Jasprit Bumrah: ಗಂಡು ಮಗುವಿನ ತಂದೆಯಾದ ಜಸ್ಪ್ರಿತ್ ಬುಮ್ರಾ-ಸಂಜನಾ : ಮಗುವಿಗೆ ರಾಮಾಯಣದ ಪಾತ್ರದ ಹೆಸರಿಟ್ಟ ದಂಪತಿ!
ಭಾರತ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ತಂದೆಯಾದ ಖುಷಿಯಲ್ಲಿದ್ದಾರೆ. ಸೋಮವಾರ ಬುಮ್ರಾ-ಸಂಜನಾ ದಂಪತಿಗೆ ಗಂಡು ಮಗು ಹುಟ್ಟಿದ್ದು, ಈ ವಿಚಾರವನ್ನು ಜಸ್ಪ್ರಿತ್ ಬುಮ್ರಾ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಏಷ್ಯಾಕಪ್ 2023ರ ಪಂದ್ಯಾವಳಿಯಲ್ಲಿ ಆಡಲು ಶ್ರೀಲಂಕಾಗೆ ತೆರಳಿದ್ದ ಬುಮ್ರಾ, ಪಾಕಿಸ್ತಾನದ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಬಳಿಕ, ಭಾನುವಾರ ಮುಂಬೈಗೆ ವಾಪಸಾಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬುಮ್ರಾ-ಸಂಜನಾ ದಂಪತಿಗೆ ಗಂಡು ಮಗು ಜನಿಸಿದೆ. ಮಗುವಿಗೆ ಅಂಗದ ಜಸ್ಪಿತ್ ಬುಮ್ರಾ ಎಂದು ನಾಮಕರಣ ಮಾಡಲಾಗಿದೆ.

"ನಮ್ಮ ಪುಟ್ಟ ಕುಟುಂಬ ಬೆಳೆದಿದೆ ಮತ್ತು ನಮ್ಮ ಹೃದಯಗಳು ನಾವು ಊಹಿಸಿಕೊಳ್ಳುವುದಕ್ಕಿಂತ ತುಂಬಿವೆ! ಇಂದು ಬೆಳಿಗ್ಗೆ ನಾವು ನಮ್ಮ ಪುಟ್ಟ ಹುಡುಗ ಅಂಗದ್ ಜಸ್ಪ್ರೀತ್ ಬುಮ್ರಾ ಅವರನ್ನು ಜಗತ್ತಿಗೆ ಸ್ವಾಗತಿಸಿದೆವು. ನಾವು ಚಂದ್ರನ ಮೇಲಿದ್ದೇವೆ ಮತ್ತು ನಮ್ಮ ಜೀವನದ ಈ ಹೊಸ ಅಧ್ಯಾಯವು ಅದರೊಂದಿಗೆ ತರುವ ಎಲ್ಲದಕ್ಕೂ ಕಾತರದಿಂದ ಕಾಯುತ್ತಿದ್ದೇವೆ. ಜಸ್ಪ್ರೀತ್ ಮತ್ತು ಸಂಜನಾ" ಎಂದು ಬುಮ್ರಾ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Our little family has grown & our hearts are fuller than we could ever imagine! This morning we welcomed our little boy, Angad Jasprit Bumrah into the world. We are over the moon and can’t wait for everything this new chapter of our lives brings with it ❤️ - Jasprit and Sanjana pic.twitter.com/j3RFOSpB8Q
— Jasprit Bumrah (@Jaspritbumrah93) September 4, 2023
ರಾಮಾಯಣದ ಪಾತ್ರದ ಹೆಸರು!
ಅಂಗದ ಎನ್ನುವುದು ರಾಮಾಯಣದಲ್ಲಿ ಬರುವ ಒಂದು ಪಾತ್ರದ ಹೆಸರಾಗಿದೆ. ವಾಲಿಯ ಮಗ ಅಂಗದ ಎಂದು ಪುರಾಣದಲ್ಲಿ ದಾಖಲಿಸಲಾಗಿದೆ. ಇದೇ ಹೆಸರನ್ನು ಬುಮ್ರಾ ತಮ್ಮ ಪುತ್ರನಿಗೆ ಇಟ್ಟಿದ್ದಾರೆ. "ಅಂಗದ ರಾಮಾಯಣದಲ್ಲಿ ಒಂದು ಪಾತ್ರ. ಇವನು ರಾಮನಿಗೆ ಸೀತೆಯನ್ನು ಹುಡುಕಲು ಹಾಗೂ ರಾವಣನೊಂದಿಗಿನ ಯುದ್ಧದಲ್ಲಿ ಸಹಾಯ ಮಾಡಿದವನು. ಇವನು ವಾನರ ರಾಜ ವಾಲಿಯ ಮಗ. ಸುಗ್ರೀವ ಇವನ ಚಿಕ್ಕಪ್ಪ. ಮುಂದೆ ಇವನು ಯುದ್ಧದಲ್ಲಿ ರಾವಣನ ಮಗ ನರಾಂತಕನನ್ನು ಕೊಲ್ಲುತ್ತಾನೆ." ಎಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ.
ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯ!
ಸೋಮವಾರ ಭಾರತ ತಂಡ ಏಷ್ಯಾಕಪ್ 2023ರ ಪಂದ್ಯಾವಳಿಯಲ್ಲಿ ನೇಪಾಳ ವಿರುದ್ಧ ಸೆಣೆಸಲಿದೆ. ಇದು ಎ ಗುಂಪಿನ ಕೊನೆಯ ಲೀಗ್ ಪಂದ್ಯವಾಗಿದೆ. ಪಾಕಿಸ್ತಾನ ಈಗಾಗಲೇ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ, ಅಥವಾ ಮಳೆಯಿಂದ ಪಂದ್ಯ ರದ್ದಾದರೆ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿದೆ. ಇಂದಿನ ಪಂದ್ಯಕ್ಕೆ ಬುಮ್ರಾ ಅಲಭ್ಯರಾಗಿದ್ದು, ಸೂಪರ್ 4 ಹಂತದ ಪಂದ್ಯಗಳ ವೇಳೆಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಬುಮ್ರಾ ಒಂದು ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದರು. ಟಿ20 ವಿಶ್ವಕಪ್ ಪಂದ್ಯಾವಳಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಾವಳಿ ಕೂಡ ಕಳೆದುಕೊಂಡಿದ್ದರು. ಸದ್ಯ ಸಂಪೂರ್ಣವಾಗಿ ಫಿಟ್ ಆಗಿರುವ ಅವರು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ನಾಯಕತ್ವ ವಹಿಸಿದ್ದಲ್ಲದೆ, ಸರಣಿ ಗೆದ್ದಿದ್ದರು. ಸದ್ಯ ಏಷ್ಯಾಕಪ್‌ನಲ್ಲಿ ಮಿಂಚಲು ತಯಾರಾಗಿದ್ದು, ಏಕದಿನ ವಿಶ್ವಕಪ್‌ನಲ್ಲಿ ಕೂಡ ಮ್ಯಾಜಿಕ್ ಮಾಡುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications