ಆರ್‌ಸಿಬಿ ತಂಡದ ನಿರ್ದೇಶಕ ಮೊ ಬೊಬಾಟ್ ಅವರು, ವಿರಾಟ್ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ನಿರ್ಧಾರ ಮಾಡಿಲ್ಲ: ಆರ್‌ಸಿಬಿ ನಾಯಕತ್ವದ ವಿಷಯಕ್ಕೆ ಸಂಬಂಧಿಸಿದಂತೆ ನಾವು ಇಲ್ಲಿಯ ವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಎಲ್ಲಾರ ಕ್ಷಮೆ ಕೋರುತ್ತೇವೆ. ನಾಯಕತ್ವಕ್ಕೆ ಸಂಬಂಧಿಸಿ, ಆಯ್ಕೆಗಳಿಗೆ ಮುಕ್ತರಾಗಿದ್ದೇವೆ. ಆರ್‌ಸಿಬಿ ಮ್ಯಾನೇಜ್ಮೆಂಟ್ ತೆಗೆದುಕೊಂಡ ಒಂದೇ ಒಂದು ಸ್ಪಷ್ಟವಾದ ನಿರ್ಧಾರ ಏನು ಎಂದರೆ, ಆರ್‌ಸಿಬಿ ಮಾಜಿ ನಾಯಕ ಫಾಫ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದೆ ಇರುವುದು.
ಫಾಫ್ ಅವರು, ಆರ್‌ಸಿಬಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಆದರೆ, ಹರಾಜಿಗೆ ಹೋಗುವುದರಿಂದ ನಮಗೆ ಇನ್ನಷ್ಟು ಉತ್ತಮ ಆಯ್ಕೆಗಳು ಸಿಗಲಿವೆ ಎನ್ನುವ ಕಾರಣದಿಂದ ಮಾತ್ರ ಫಾಫ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿಲ್ಲ ಎಂದಿದ್ದಾರೆ. ಆರ್‌ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಅವರು ಮತ್ತೆ ಆರ್‌ಸಿಬಿ ನಾಯಕ ಆಗಲ್ಲ ಎನ್ನುವುದು ಕೇಳಿ ಅಭಿಮಾನಿಗಳಲ್ಲಿ ನಿರಾಸೆ ಮನೆ ಮಾಡಿದೆ.












Click it and Unblock the Notifications