ಕುಚಿಕು.. ಕುಚಿಕು.. ವಿರಾಟ್ ಕೊಹ್ಲಿ & ಇಶಾಂತ್ ಶರ್ಮಾಗೆ ಫುಲ್ ಜೋಶ್!

ವಿರಾಟ್ ಕೊಹ್ಲಿ ಯಾವತ್ತಿದ್ರೂ ಸ್ನೇಹಕ್ಕೆ ಭಾರಿ ಗೌರವ ಕೊಡ್ತಾರೆ. ಒಬ್ಬರ ಜೊತೆಗೆ ಸ್ನೇಹ ಸಂಬಂಧ ಬೆಸೆದರೆ ವಿರಾಟ್ ಕೊಹ್ಲಿ ಕೊನೆಯವರೆಗೂ ಅದನ್ನ ಮರೆಯೋದಿಲ್ಲ. ಹೀಗಾಗಿ, ವಿರಾಟ್ ಕೊಹ್ಲಿ ಜೊತೆ ಸಾಕಷ್ಟು ಪ್ರಾಣ ಸ್ನೇಹಿತರು ಇದ್ದಾರೆ. ಅದೇ ರೀತಿ ಇಶಾಂತ್ ಶರ್ಮಾ ಕೂಡ ವಿರಾಟ್ ಕೊಹ್ಲಿಗೆ ಆಪ್ತರಾಗಿದ್ದು ಇವರಿಬ್ಬರ ಸ್ನೇಹಕ್ಕೆ ನಿನ್ನೆಯ ಮ್ಯಾಚ್ ಸಾಕ್ಷಿಯಾಗಿತ್ತು ಹಾಗಾದ್ರೆ ನಿನ್ನೆ ನಡೆದಿದ್ದು ಏನು? ಈಗ ಸೋಷಿಯಲ್ ಮೀಡಿಯಾದಲ್ಲಿ ಜನ ಏನ್ ಹೇಳ್ತಾ ಇದ್ದಾರೆ? ಬನ್ನಿ ತಿಳಿಯೋಣ.

ಅಷ್ಟಕ್ಕೂ ನಿನ್ನೆ ಆರ್‌ಸಿಬಿ ಬೆಂಗಳೂರು ಹಾಗೂ ದೆಹಲಿ ತಂಡಗಳ ನಡುವೆ ಭರ್ಜರಿ ಪಂದ್ಯ ನಡೆದಿತ್ತು. ಆರ್‌ಸಿಬಿ ತಂಡ ಭರ್ಜರಿ ಗೆಲುವು ಕೂಡ ಸಾಧಿಸಿತ್ತು. ಹೀಗಿದ್ದಾಗ ಇದೇ ಪಂದ್ಯ ವಿರಾಟ್ ಕೊಹ್ಲಿ ಹಾಗೂ ಇಶಾಂತ್ ಶರ್ಮಾ ನಡುವಿನ ಸ್ನೇಹ ಬಂಧಕ್ಕೂ ಸಾಕ್ಷಿಯಾಗಿತ್ತು. ಒಂದು ಕ್ಷಣ ಇಶಾಂತ್ ಶರ್ಮಾ ಅವರು ವಿರಾಟ್ ಕೊಹ್ಲಿ ಜೊತೆಗೆ ನಡೆದುಕೊಂಡಿದ್ದ ರೀತಿ ಇಡೀ ಕ್ರಿಕೆಟ್ ಮೈದಾನವನ್ನೇ ಸೈಲೆಂಟ್ ಮಾಡಿಬಿಟ್ಟಿದ್ದು, ಯಾಕೆ ಗೊತ್ತಾ?

Ishant Sharma And Virat Kohli Video Is Getting Viral

ಇಶಾಂತ್ ಶರ್ಮಾ ಬೌಲಿಂಗ್ ಮಾಡಲು ಬಂದಾಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡ್ತಿದ್ರು. ಈ ಸಮಯದಲ್ಲಿ ಇಬ್ಬರ ನಡುವೆ ಕಿರಿಕ್ ಶುರುವಾಯ್ತು. ಇಬ್ಬರೂ ಕೀಟಲೆ ಮತ್ತು ತಮಾಷೆ ಮಾಡುತ್ತಾ ಆಟ ಶುರು ಮಾಡಿದರು. ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ತನ್ನ ಗೆಳೆಯ ಇಶಾಂತ್ ಶರ್ಮಾ ಅವರ ಬೌಲಿಂಗ್‌ಗೆ ಭರ್ಜರಿ ಬೌಂಡರಿ & ಸಿಕ್ಸರ್ ಬಾರಿಸಿದರು. ಮುಂದೆ ಆಗಿದ್ದೇ ಇತಿಹಾಸ!

ವಿರಾಟ್ ಹೊಟ್ಟೆಗೆ ಗುದ್ದಿದ ಶರ್ಮಾ!

ಹೀಗೆ ಇಶಾಂತ್ ಶರ್ಮಾ ಒಂದು ಕ್ಷಣ ವಿರಾಟ್ ಕೊಹ್ಲಿ ಹೊಡೆತಕ್ಕೆ ಥಂಡಾ ಆಗಿದ್ದರು. ಈ ಸಮಯದಲ್ಲಿ ತನ್ನ ಬೌಲಿಂಗ್ ಶೈಲಿ ಬದಲಾವಣೆ ಮಾಡಿದ ಇಶಾಂತ್ ಶರ್ಮಾ ರಣತಂತ್ರ, ಕುತಂತ್ರ ಹೂಡಿ ಬಾಲ್ ಎಸೆದರು. ಕೊನೆಗೆ ವಿರಾಟ್ ಕೊಹ್ಲಿ ಅವರು ಈ ಬಾಲ್‌ನ ಕೂಡ ಬಾರಿಸಲು ಹೋಗಿ, ಸ್ಲಿಪ್ ಅಲ್ಲಿ ಕೀಪರ್‌ಗೆ ಕ್ಯಾಚ್ ಕೊಟ್ಟು ಔಟಾದರು. ಈ ವೇಳೆ ವಿರಾಟ್ ಕೊಹ್ಲಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಆಗ ಓಡೋಡಿ ಕೊಹ್ಲಿ ಕಡೆಗೆ ಬಂದವರೇ ಇಶಾಂತ್ ಶರ್ಮಾ, ವಿರಾಟ್ ಕೊಹ್ಲಿ ಹೊಟ್ಟೆಗೆ ಮೊಣಕೈನಿಂದ ತಮಾಷೆಗೆ ಗುದ್ದಿದರು. ಈ ಸೀನ್ ನೋಡಿ ಇಡೀ ಕ್ರಿಕೆಟ್ ಮೈದಾನ ಫುಲ್ ಸೈಲೆಂಟ್!

ಅಭಿಮಾನಿಗಳಿಗೆ ದಿಢೀರ್ ಆಘಾತ!

ಅಷ್ಟಕ್ಕೂ ಇಶಾಂತ್ ಶರ್ಮಾ & ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಆರಂಭಕ್ಕೆ ಮೊದಲೇ ಪ್ರಾಣ ಸ್ನೇಹಿತರು. ಇಬ್ಬರೂ ಅಷ್ಟೇ ಮೊದಲಿನಿಂದ ಕೂಡ ಇದೇ ರೀತಿ ಕಿರಿಕ್ & ತಮಾಷೆ ಮಾಡುತ್ತಾ ಬಂದಿದ್ದವರು. ನಿನ್ನೆ ದೆಹಲಿ ಮತ್ತು ಬೆಂಗಳೂರು ನಡುವೆ ಪಂದ್ಯವು ನಡೆಯುವ ಸಮಯದಲ್ಲಿ ಕೂಡ, ಇದೇ ರೀತಿಯಾಗಿ ತಮಾಷೆ ಮಾಡುತ್ತಾ ಕುಣಿದಾಡಿದರು. ಈ ವೇಳೆ ಅಭಿಮಾನಿಗಳಿಗೆ ಕೂಡ ಮ್ಯಾಟರ್ ಗೊತ್ತಾಯ್ತು. ವಿರಾಟ್ ಕೊಹ್ಲಿ & ಇಶಾಂತ್ ಶರ್ಮಾ ಈ ರೀತಿ ಮಾಡಿದ್ದು ತಮಾಷೆಗೆ ಅಂತಾ ಗೊತ್ತಾಯ್ತು. ಆಗ ಅಭಿಮಾನಿಗಳು ಫುಲ್ ಜೋಶ್‌ನಲ್ಲಿ ಕಿರುಚಾಡಿ ಕುಣಿದಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+