IPL 2025: ಭಾರತದ ಕ್ರೀಡಾ ಕ್ಷೇತ್ರಕ್ಕೆ ಹೊಸ ಹೊಳಪು ನೀಡುತ್ತಿದೆ ‘ಐಪಿಎಲ್’ ಟೂರ್ನಿ!!

ಭಾರತ ಅಂದ್ರೆ ಕ್ರಿಕೆಟ್, ಕ್ರಿಕೆಟ್‌ಗೆ ಮತ್ತೊಂದು ಹೆಸರೇ ಭಾರತ ಎನ್ನುವ ವಾತಾವರಣ ಇದೆ. ಯಾಕಂದ್ರೆ ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್ ಎಂಬ ಆಂಗ್ಲರ ನಾಡಲ್ಲೇ ಆಗಿದ್ದರೂ, ಅದನ್ನು ಭಾರತವೇ ಫೇಮಸ್ ಮಾಡಿದೆ. ನೂರಾರು ಕೋಟಿ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡ್ತಾರೆ. ಇಂತಿಪ್ಪ ಭಾರತೀಯ ಕ್ರಿಕೆಟ್‌ಗೆ ' ಐಪಿಎಲ್' ಕ್ರೀಡಾಕೂಟ ಹೊಸ ಹೊಳಪು ನೀಡಿದ್ದು, ಭಾರತದ ಕ್ರೀಡಾಲೋಕಕ್ಕೆ ಕೂಡ 'ಐಪಿಎಲ್' ಕೊಡುಗೆ ದೊಡ್ಡದು. ಅದ್ರಲ್ಲೂ 2025ರ ಐಪಿಎಲ್ ಟೂರ್ನಿ ಹರಾಜು ಪ್ರಕ್ರಿಯೆ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ!

ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿ ಬದಲಾಗಿದ್ದು ಕಪಿಲ್ ದೇವ್ & ತಂಡ ವಿಶ್ವಕಪ್ ಗೆದ್ದ ನಂತರ. 1983ರ ಕ್ರಿಕೆಟ್ ವಿಶ್ವಕಪ್ ಇಡೀ ಜಗತ್ತನ್ನೇ ಸೆಳೆದಿತ್ತು, ಹಾಗೇ ಭಾರತದಲ್ಲಿ ಕ್ರಿಕೆಟ್ ಗಟ್ಟಿಯಾಗಿ ನೆಲೆಯೂರಲು ಕಾರಣ ಕೂಡ ಆಗಿತ್ತು. ಹೀಗಿದ್ದಾಗ 2008 ರಲ್ಲಿ ಭಾರತದ ಕ್ರಿಕೆಟ್ ಲೋಕಕ್ಕೆ ಮತ್ತಷ್ಟು ತಿರುವು ನೀಡಿದ್ದು 'ಐಪಿಎಲ್' ಟೂರ್ನಿ. ಹೀಗೆ 2008 ಭಾರತ ಕ್ರಿಕೆಟ್ ಲೋಕಕ್ಕೆ ಎಂದೆಂದಿಗೂ ಮರೆಯಲು ಆಗದ ವರ್ಷ. ಹೀಗಿದ್ದಾಗ 2025ರ ಐಪಿಎಲ್ ಟೂರ್ನಿ ಮತ್ತೆ ಜಾಗತಿಕ ಮಟ್ಟದಲ್ಲಿ ಭಾರತದ ಗತ್ತು ತೋರಿಸಿದೆ!

IPL Is Shining And It Makes Indian Sports To Get International Attention

ಕ್ರಿಕೆಟ್ ಹುಟ್ಟಿದ ದೇಶಕ್ಕೂ ಅಚ್ಚರಿ!

ಹೌದು, 2025ರ ಐಪಿಎಲ್ ಟೂರ್ನಿಗೆ ಇದೀಗ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಐಪಿಎಲ್ ತಂಡಗಳ ಮಾಲೀಕರು ಕೋಟಿ ಕೋಟಿ ಹಣ ಸುರಿದು ಆಟಗಾರರ ಖರೀದಿ ಮಾಡುತ್ತಿದ್ದಾರೆ. ಈ ಮೂಲಕ ಭಾರತದ ಐಪಿಎಲ್ ಕ್ರೀಡಾಕೂಟ ಮತ್ತಷ್ಟು ಹೆಸರು ಮಾಡುತ್ತಿದೆ. ಹೀಗಿದ್ದಾಗ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ನಡೆಸುತ್ತಿರುವ 2025ರ ಐಪಿಎಲ್ ಹರಾಜು ಪ್ರಕ್ರಿಯೆ ಭಾರತದ ಕ್ರೀಡಾ ಲೋಕದ ಗತ್ತು ಹೆಚ್ಚು ಮಾಡಿದೆ. ಕ್ರಿಕೆಟ್ ಹುಟ್ಟಿದ ದೇಶವಾದ ಇಂಗ್ಲೆಂಡ್ ಕೂಡ ಈ ಅಬ್ಬರ ಕಂಡು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದೆ. ಇಂಗ್ಲೆಂಡ್ ಮಾತ್ರವಲ್ಲ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ದೇಶಗಳಿಗೂ ಇದು ಅಚ್ಚರಿಯ ವಿಚಾರವಾಗಿದೆ.

ಐಪಿಎಲ್ ಆದಾಯ 11,769 ಕೋಟಿ...

ಕ್ರಿಕೆಟ್ ಜಗತ್ತಿಗೆ ದೊಡ್ಡ ತಿರುವು ನೀಡಿದ್ದೇ 'ಐಪಿಎಲ್' ಅಥವಾ 'ಇಂಡಿಯನ್ ಪ್ರಿಮಿಯರ್ ಲೀಗ್'. ಹೀಗೆ 'ಐಪಿಎಲ್' ಮಾಯಾ ಲೋಕದಲ್ಲಿ ಲಕ್ಷಗಳಿಗೆ ಬೆಲೆಯೇ ಇಲ್ಲ, ಏನಿದ್ದರೂ ಇಲ್ಲಿ ಕೋಟಿಯದ್ದೇ ಮಾತು. ಹೀಗೆ 2023ರ ಐಪಿಎಲ್ ಟೂರ್ನಿಯಲ್ಲಿ ಬಂದ ಒಟ್ಟು ಆದಾಯವೇ 11,769 ಕೋಟಿ ರೂಪಾಯಿ ಆಗಿತ್ತು. ಹೀಗೆ ಜಾಗತಿಕ ಕ್ರಿಕೆಟ್ ಲೋಕದಲ್ಲೇ ಅತಿಹೆಚ್ಚು ದುಡ್ಡು ಭಾರತದ ಐಪಿಎಲ್ ಟೂರ್ನಿಯಲ್ಲಿ ಇದೆ ಎಂಬುದೇ ಹೆಮ್ಮೆಯ ವಿಚಾರ ಅಂತಿದ್ದಾರೆ ನಮ್ಮ ಕ್ರಿಕೆಟ್ ಅಭಿಮಾನಿಗಳು!

ಒಟ್ನಲ್ಲಿ ಜಗತ್ತಿನ ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಇದೇ ರೀತಿ ಮಿನುಗುತ್ತಿರಲಿ. ಹಾಗೇ IPL ಕೀರ್ತಿ ಇನ್ನಷ್ಟು ಎತ್ತರಕ್ಕೆ ಹೋಗಲಿ ಅನ್ನೋದೆ ಅಭಿಮಾನಿಗಳ ಆಸೆ. ಹೀಗಾಗಿ ಐಪಿಎಲ್‌ಗೆ ಅಭಿಮಾನಿಗಳಿಂದ ಮತ್ತಷ್ಟು, ಇನ್ನಷ್ಟು ಬೆಂಬಲ ಕೂಡ ಸಿಗುತ್ತಿದ್ದು ಖುಷಿ ನೀಡುತ್ತಿದೆ. ಈ ಮೂಲಕ ಸಾವಿರಾರು ಕೋಟಿ ರೂಪಾಯಿ ಆದಾಯ ಕೂಡ ಹರಿದು ಹರಿದು ಬರುತ್ತಿದೆ. ಈ ನಡುವೆ ನೂರಾರು ಬಡ ಕ್ರಿಕೆಟ್ ಆಟಗಾರರಿಗೆ ಐಪಿಎಲ್ ಹೊಸ ಹುಮ್ಮಸ್ಸು ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+