Bumrah: ಈ ತರ ಬೌಲಿಂಗ್ ಮಾಡುದ್ರೆ ಯಾರ್ ಆಡ್ತಾರೆ ಸಾ! ಸ್ಟೋಕ್ಸ್‌ ಬೌಲ್ಡ್ ಮಾಡಿದ್ದರ ಬಗ್ಗೆ ಬುಮ್ರಾ ಹೇಳಿದ್ದೇನು?

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಭಾರತ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಮೈದಾನದಲ್ಲಿ ಮಿಂಚು ಹರಿಸಿದರು.

ಯಾರ್ಕರ್, ಇನ್‌ಸ್ವಿಂಗ್, ಔಟ್‌ಸ್ವಿಂಗ್ ಮೂಲಕ ಆಂಗ್ಲರ ತಲೆಕೆಡಿಸಿದ ಬುಮ್ರಾ ಇಂಗ್ಲೆಂಡ್‌ ತಂಡ ಬ್ಯಾಟಿಂಗ್ ಪಡೆಯನ್ನೇ ಕಟ್ಟಿಹಾಕಿದರು. ಒಲೀ ಪೋಪ್, ಜೋ ರೂಟ್, ಬೈರ್‌ಸ್ಟೋ ಮತ್ತು ನಾಯಕ ಬೆನ್‌ಸ್ಟೋಕ್ಸ್‌ರನ್ನು ಔಟ್ ಮಾಡಿದ ರೀತಿ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದೆ. ಪೋಪ್‌ರನ್ನು ಯಾರ್ಕರ್ ಮೂಲಕ ಬೌಲ್ಡ್ ಮಾಡಿದ ಬುಮ್ರಾ ತಮ್ಮ ತಾಕತ್ತೇನು ಎಂದು ತೋರಿಸಿದರು.

 Jasprit Bumrah Decodes the Astonished Expression on Stokes Face Following Dismissal

ಅದಕ್ಕೂ ಹೆಚ್ಚು ಎನ್ನುವಂತೆ ಅಪಾಯಕಾರಿ ಬ್ಯಾಟರ್, ಇಂಗ್ಲೆಂಡ್ ತಂಡದ ನಾಯಕ ಬೆನ್‌ಸ್ಟೋಕ್‌ರನ್ನು ಔಟ್ ಮಾಡಿದ ರೀತಿ ಸಾಕಷ್ಟು ಗಮನ ಸೆಳೆಯುತ್ತಿದೆ. ವೇಗವಾಗಿ ಬಂದ ಚೆಂಡನ್ನು ರಕ್ಷಣಾತ್ಮಕವಾಗಿ ಆಡಲು ಬಯಸಿದ ಸ್ಟೋಕ್ಸ್‌ರನ್ನು ಯಾಮಾರಿಸಿದ ಚಂಡು ಸೀದಾ ಹೋಗಿ ವಿಕೆಟ್‌ಗೆ ಬಡಿಯಿತು. ಬೌಲ್ಡ್ ಆಗುತ್ತಿದ್ದಂತೆ ಸ್ಟೋಕ್ಸ್ ಬ್ಯಾಟ್‌ ಅನ್ನು ಕೈಬಿಟ್ಟು ಎರಡೂ ಕೈಗಳಿಂದ ಸನ್ನೆ ಮಾಡುತ್ತಾ ಅಸಹಾಯಕವಾಗಿ ಬುಮ್ರಾ ಕಡೆಗೆ ನೋಡಿದರು. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಸ್ಟೋಕ್ಸ್‌ ಔಟಾದ ಬಗ್ಗೆ ಬುಮ್ರಾ ಹೇಳಿದ್ದೇನು?

ಈ ತರ ಬೌಲಿಂಗ್ ಮಾಡುದ್ರೆ ಹೆಂಗ್ ಆಡೋದು ಅನ್ನೋ ಪ್ರಶ್ನೆ ಅವರಲ್ಲಿತ್ತಾ ಎನ್ನುವ ಭಾವ ಮೂಡುತ್ತದೆ. ಈ ಬಗ್ಗೆ ಸ್ವತಃ ಬುಮ್ರಾ ಕೂಡ ಮಾತನಾಡಿದ್ದಾರೆ. "ಸ್ಟೋಕ್ಸ್ ಏನು ಯೋಚಿಸುತ್ತಿದ್ದಾನೆಂದು ನನಗೆ ತಿಳಿದಿಲ್ಲ ಆದರೆ ನಾನು ಔಟ್‌ಸ್ವಿಂಗ್ ಮಾಡಲು ಪ್ರಯತ್ನಿಸಿದೆ ಆದರೆ ಚೆಂಡು ನೇರವಾಗಿ ಹೋಯಿತು, ಹಾಗಾಗಿ ಅವರು ಹೊಳಪನ್ನು ನೋಡಿರಬಹುದು ಮತ್ತು ಚೆಂಡು ದೂರ ಹೋಗುತ್ತದೆ ಎಂದು ನಾನು ಭಾವಿಸುತ್ತೇನೆ ಆದರೆ ಅದು ನೇರವಾಗಿ ಬಂದಿತು ಮತ್ತು ಬೌಲ್ಡ್ ಆಯಿತು" ಎಂದು ಹೇಳಿದ್ದಾರೆ

 Jasprit Bumrah Decodes the Astonished Expression on Stokes Face Following Dismissal

"ಆ ಕ್ಷಣದಲ್ಲಿ ಅವರು ಅಪಾಯಕಾರಿ ಬ್ಯಾಟ್ಸ್‌ಮನ್ ಎಂದು ನಮಗೆ ತಿಳಿದಿದೆ, ಅವರು ಕೆಳ ಕ್ರಮಾಂಕದೊಂದಿಗೆ ಬ್ಯಾಟ್ ಮಾಡುವಾಗ ಅವರು ಅಪಾಯಕಾರಿಯಾಗಿ ಬ್ಯಾಟ್ ಮಾಡುತ್ತಾರೆ ಮತ್ತು ಸಾಕಷ್ಟು ಅವಕಾಶಗಳನ್ನು ತೆಗೆದುಕೊಳ್ಳುತ್ತಾರೆ" ಎಂದು ಬುಮ್ರಾ ಹೇಳಿದರು.

ತಮ್ಮ ಬೌಲಿಂಗ್ ಮಾತನಾಡಿದ ಬುಮ್ರಾ, "ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ನೀವು ಭಾರತದಲ್ಲಿ ವಿಕೆಟ್ ಪಡೆಯಬೇಕಾದರೆ, ನೀವು ರಿವರ್ಸ್ ಸ್ವಿಂಗ್ ಬೌಲಿಂಗ್ ಮಾಡಲು ಕಲಿಯಬೇಕು. ಬಹುಶಃ, ನಾನು ಸಾಂಪ್ರದಾಯಿಕ ಸ್ವಿಂಗ್‌ಗಿಂತ ಮೊದಲು ರಿವರ್ಸ್ ಸ್ವಿಂಗ್ ಬೌಲ್ ಮಾಡಲು ಕಲಿತಿದ್ದೇನೆ ಏಕೆಂದರೆ ನೀವು ನಿಧಾನಗತಿಯ ವಿಕೆಟ್‌ಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡುತ್ತೀರಿ," ಎಂದು ಬುಮ್ರಾ ದೇಶೀಯ ಕ್ರಿಕೆಟ್‌ನ ಮಹತ್ವದ ಬಗ್ಗೆ ಹೇಳಿದರು.

"ನಾನು ಕೆಲವು ದೂರ ಹೋಗುವ ಎಸೆತಗಳನ್ನು ಬೌಲ್ ಮಾಡಿದ್ದೆ ಮತ್ತು ನಂತರ ನಾನು ಏನು ಬೌಲ್ ಮಾಡುತ್ತೇನೆ ಎಂಬ ಆಲೋಚನೆ ನನ್ನ ತಲೆಯಲ್ಲಿ ನಡೆಯುತ್ತಿತ್ತು? ನಾನು ಲೆಂಗ್ತ್ ಎಸೆತವನ್ನು ಬೌಲ್ ಮಾಡಬೇಕೇ ಅಥವಾ ನಾನು ಯಾರ್ಕರ್‌ಗೆ ಹೋಗಬೇಕೇ? ಆದರೆ ನಾನು ಯಾರ್ಕರ್ ಅನ್ನು ಬೌಲ್ ಮಾಡಲಿಲ್ಲ. ಅಲ್ಲಿಯವರೆಗೆ, ನಾನು ಸರಿ ಎಂದು ಯೋಚಿಸಿದೆ ಮತ್ತು ಅದರೊಂದಿಗೆ ಒಂದು ಅವಕಾಶವನ್ನು ತೆಗೆದುಕೊಳ್ಳುತ್ತದೆ ಮತ್ತು ಅದು ಬಹಳಷ್ಟು ಸ್ವಿಂಗ್ ಮಾಡಿತು. ಎಕ್ಸಿಕ್ಯೂಶನ್ ಚೆನ್ನಾಗಿತ್ತು, ಅದರಿಂದ ತುಂಬಾ ಸಂತೋಷವಾಯಿತು." ಎಂದಿದ್ದಾರೆ.

"ಟೆಸ್ಟ್ ಕ್ರಿಕೆಟ್ ನಿಮಗೆ ತಾಳ್ಮೆಯನ್ನು ಕಲಿಸುತ್ತದೆ, ಅಲ್ಲವೇ? ನೀವು ಆಗೊಮ್ಮೆ ಈಗೊಮ್ಮೆ ಮಾಂತ್ರಿಕ ಎಸೆತಗಳನ್ನು ಬೌಲ್ ಮಾಡಲು ಪ್ರಯತ್ನಿಸಿದಾಗ ಅದು ಕೆಲಸ ಮಾಡುವುದಿಲ್ಲ. ನೀವು ಎಲ್ಲವನ್ನೂ ಹೊಂದಿದ್ದರೂ ಸಹ ನೀವು ಒಂದು ನಿರ್ದಿಷ್ಟ ಸಮಯದಲ್ಲಿ ಎಲ್ಲವನ್ನೂ ಬಳಸುವ ಅಗತ್ಯವಿಲ್ಲ." ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+