ICC Test Ranking: ಭಾರತದ ಯಾವ ವೇಗಿಯೂ ಮಾಡದ ಸಾಧನೆ ಮಾಡಿದ ಜಸ್ಪ್ರೀತ್ ಬುಮ್ರಾ
ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದ ನಂತರ ಜಸ್ಪ್ರೀತ್ ಬುಮ್ರಾ ವಿಶ್ವದ ನಂ 1 ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಮೊದಲ ಸ್ಥಾನದಲ್ಲಿದ್ದ ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವಿಶ್ವದ ನಂ 1 ಟೆಸ್ಟ್ ಬೌಲರ್ ಆಗಿದ್ದಾರೆ. ವೈಜಾಗ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ 9 ವಿಕೆಟ್ ಪಡೆದ ನಂತರ ಬುಮ್ರಾ ತನ್ನ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಬದಲಿಗೆ ಅಗ್ರಸ್ಥಾನವನ್ನು ಪಡೆದರು.

ಟೆಸ್ಟ್‌ನಲ್ಲಿ ಬುಮ್ರಾ ಮೊದಲ ಬಾರಿಗೆ ವಿಶ್ವದ ನಂ.1 ಬೌಲರ್ ಆಗಿದ್ದಾರೆ. ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಅಗ್ರ ಸ್ಥಾನಗಳನ್ನು ಪಡೆದ ಮೊದಲ ಏಷ್ಯನ್ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಏಷ್ಯಾದ ಮತ್ತೊಬ್ಬ ಆಟಗಾರ ವಿರಾಟ್ ಕೊಹ್ಲಿ. ಬುಮ್ರಾ ಟೆಸ್ಟ್‌ನಲ್ಲಿ ವಿಶ್ವ ನಂ 1 ಸ್ಥಾನ ಪಡೆದ ಮೊದಲ ಭಾರತೀಯ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.
ಎಲ್ಲಾ ಮಾದರಿಯಲ್ಲಿ ಶ್ರೇಷ್ಠ ಬೌಲರ್
ರವಿಚಂದ್ರನ್ ಅಶ್ವಿನ್ 841 ರೇಟಿಂಗ್ ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದರೆ, ಕಗಿಸೊ ರಬಾಡ 851 ರೇಟಿಂಗ್ ಪಾಯಿಂಟ್‌ಗಳೊಂದಿಗೆ 2ನೇ ಸ್ಥಾನಕ್ಕೆ ಏರಿದ್ದಾರೆ. ಜಸ್ಪ್ರೀತ್ ಬುಮ್ರಾ 881 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದ್ದಾರೆ.
ಅವರು ಬಹುಶಃ ಟೆಸ್ಟ್‌ನಲ್ಲಿ ವಿಶ್ವದ ನಂ 1 ಆಗಿದ್ದರೂ, ಏಕದಿನ ಮತ್ತು ಟಿ20 ಮಾದರಿಯಲ್ಲಿ ಅವರ ಬೌಲಿಂಗ್ ಪ್ರದರ್ಶನ ಅವರನ್ನು ಎಲ್ಲಾ-ಫಾರ್ಮ್ಯಾಟ್‌ನ ಶ್ರೇಷ್ಠ ಬೌಲರ್ ಎನಿಸಿಕೊಳ್ಳುವಂತೆ ಮಾಡುತ್ತವೆ.
ಟೆಸ್ಟ್ ಮಾದರಿಯಲ್ಲಿ 20.19 ಸರಾಸರಿ ಹೊಂದಿದ್ದರೆ, ಏಕದಿನ ಮತ್ತು ಟಿ20 ಮಾದರಿಗಳಲ್ಲಿ, ಅವರು ಕ್ರಮವಾಗಿ 23.55 ಮತ್ತು 19.66 ಸರಾಸರಿ ಹೊಂದಿದ್ದು, ಮಾರಕ ಬೌಲರ್ ಎನಿಸಿಕೊಂಡಿದ್ದಾರೆ.
ಬುಮ್ರಾಗೆ ಮೂರನೇ ಟೆಸ್ಟ್‌ನಲ್ಲಿ ವಿಶ್ರಾಂತಿ
ವಿಶಾಖಪಟ್ಟಣದಲ್ಲಿ ಭಾರತದ ಗೆಲುವಿಗೆ ಶಕ್ತಿ ತುಂಬಿದ ಹೊರತಾಗಿಯೂ, ಜಸ್ಪ್ರೀತ್ ಬುಮ್ರಾ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಐಪಿಎಲ್ 2024 ಮತ್ತು ಟಿ 20 ವಿಶ್ವಕಪ್ 2024 ಹತ್ತಿರವಾಗುತ್ತಿದ್ದು, ಬುಮ್ರಾ ಅವರ ಫಿಟ್‌ನೆಸ್ ತಂಡಕ್ಕೆ ಮುಖ್ಯವಾಗಿದೆ.
ಭಾರತದ ಕೆಲಸದ ಹೊರೆ ನಿರ್ವಹಣಾ ಯೋಜನೆಯ ಪ್ರಕಾರ, ಮೊಹಮ್ಮದ್ ಸಿರಾಜ್ ರಾಜ್‌ಕೋಟ್ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದು ಬುಮ್ರಾ ವಿಶ್ರಾಂತಿ ಪಡೆಯಬಹುದು, ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅವರು ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಇದೆ.












Click it and Unblock the Notifications