Kane Williamson Retirement: ಕೇನ್ ವಿಲಿಯಮ್ಸನ್ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ
Kane Williamson Rtirement: ನ್ಯೂಜಿಲೆಂಡ್ ಕ್ರಿಕೆಟ್ ದಿಗ್ಗಜ ಕೇನ್ ವಿಲಿಯಮ್ಸನ್ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗಾದ್ರೆ, ಅವರ ಸಾಧನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಫೀಲ್ಡ್‌ನಲ್ಲಿದ್ದಾಗ ತಂಡ ಸೋಲಲಿ, ಗೆಲ್ಲಲಿ ಅವರ ಮುಖದಲ್ಲಿ ನಗು ಇರುತ್ತಿತ್ತು. ಈ ಒಂದು ಅವರ ಗುಣಕ್ಕೆ ಸಾಕಷ್ಟು ಅಭಿಮಾಗಳಿದ್ದಾರೆ. ಬರೀ ನ್ಯೂಜಿಲೆಂಡ್ ಮಾತ್ರವಲ್ಲದೆ, ಭಾರತದಲ್ಲೂ ಕೂಡ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನೂ ಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ಅವರ ರನ್‌ಗಳೆಷ್ಟು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ವಿಲಿಯಮ್ಸನ್ ತಮ್ಮ ನ್ಯೂಜಿಲೆಂಡ್ ತಂಡದಲ್ಲೇ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಇದೀಗ ಅವರು ಟಿ-20 ಕ್ರಿಕೆಟ್‌ಗೆ ವಿದಾಯ ಹೇಳಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಅವರು 2021 ರ ಟಿ-20 ವಿಶ್ವಕಪ್‌ನ ಫೈನಲ್‌ಗೆ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದರು.
ಅಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರ ತಂಡ ಸೋಲನುಭವಿದ ವೇಳೆ 85 ರನ್ ಬಾರಿಸಿದ್ದರು. 2016 ಮತ್ತು 2022ರಲ್ಲಿ ಸೆಮಿಫೈನಲ್‌ನಲ್ಲೂ ಕೂಡ ಕಣದಲ್ಲಿದ್ದರು. ಇನ್ನೂ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ಕ್ರಿಕೆಟ್‌ನೊಂದಿಗೆ ಕ್ಯಾಶುಯಲ್ ಒಪ್ಪಂದಕ್ಕೆ ಸಹಿ ಹಾಕುವಾಗ ಎರಡೂ ವೈಟ್ ಬಾಲ್ ಸ್ವರೂಪಗಳಲ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದರು.
ಕೇನ್ ವಿಲಿಯಮ್ಸನ್ ಅವರು ನ್ಯೂಝಿಲೆಂಡ್ ಪರ ಒಟ್ಟು 93 ಟಿ-20 ಪಂದ್ಯಗಳನ್ನಾಡಿದ್ದಾರೆ. 18 ಅರ್ಧಶತಕಗಳು ಸೇರಿದಂತೆ ಒಟ್ಟು 2,575 ರನ್ ಕಲೆಹಾಕಿದ್ದಾರೆ. 58 ಸಿಕ್ಸ್ ಹಾಗೂ 245 ಫೋರ್ಗಳನ್ನು ಸಿಡಿಸುವ ಮೂಲಕ ಈ ಸಾಧನೆ ಮಾಡಿರುವ ಅವರು ಇದೀಗ ತಮ್ಮ 35ನೇ ವಯಸ್ಸಿನಲ್ಲಿ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ.
ಕೇನ್ ವಿಲಿಯಮ್ಸನ್ ಹೇಳಿದ್ದೇನು?: ನಿವೃತ್ತಿ ಘೋಷಣೆ ಬಳಿಕ ಮಾತನಾಡಿದ ಅವರು, ಇದು ನನಗೆ ಮತ್ತು ತಂಡಕ್ಕೆ ಸರಿಯಾದ ಸಮಯ. ಅಲ್ಲದೆ, ತಂಡಕ್ಕೆ ಮುಂದಿನ ಪ್ರಮುಖ ಟಿ-20 ವಿಶ್ವಕಪ್‌ಗಿಂತ ಮುನ್ನ ಸರಣಿಯನ್ನು ಹೇಗೆ ಮುಂದುವರೆಸುವುದು ಎಂಬುದರ ಕುರಿತು ಸ್ಪಷ್ಟತೆಯನ್ನು ನೀಡುತ್ತದೆ ಎಂದು ಹೇಳಿದರು.
ಇನ್ನೂ ತುಂಬಾ ಟಿ-20 ಪ್ರತಿಭೆಗಳು ಇದ್ದಾರೆ. ಮುಂದಿನ ಅವಧಿಯ ಕ್ರಿಕೆಟ್‌ಗೆ ಹೊಸಬರಿಗೆ ಅವಕಾಶ ಮಾಡಿಕೊಡುವುದು ಮುಖ್ಯ ಆಗುತ್ತದೆ. ಅಲ್ಲದೆ, ಕಳೆದ 15 ವರ್ಷಗಳಿಂದ ನ್ಯೂಝಿಲೆಂಡ್ ಪರ ಆಡಿದ್ದೇನೆ. ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಬೇಕಿದೆ. ಆದ್ದರಿಂದ ಟಿ-20 ಕ್ರಿಕೆಟ್ನಿಂದ ನಿವೃತ್ತನಾಗಲು ನಿರ್ಧಾರ ಮಾಡಿದ್ದೇನೆ ಅಂತಲೂ ಹೇಳಿದ್ದಾರೆ.
ಇನ್ನೂ ನವೆಂಬರ್ 5 ಬುಧವಾರದಿಂದ ಆರಂಭ ಆಗಲಿರುವ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಟಿ-20 ನಡೆಯಲಿದೆ. ಈ ಸರಣಿಗೂ ಮುನ್ನ ವಿಲಿಯಮ್ಸನ್ ಈ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ಮುಂದಿನ ಏಕದಿನ ಸರಣಿಗೂ ಅವರು ಅಲಭ್ಯರಾಗಿದ್ದಾರೆ. ಡಿಸೆಂಬರ್‌ನಲ್ಲಿ ಮೂರು ಟೆಸ್ಟ್‌ಗಳಿಗೆ ಇರಲಿದ್ದಾರೆ ಎನ್ನುವ ಮಾಹಿತಿ ಇದೆ.
-
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications