Jasprit Bumrah: ಇದೇ ಕಾರಣಕ್ಕೆ ಜಸ್ಪ್ರೀತ್ ಬುಮ್ರಾ ಜಗತ್ತಿನ ಬೆಸ್ಟ್ ಬೌಲರ್!
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾರ ಏಕಾಂಗಿ ಹೋರಾಟ ಮುಂದುವರೆದಿದೆ. ಆಸ್ಟ್ರೇಲಿಯಾ ಬ್ಯಾಟರ್ ಗಳನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಅವರು, ಭಾರತದ ಭರವಸೆಯಾಗಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ 4 ವಿಕೆಟ್ ಪಡೆದುಕೊಂಡಿದ್ದಾರೆ. ಟ್ರಾವಿಸ್ ಹೆಡ್ ವಿಕೆಟ್ ಪಡೆದ ಬುಮ್ರಾ ಟೆಸ್ಟ್ ಕ್ರಿಕಟ್ ನಲ್ಲಿ ಹೊಸ ದಾಖಲೆ ನಿರ್ಮಿಸಿದರು.
ತಮ್ಮ 44ನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 200 ವಿಕೆಟ್ ಪಡೆದ ಸಾಧನೆ ಮಾಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ಭಾರತದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಕಪಿಲ್ ದೇವ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಕಪಿಲ್ ದೇವ್ ತಮ್ಮ 50ನೇ ಟೆಸ್ಟ್ ಪಂದ್ಯದಲ್ಲಿ 200 ವಿಕೆಟ್ ಪಡೆದಿದ್ದರೆ ಬುಮ್ರಾ ಕೇವಲ 44 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ 28.4 ಓವರ್ ಗಳಲ್ಲಿ 99 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ 4 ವಿಕೆಟ್ ಪಡೆದಿದ್ದು ಆಸ್ಟ್ರೇಲಿಯಾಗೆ ಆಘಾತ ನೀಡಿದರು. ಸ್ಯಾಮ್ ಕೋನ್‌ಸ್ಟಾಸ್ ವಿಕೆಟ್ ಪಡೆದ 199 ವಿಕೆಟ್ ಪಡೆದರೆ, ಟ್ರಾವಿಸ್ ಹೆಡ್‌ರ ವಿಕೆಟ್ ಪಡೆದು 200 ವಿಕೆಟ್ ಪಡೆದ ಸಾಧನೆ ಮಾಡಿದರು. ಬಳಿಕ ಮಿಚೆಲ್ ಮಾರ್ಷ್ ಮತ್ತು ಅಲೆಕ್ಸ್ ಕೇರಿ ವಿಕೆಟ್ ಪಡೆದು ಮಿಂಚಿದರು.
ಕಪಿಲ್‌ದೇವ್‌ರ ಮತ್ತೊಂದು ದಾಖಲೆ ಮುರಿದ ಬುಮ್ರಾ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಈವರೆಗೂ 29 ವಿಕೆಟ್ ಪಡೆದಿರು ಬುಮ್ರಾ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿಕೊಂಡರು. 1991-92 ರಲ್ಲಿ ಕಪಿಲ್ ದೇವ್ 25 ವಿಕೆಟ್ ಪಡೆದಿದ್ದು ಈವರೆಗಿನ ದಾಖಲೆಯಾಗಿತ್ತು. 2018-19 ರಲ್ಲಿ ಬುಮ್ರಾ 21 ವಿಕೆಟ್ ಪಡೆದಿದ್ದು ಎರಡನೇ ಸ್ಥಾನದಲ್ಲಿದ್ದರು ಆದರೆ ಈ ಬಾರಿ ಕಪಿಲ್‌ದೇವ್‌ರ ದಾಖಲೆಯನ್ನು ಮೀರಿ ಮೊದಲ ಸ್ಥಾನಕ್ಕೆ ಬಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ ಭಾರತದ 12ನೇ ಬೌಲರ್ ಬುಮ್ರಾ. ಟೆಸ್ಟ್ ಕ್ರಿಕೆಟ್‌ನಲ್ಲಿ 200 ಕ್ಕಿಂತ ಹೆಚ್ಚು ವಿಕೆಟ್ ಪಡೆದ ವಿಶ್ವದ ಎಲ್ಲಾ ಬೌಲರ್ ಗಳ ಪೈಕಿ ಬುಮ್ರಾ ಮಾತ್ರ 20 ಕ್ಕಿಂತ ಕಡಿಮೆ ಸರಾಸರಿ ಹೊಂದಿರುವ ಬೌಲರ್ ಆಗಿದ್ದಾರೆ. ವೆಸ್ಟ್ ಇಂಡೀಸ್ ಮಾಲ್ಕಮ್ ಮಾರ್ಷಲ್ 20.94 ಸರಾಸರಿಯಲ್ಲಿ 376 ವಿಕೆಟ್ ಪಡೆದು ಉತ್ತಮ ಸರಾಸರಿ ಹೊಂದಿದ್ದರು. ಬುಮ್ರಾ 19.5 ಸರಾಸರಿಯಲ್ಲಿ 200 ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದಾರೆ.












Click it and Unblock the Notifications