Jasprit Bumrah: ಬೂಂ.. ಬೂಂ.. ಬುಮ್ರಾ... ಆಸ್ಟ್ರೇಲಿಯಾ ಛಿದ್ರ ಛಿದ್ರ!

ಆಸ್ಟ್ರೇಲಿಯಾ ತಂಡ ಭಾರತದ ಬೌಲಿಂಗ್ ದಾಳಿಯ ಎದುರು ಛಿದ್ರ ಛಿದ್ರವಾಗಿ ಹೋಗುತ್ತಿದೆ. 1ನೇ ಇನ್ನಿಂಗ್ಸ್‌ನಲ್ಲಿ 474 ರನ್ ಚಚ್ಚಿ ದಾಖಲೆ ಬರೆದಿದ್ದ ಆಸ್ಟ್ರೇಲಿಯಾ ತಂಡ, 2ನೇ ಇನ್ನಿಂಗ್ಸ್ ಮತ್ತಷ್ಟು ರನ್ ಹೊಳೆ ಹರಿಸುವ ನಿರೀಕ್ಷೆ ಇತ್ತು. ಈ ಮೂಲಕ ಭಾರತವನ್ನು ಸೋಲಿಸಿ & ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ನೇರ ಎಂಟ್ರಿ ಪಡೆಯುವ ಉತ್ಸಾಹದಲ್ಲಿ ಆಸ್ಟ್ರೇಲಿಯಾ ಇತ್ತು. ಆದರೆ ಆಸ್ಟ್ರೇಲಿಯಾ ತಂಡದ ಆಸೆ & ಕನಸನ್ನ ನಮ್ಮ ಬೂಂ.. ಬೂಂ.. ಬುಮ್ರಾ ಛಿದ್ರ ಛಿದ್ರ ಮಾಡಿಬಿಟ್ಟರು!

ಭಾರತ ತಂಡ ಇಂದು ಬೆಳಗ್ಗೆಯೇ 369 ರನ್‌ಗಳಿಗೆ ಆಲೌಟ್ ಆಗಿ ಆಸ್ಟ್ರೇಲಿಯಾ ಎದುರಲ್ಲಿ ಲೀಡ್ ನೀಡಿ ಶರಣಾಯಿತು. ನಂತರ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭವಾಗಿತ್ತು, ಆಗ ಆಸ್ಟ್ರೇಲಿಯಾ ತಂಡದ ದಾಂಡಿಗರು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. ಹೀಗಿದ್ದಾಗ 80 ರನ್‌ಗೆ ಆಸ್ಟೇಲಿಯಾ ತನ್ನ 3ನೇ ವಿಕೆಟ್ ಆಗಿ ಸ್ಟೀವ್ ಸ್ಮಿತ್‌ನ ಕಳೆದುಕೊಂಡಿತ್ತು. ಅಲ್ಲಿಂದಲೇ ನೋಡಿ ಶುರುವಾಯ್ತು ಮಹಾ ಪತನ, ಜಸ್ಪ್ರಿತ್ ಬುಮ್ರಾ ಹಾಕಿದ ಬಾಲ್‌ಗಳಿಗೆ ತರಗೆಲೆ ರೀತಿ ಉದುರಿ ಬಿದ್ದ ಆಸಿಸ್ ಆಟಗಾರರು 91 ರನ್‌ಗೆ 6 ವಿಕೆಟ್ ಕಳೆದುಕೊಂಡರು.

Jasprit Bumrah Bowling Skills Destroyed Australian Batting Line

4ನೇ ದಿನದಾಟದಲ್ಲಿ ಎಲ್ಲಾ ಉಲ್ಟಾ!

ಬಾರ್ಡರ್​ & ಗವಾಸ್ಕರ್​ ಟ್ರೋಫಿಯ ಇಂಡಿಯಾ & ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಈ ಮ್ಯಾಚ್ ಗೆಲ್ಲಬೇಕಾದ ಅನಿವಾರ್ಯತೆ ಎರಡೂ ತಂಡಗಳಿಗೆ ಇದ್ದು, 4ನೇ ಟೆಸ್ಟ್ ಪಂದ್ಯದ 4ನೇ ದಿನದಾಟ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು. ಆದರೆ ಆಸ್ಟ್ರೇಲಿಯಾ ತಂಡವು 4ನೇ ಟೆಸ್ಟ್ ಪಂದ್ಯದ 4ನೇ ದಿನದಾಟದ ಆರಂಭದಲ್ಲೇ ಕುಸಿತ್ತಿದೆ. ಇತ್ತೀಚೆಗೆ ಟೀ ವಿರಾಮ ತೆಗೆದುಕೊಂಡ ಸಮಯದಲ್ಲಿ, ಆಸ್ಟ್ರೇಲಿಯಾ ತಂಡವು 135 ರನ್ ಗಳಿಸಿದ್ದು 6 ವಿಕೆಟ್ ಕಳೆದುಕೊಂಡಿದೆ.

240 ರನ್ ಲೀಡ್ ಪಡೆದಿರುವ ಆಸ್ಟ್ರೇಲಿಯಾ

ಈವರೆಗೂ ಆಸ್ಟ್ರೇಲಿಯಾ ತಂಡ ಒಟ್ಟಾರೆ 240 ರನ್ ಲೀಡ್ ಪಡೆದಿದ್ದು, ಇನ್ನೂ 4 ವಿಕೆಟ್ ಆಸಿಸ್ ಕೈಯಲ್ಲಿ ಇರುವ ಕಾರಣಕ್ಕೆ 300 ರನ್ ಗಡಿ ದಾಟುವ ನಿರೀಕ್ಷೆ ಇದೆ. ಮತ್ತೊಂದ್ಕಡೆ, ಭಾರತ ತಂಡ ಕೂಡ ಆದಷ್ಟು ಬೇಗ ಆಸಿಸ್ ಪಡೆಯನ್ನ ಮನೆಗೆ ಕಳಿಸಲು ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.

ಭಾರತದ ಪರವಾಗಿ ಇದುವರೆಗೂ ಜಸ್ಪ್ರಿತ್ ಬುಮ್ರಾ ಅವರು 14 ಓವರ್ ಎಸೆದಿದ್ದು, ಭರ್ಜರಿ 4 ವಿಕೆಟ್ ಉರುಳಿಸಿ 30 ರನ್ ನಿಡಿದ್ದಾರೆ. ಮತ್ತೊಂದು ಕಡೆ ಮೊಹಮ್ಮದ್ ಸಿರಾಜ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದು, 14 ಓವರ್ ಎಸೆದು 2 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಆಟ ಸಾಕಷ್ಟು ಕುತೂಹಲದ ಘಟ್ಟ ತಲುಪಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+