ಇದೇ ಮನೆಯಲ್ಲೇ ಅಥಿಯಾ- ಕೆಎಲ್ ರಾಹುಲ್ ಮದುವೆ ಸಂಭ್ರಮ

ಮುಂಬೈ, ಸೆ.6: ಕನ್ನಡಿಗ ಕೆಎಲ್ ರಾಹುಲ್, ಬಾಲಿವುಡ್‌ನ ಸ್ಟಾರ್ ನಟ, ಕನ್ನಡಿಗ ಸುನೀಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಮದುವೆ ಬಗ್ಗೆ ಮತ್ತೆ ಸುದ್ದಿ ಹಬ್ಬಿದೆ. ಇವರಿಬ್ಬರ ಮದುವೆ ಬಗ್ಗೆ ಹಲವು ತಿಂಗಳುಗಳಿಂದ ವಿವಿಧ ಸುದ್ದಿಗಳು ಕೇಳಿ ಬರುತ್ತಲೇ ಇದೆ, ಆದರೆ ಈಗ ಸ್ಟಾರ್ ಜೋಡಿಗಳ ಮದುವೆ ಬಗ್ಗೆ ಅಥಿಯಾ ಶೆಟ್ಟಿ ತಂದೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಇತ್ತೀಚೆಗೆ ಮಾತನಾಡಿದ್ದರು. ಈಗ ಮುಂಬೈನ ಸುನಿಲ್ ಶೆಟ್ಟಿ ಮನೆಯಲ್ಲೇ ಮದುವೆ ಸಂಭ್ರಮ ಮನೆಮಾಡಲಿದೆ ಎಂಬ ಸುದ್ದಿ ಬಂದಿದೆ.

ಕೆ.ಎಲ್.ರಾಹುಲ್ ಮುಂದಿನ ದಿನಗಳಲ್ಲಿ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಸದ್ಯ ಅವರಿಗೆ ಮದುವೆಗೆ ಸಮಯವಿಲ್ಲ. ಏಷ್ಯಾಕಪ್ ಪಂದ್ಯಾವಳಿಯಲ್ಲಿ ಆರಂಭಿಕರಾಗಿ ಆಡುತ್ತಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಲು ಸಜ್ಜಾಗಬೇಕಿದೆ. ಪೂರ್ಣ ಪ್ರಮಾಣದಲ್ಲಿ ಲಯ ಕಂಡುಕೊಳ್ಳದ ರಾಹುಲ್ ಆಟದ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಡುವು ಮಾಡಿಕೊಂಡು ಮದುವೆಗೆ ಸಜ್ಜಾಗುತ್ತಾರಾ ಎಂಬುದು ಯಕ್ಷ ಪ್ರಶ್ನೆ.

ಆದರೆ, ಬಾಲಿವುಡ್ ಲೋಕದಲ್ಲಿ ಈ ವಿವಾಹದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಈ ವರ್ಷದ ಅಂತ್ಯದ ವೇಳೆಗೆ ಅಥವಾ ಜನವರಿ ಮೊದಲ ವಾರದಲ್ಲಿ ಮದುವೆಯಾಗಬಹುದು ಎಂದು ಬಾಲಿವುಡ್ ಸುದ್ದಿ ವೆಬ್ ಸೈಟ್ ವರದಿ ಮಾಡಿದೆ. ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ, ಖಂಡಾಲಾದಲ್ಲಿರುವ ತನ್ನ ತಂದೆಯ ಮನೆಯಲ್ಲಿ ಭಾರತೀಯ ಕ್ರಿಕೆಟಿಗ ರಾಹುಲ್ ಜೊತೆ ಮದುವೆಯಾಗಲಿದ್ದಾರೆ ಎಂದು ವರದಿ ಬಂದಿವೆ.

 Athiya Shetty-KL Rahul’s wedding venue

ಸುನೀಲ್ ಮತ್ತು ಮನ ಶೆಟ್ಟಿ ಖಂಡಾಲಾದಲ್ಲಿ 'ಜಹಾನ್' ಎಂಬ ಸುಂದರವಾದ ಆಸ್ತಿಯನ್ನು ಹೊಂದಿದ್ದಾರೆ, ಇದು ಕುಟುಂಬದ ಹೃದಯಕ್ಕೆ ಅತ್ಯಂತ ಹತ್ತಿರವಾಗಿದೆ. 17 ವರ್ಷಗಳ ಹಿಂದೆ ದಂಪತಿಗಳು ನಿರ್ಮಿಸಿದ್ದರಿಂದ ಮನೆ ಹಸಿರು ಮತ್ತು ಬಾಂಧವ್ಯವನ್ನು ಹೊಂದಿದೆ. ಪಿಂಕ್ವಿಲ್ಲಾದಲ್ಲಿನ ವರದಿಯ ಪ್ರಕಾರ, ಮುಂಬೈ ನಗರದ ಗದ್ದಲದಿಂದ ದೂರವಿರುವ ಅಥಿಯಾ ಮತ್ತು ಕೆಎಲ್ ಈ ಮನೆಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ರಾಹುಲ್ ಕ್ರಿಕೆಟ್ ಕ್ಯಾಲೆಂಡರ್ ನೋಡಿಕೊಂಡು ಮದುವೆಗೆ ನಿಖರವಾದ ದಿನಾಂಕಗಳನ್ನು ನಿಗದಿ ಮಾಡಲಾಗುತ್ತದೆ.

"ಅಥಿಯಾ ಶೆಟ್ಟಿ ಇನ್ನೂ ಚಿಕ್ಕ ಹುಡುಗಿ ಎಂದು ಭಾವಿಸುತ್ತಾಳೆ, ಮದುವೆಗೆ ಇನ್ನೂ ಮಾನಸಿಕವಾಗಿ ಸಿದ್ಧವಾಗಬೇಕು. ರಾಹುಲ್‌ ಕ್ರಿಕೆಟ್‌ನಿಂದ ವಿರಾಮ ಪಡೆಯಬೇಕು. ಯಾವಾಗ ಮದುವೆಯಾಗಬೇಕು ಎನ್ನುವುದನ್ನು ಮಕ್ಕಳು ನಿರ್ಧರಿಸುತ್ತಾರೆ. ರಾಹುಲ್ ವೇಳಾಪಟ್ಟಿಯಲ್ಲಿ ಕೇವಲ 1-2 ದಿನಗಳ ವಿರಾಮವಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಮದುವೆಯಾಗಲು ಸಾಧ್ಯವಿಲ್ಲ, ಸಾಕಷ್ಟು ಸಮಯ ಇದ್ದಾಗ ಮದುವೆಗೆ ದಿನಾಂಕ ನಿಗದಿ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

KL Rahul’s wedding venue

ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಕಳೆದ ವರ್ಷ ಅಹಾನ್ ಶೆಟ್ಟಿ ಅವರ ಮೊದಲ ಚಿತ್ರ ತಡಪ್ ಬಿಡುಗಡೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೆ.ಎಲ್ ರಾಹುಲ್ ಆಡುವ ಕ್ರಿಕೆಟ್ ಪಂದ್ಯಗಳಲ್ಲಿ ಸುನಿಲ್ ಶೆಟ್ಟಿ ಕೂಡ ಕಾಣಿಸಿಕೊಳ್ಳುವ ಮೂಲಕ ಮಗಳ ಪ್ರೇಮ್ ಕಹಾನಿಗೆ ಒಪ್ಪಿಗೆ ನೀಡಿದ್ದರು. ಆಗಾಗ್ಗೆ, ಇವರಿಬ್ಬರ ಮದುವೆ ವಿಚಾರ ಮುನ್ನಲೆಗೆ ಬರುತ್ತಲೇ ಇರುತ್ತದೆ. ಇದೇ ವರ್ಷ ಇಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ವರ್ಷ ಇವರಿಬ್ಬರ ಮದುವೆ ಬಹುತೇಕ ಅನುಮಾನ ಎಂದೇ ಹೇಳಲಾಗಿದೆ.

ಏಷ್ಯಾಕಪ್ ಮುಗಿದ ನಂತರ, ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ತಯಾರಿ ನಡೆಸಲಿದೆ. ಬಿಡುವಿರದ ವೇಳಾಪಟ್ಟಿಯಲ್ಲಿ ಭಾರತ ಕ್ರಿಕೆಟ್ ಆಡುವುದರಿಂದ, ರಾಹುಲ್ ಮದುವೆಗೆ ಸಮಯ ಸಿಗುವುದು ಕಷ್ಟ ಎನ್ನಲಾಗಿದೆ.

ಇತ್ತೀಚೆಗೆ ಬಾಂದ್ರಾ ಪ್ರದೇಶದಲ್ಲಿ ಐಷಾರಾಮಿ 4 ಬೆಡ್‌ರೂಂ ಅಪಾರ್ಟ್‌ಮೆಂಟ್ ಬಾಡಿಗೆ ಪಡೆದಿದ್ದು, ಇಬ್ಬರ ಅಭಿರುಚಿಗೆ ತಕ್ಕಂತೆ ಒಳಾಂಗಣ ವಿನ್ಯಾಸ ಮಾಡಿಸಲಾಗಿದೆ. ಅಥಿಯಾ ಪೋಷಕರಾರ ಸುನಿಲ್ ಶೆಟ್ಟಿ ಮತ್ತು ಮನ ಶಟ್ಟಿ ಕಳೆದ ತಿಂಗಳು ಆತ್ಮೀಯರ ಸಮ್ಮುಖದಲ್ಲಿ ನೂತನ ಅಪಾರ್ಟ್‌ಮೆಂಟ್‌ನ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+