Karnun Nair: ದಿನೇಶ್ ಕಾರ್ತಿಕ್ ರೀತಿ ಭಾರತ ತಂಡಕ್ಕೆ ವಾಪಸ್ ಬರ್ತಾರ ಕರುಣ್ ನಾಯರ್?
ಕರುಣ್ ನಾಯರ್, ಭಾರತ ತಂಡದಲ್ಲಿ ಕಡೆಗಣಿಸಲ್ಪಟ್ಟ ಕರ್ನಾಟಕ ಕ್ರಿಕೆಟಿಗ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಇಬ್ಬರು ಭಾರತೀಯ ಆಟಗಾರರಲ್ಲಿ ಕರುಣ್ ನಾಯರ್ ಒಬ್ಬರು. ವೀರೇಂದ್ರ ಸೆಹ್ವಾಗ್ ಬಿಟ್ಟರೆ ಈ ಸಾಧನೆ ಮಾಡಿರುವುದು ಕರುಣ್ ನಾಯರ್ ಮಾತ್ರ. ಅದಾದ ಬಳಿಕ ಕರುಣ್ ನಾಯರ್ ಅವರಿಗೆ ಸರಿಯಾದ ಅವಕಾಶಗಳು ಸಿಗಲೇ ಇಲ್ಲ. ಕರ್ನಾಟಕ, ವಿದರ್ಭ ತಂಡಕ್ಕೆ ಆಡಿದ್ದು, ಕೌಂಟಿ ಕ್ರಿಕೆಟ್‌ನಲ್ಲಿ ಕೂಡ ಮಿಂಚುತ್ತಿರುವ ಕರುಣ್ ನಾಯರ್ ಮತ್ತೆ ಭಾರತ ತಂಡಕ್ಕೆ ಮರಳುವ ಬಗ್ಗೆ ಮಾತನಾಡಿದ್ದಾರೆ.
ಪಿಟಿಐ ಜೊತೆ ಮಾತನಾಡಿರುವ ಕನ್ನಡಿಗ ಕರುಣ್ ನಾಯರ್, "ಆಕ್ರಮಣಕಾರಿಯಾಗಿ ಆಡಲು ಸಜ್ಜಾಗಿರಬೇಕು, ಮುಂದಿನ ಪಂದ್ಯದ ಬಗ್ಗೆ ನಾನು ಯೋಚನೆ ಮಾಡುತ್ತೇನೆ, ಅದಕ್ಕಿಂತ ಹೆಚ್ಚು ಯೋಚನೆ ಮಾಡಿದರೆ, ನಾವು ಯೋಚನೆಯಲ್ಲೇ ಸಿಲುಕಿಕೊಳ್ಳಬಹುದು" ಎಂದು ಹೇಳಿದ್ದಾರೆ.

"ಕಳೆದ ಒಂದು ವರ್ಷದಲ್ಲಿ ಎಲ್ಲಾ ಸ್ವರೂಪಗಳಲ್ಲಿ ನಾನು ರನ್ ಗಳಿಸಿದ್ದೇನೆ. ಪ್ರತಿ ಅವಕಾಶ ಸಿಕ್ಕಾಗಲೂ ನಾಣು ಉತ್ತಮವಾಗಿ ಆಡಲು ಪ್ರಯತ್ನಿಸುತ್ತಿದ್ದೇನೆ. ಪ್ರತಿ ಅವಕಾಶವನ್ನು ಹೊಸ ದಿನವಾಗಿ ಪರಿಗಣಿಸುತ್ತೇಣೆ" ಎಂದು ಅವರು ಹೇಳಿದ್ದಾರೆ.
ಕೌಂಟಿ ಪಂದ್ಯಾವಳಿಯಲ್ಲಿ ಉತ್ತಮ ಆಟ
2023ರ ಆರಂಭದಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. 83 ಸರಾಸರಿಯಲ್ಲಿ 249 ರನ್ ಗಳಿಸಿದರು. ಸರ್‍ರೆ ತಂಡದ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದರು. 2024ರಲ್ಲಿ ಕರುಣ್ ನಾಯರ್, ಏಳು ಕೌಂಟಿ ಪಂದ್ಯಗಳಲ್ಲಿ 49 ಸರಾಸರಿಯಲ್ಲಿ 487 ರನ್ ಗಳಿಸಿದರು. ಗ್ಲಾಮೊರ್ಗಾನ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಇದು ದೊಡ್ಡ ಸ್ಕೋರ್ ಅಲ್ಲದೇ ಇದ್ದರು, ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬುವಲ್ಲಿ ಸಹಾಯಕವಾಗಿದೆ.
ಕೌಂಟಿ ಚಾಂಪಿಯನ್‌ಶಿಪ್ ಬಗ್ಗೆ ಮಾತನಾಡಿದ ಕರುಣ್ ನಾಯರ್, "ಇಂಗ್ಲೆಂಡ್‌ನಲ್ಲಿ ಭಾರತೀಯ ಆಟಗಾರರು ರನ್ ಗಳಿಸುವುದು ಕಠಿಣವಾಗಿದೆ. ಆದ್ದರಿಂದ ಬ್ಯಾಟರ್ ಆಗಿ ನಾನು ಹೆಚ್ಚು ಕಲಿತಿದ್ದೇನೆ, ರನ್ ಗಳಿಸುವ ಮಾರ್ಗಗಳನ್ನು ಹುಡುಕುತ್ತೇನೆ ಮತ್ತು ಅದರಲ್ಲಿ ನಂಬಿಕೆ ಇಟ್ಟಿದ್ದೇನೆ" ಎಂದು ಹೇಳಿದ್ದಾರೆ.
ರಣಜಿ ಟ್ರೋಫಿಯಲ್ಲಿ ಭರ್ಜರಿ ಆಟ
ಕಳೆದ ವರ್ಷ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡವನ್ನು ಬಿಟ್ಟು ವಿದರ್ಭ ತಂಡಕ್ಕೆ ಸೇರಿಕೊಂಡರು. ಕರ್ನಾಟಕ ತಂಡದಲ್ಲಿ ಹೆಚ್ಚಿನ ಅವಕಾಶ ಸಿಗದ ಕಾರಣ, ವಿದರ್ಭ ತಂಡಕ್ಕೆ ಹೋಗಿದ್ದರು. ರಣಜಿಯಲ್ಲಿ 10 ಪಂದ್ಯಗಳನ್ನು ಆಡಿದ ಅವರು, ಎರಡು ಶತಕ ಸಹಿತ 690 ರನ್ ಗಳಿಸಿದರು. ಅವರ ಭರ್ಜರಿ ಆಟದ ನೆರವಿನಿಂದ ವಿದರ್ಭ ಸೆಮಿಫೈನಲ್ ತಲುಪಿತ್ತು.
ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಆಡುವ ಅವಕಾಶ, ನನಗೆ ಗೊತ್ತಿಲ್ಲದ ಕಾರಣಗಳಿಗಾಗಿ ನಾನು ಒಂದು ವರ್ಷ ತಪ್ಪಿಸಿಕೊಂಡೆ. ಹಾಗಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಿದ ವಿದರ್ಭ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಈಗ ನಾನು ರನ್ ಗಳಿಸುತ್ತಿರುವ ರೀತಿ ನನಗೆ ಖುಷಿ ಕೊಟ್ಟಿದೆ. ಇದು ಅವರು ಭಾರತ ತಂಡಕ್ಕೆ ವಾಪಸಾಗುವ ಆಸೆ ಜೀವಂತವಾಗಿದೆ. ಹೌದು, ಎಲ್ಲರಿಗೂ ದೇಶಕ್ಕಾಗಿ ಆಡಬೇಕು ಎನ್ನುವ ಕನಸು ಇರುತ್ತದೆ. ಈಗ ಅದೇ ನನ್ನ ಏಕೈಕ ಗುರಿಯಾಗಿದೆ. ಭಾರತ ಟೆಸ್ಟ್ ತಂಡದಲ್ಲಿ ಆಡುವುದು ನನ್ನ ಕನಸು, ನಾನೀಗ ಸಾಕಷ್ಟು ಸುಧಾರಣೆಯಾಗಿದ್ದೇನೆ ಎಂದು ಹೇಳಿದ್ದಾರೆ.












Click it and Unblock the Notifications