Jasprit Bumrah: ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯ, ದಿಢೀರನೆ ಮುಂಬೈಗೆ ಮರಳಿದ ಬುಮ್ರಾ: ಕಾರಣ ಇಲ್ಲಿದೆ
ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ದಿಢೀರನೆ ಮುಂಬೈಗೆ ವಾಪಸ್ ಮರಳಿದ್ದಾರೆ ಮತ್ತು ಸೋಮವಾರ (ಸೆಪ್ಟೆಂಬರ್ 4) ನಡೆಯಲಿರುವ ಭಾರತ - ನೇಪಾಳ ನಡುವಿನ ಏಷ್ಯಾ ಕಪ್ 2023 ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.
ಜಸ್ಪ್ರೀತ್ ಬುಮ್ರಾ ದಿಢೀರನೆ ಮುಂಬೈಗೆ ಮರಳಲು ಕಾರಣ ಸಿಕ್ಕಿದೆ, ಬುಮ್ರಾ ಮತ್ತು ಅವರ ಪತ್ನಿ ಸಂಜನಾ ಗಣೇಶನ್ ಶೀಘ್ರದಲ್ಲೇ ಮಗುವಿನ ನಿರೀಕ್ಷೆಯಲ್ಲಿದ್ದು, ಇದೇ ಕಾರಣಕ್ಕಾಗಿ ಅವರು ವಾಪಸಾಗಿದ್ದಾರೆ ಎಂದು ಹಲವು ಮೂಲಗಳು ವರದಿ ಮಾಡಿವೆ.

ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಗೋವಾದಲ್ಲಿ ಮದುವೆಯಾಗಿದ್ದರು. 2021ರ ಮಾರ್ಚ್ 15ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Many congratulations to Jasprit Bumrah and Sanjana Ganesan who are expecting the birth of their first child. pic.twitter.com/72F4Q723RI
— Mufaddal Vohra (@mufaddal_vohra) September 3, 2023
ಇತ್ತೀಚೆಗೆ ತಂಡಕ್ಕೆ ಮರಳಿದ್ದ ಬುಮ್ರಾ
ಬುಮ್ರಾ ಇತ್ತೀಚೆಗಷ್ಟೇ ಐರ್ಲೆಂಡ್ ಪ್ರವಾಸದ ವೇಳೆ ಮತ್ತೆ ಕ್ರಿಕೆಟ್‌ಗೆ ಮರಳಿದ್ದರು. ಐರ್ಲೆಂಡ್ ಪ್ರವಾಸದ ಸಮಯದಲ್ಲಿ ಯುವ ಭಾರತೀಯ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಭಾರತ ತಂಡಕ್ಕೆ ಹಿಂತಿರುಗುವ ಮೊದಲು ಸುಮಾರು ಒಂದು ವರ್ಷದ ಕ್ರಿಕೆಟ್ ಅನ್ನು ಬುಮ್ರಾ ಕಳೆದುಕೊಂಡಿದ್ದರು. ಅವರು ಐರಿಶ್ ತಂಡದ ವಿರುದ್ಧ ಸುಲಭವಾಗಿ ಸರಣಿ ಗೆಲ್ಲುವ ಮೂಲಕ ಬುಮ್ರಾ ಸರಣಿಯ ಆಟಗಾರರಾಗಿ ಆಯ್ಕೆಯಾದರು.
ಬುಮ್ರಾ ತಮ್ಮ ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತಿರುವ ಭಾರತ ತಂಡದ ಭಾಗವಾಗಿದ್ದರು. ಆದಾಗ್ಯೂ, ಭಾರತ ತಂಡ ಬ್ಯಾಟಿಂಗ್ ಮಾಡಲು ಮಾತ್ರ ಸಾಧ್ಯವಾಯಿತು, ಭಾರತದ ಇನ್ನಿಂಗ್ಸ್ ಮುಗಿದ ಬಳಿಕ ಮಳೆ ಹೆಚ್ಚಾದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು ಮತ್ತು ಉಭಯ ತಂಡಗಳಿಗೆ ಒಂದೊಂದು ಅಂಕ ಹಂಚಿಕೆ ಮಾಡಲಾಯಿತು.
ಸೋಮವಾರ ನಡೆಯಲಿರುವ ನೇಪಾಳ ವಿರುದ್ಧದ ಪಂದ್ಯವನ್ನು ಬುಮ್ರಾ ಕಳೆದುಕೊಳ್ಳಲಿದ್ದಾರೆ. ಮಾರ್ಕ್ಯೂ ಈವೆಂಟ್‌ನ ಸೂಪರ್ 4 ಹಂತಗಳಿಗೆ ಅರ್ಹತೆ ಪಡೆಯಲು ಭಾರತ ಈ ಪಂದ್ಯವನ್ನು ಗೆಲ್ಲಬೇಕಾಗಿದೆ. ಮಳೆಯಿಂದ ಪಂದ್ಯ ರದ್ದಾದರೂ ಭಾರತ ಸೂಪರ್ 4 ಹಂತಕ್ಕೆ ಪ್ರವೇಶಿಸಲಿದೆ. ಪಾಕಿಸ್ತಾನ ಈಗಾಗಲೇ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಶಮಿ ಆಡುವ ಸಾಧ್ಯತೆ
ಸೂಪರ್ 4 ಪಂದ್ಯಗಳ ವೇಳೆಗೆ ಬುಮ್ರಾ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ನೇಪಾಳ ವಿರಯದ್ಧದ ಪಂದ್ಯದಲ್ಲಿ ಬುಮ್ರಾ ಬದಲಾಗಿ ಮೊಹಮ್ಮದ್ ಶಮಿ ಆಡುವ ಸಾಧ್ಯತೆ ಇದೆ. ಶಮಿ ಅವರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದರು, ಶಾರ್ದೂಲ್ ಠಾಕೂರ್ ಪಾಕ್ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆದುಕೊಂಡಿದ್ದರು.












Click it and Unblock the Notifications