Virat Kohli: ಕೊಹ್ಲಿ ಟೀಕಿಸಿದ್ದಕ್ಕೆ ಮಾಜಿ ಕ್ರಿಕೆಟಿಗನಿಗೆ ಜೀವ ಬೆದರಿಕೆ! ದಿನೇಶ್ ಕಾರ್ತಿಕ್ ಹೇಳಿದ್ದೇನು?
ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದಕ್ಕಾಗಿ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ನ್ಯೂಜಿಲೆಂಡ್ ಮಾಜಿ ವೇಗಿ ಸೈಮನ್ ಡೌಲ್ ಬಹಿರಂಗಪಡಿಸಿದ್ದಾರೆ.
ಕೊಹ್ಲಿ ಈ ತಲೆಮಾರಿನ ಶ್ರೇಷ್ಠ ಕ್ರಿಕೆಟಿಗ ಎಂದು ವೀಕ್ಷಕ ವಿವರಣೆಗಾರರು ಹೊಗಳಿದರೂ, ಅವರಿಂದ ನಿರೀಕ್ಷಿತ ಪ್ರದರ್ಶನ ಬರದೇ ಇದ್ದಾಗ ಟೀಕೆ ಮಾಡುತ್ತಾರೆ. ಐಪಿಎಲ್ 2024ರ ಆರಂಭದಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ವಿಚಾರದಲ್ಲಿ ಸೈಮನ್ ಡೌಲ್ ಕೂಡ ಟೀಕಿಸಿದ್ದರು.

ಕೊಹ್ಲಿ ತಮ್ಮ ಬ್ಯಾಟಿಂಗ್ ವಿಧಾನದ ಟೀಕೆಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು, ಅವರು ಒಂದು ದಶಕದಿಂದ ಪಂದ್ಯಗಳನ್ನು ಗೆಲ್ಲುತ್ತಿರುವುದರಿಂದ ತಾವು ಹೇಗೆ ಆಡಬೇಕು ಎನ್ನುವುದನ್ನು ಯಾರು ಹೇಳಬೇಕಿಲ್ಲ ಎಂದಿದ್ದರು.
ಟೀಕೆಗಳಿಗೆ ಬ್ಯಾಟ್ ಮೂಲಕ ಕೊಹ್ಲಿ ಉತ್ತರ ಕೊಟ್ಟಿದ್ದಾರೆ. ಸ್ಪಿನ್ ವಿರುದ್ಧ ಕೂಡ ತಾನು ಅತ್ಯುತ್ತಮವಾಗಿ ಆಡಬಲ್ಲೆ ಎನ್ನುವುದು ಈ ಆವೃತ್ತಿಯಲ್ಲಿ ಸಾಬೀತುಪಡಿಸಿದ್ದಾರೆ.
ದಿನೇಶ್ ಕಾರ್ತಿಕ್ ಹೇಳಿದ್ದೇನು?
ಚರ್ಚೆಯ ಸಂದರ್ಭದಲ್ಲಿ, ಕೊಹ್ಲಿಯ ಆರ್ ಸಿಬಿ ತಂಡದ ಸಹ ಆಟಗಾರ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದು. ಟೀಕಾಕಾರರನ್ನು ತಪ್ಪೆಂದು ಸಾಬೀತುಪಡಿಸಲು ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ಸುಧಾರಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
"ವಿರಾಟ್ ಕೊಹ್ಲಿ ಈ ವರ್ಷ ಹೇಗಿದ್ದರು ಎನ್ನುವುದರ ಕುರಿತು ಪುಸ್ತಕ ಬರೆಯಲು ಬಯಸುತ್ತಾರೆ. ಸೈಮನ್ ಡೌಲ್ ಮತ್ತು ಇತರರು ಕೊಹ್ಲಿಯನ್ನು ಟೀಕಿಸಿದ್ದಕ್ಕೆ ಧನ್ಯವಾದಗಳು. ವಿರಾಟ್ ಕೊಹ್ಲಿಯ ಅವರ ಮತ್ತೊಂದು ಮುಖ ನಿಮಗೆ ತಿಳಿದಿದೆ. ಆತನಿಗೆ ಏನು ಮಾಡಬೇಕು ಎನ್ನುವುದು ಚನ್ನಾಗಿದೆ ಗೊತ್ತಿದೆ. ಆತನನ್ನು ಟೀಕಿಸುವವರು ತಪ್ಪು ಎಂದು ಸಾಬೀತುಪಡಿಸಲು ಬಯಸುತ್ತಾರೆ. ಆತ ಉರಿಯುವ ಲಾವಾರಸ ಇದ್ದಂತೆ, ಆತನ ಸುತ್ತ ಇದ್ದರೆ ಸುಟ್ಟು ಹೋಗುತ್ತೀರಾ" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಕೊಹ್ಲಿಯನ್ನು ಹೊಗಳಿದಾಗ ಯಾರೂ ನಿಜವಾಗಿಯೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಡೌಲ್ ಒತ್ತಿಹೇಳಿದರು, ಆದರೆ ಸ್ಟಾರ್ ಬ್ಯಾಟರ್‌ನ ಸಣ್ಣ ಟೀಕೆಯು ಆಗಾಗ್ಗೆ ಅವರಿಗೆ ಅಭಿಮಾನಿಗಳಿಂದ ಕೊಲೆ ಬೆದರಿಕೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
"ವಿರಾಟ್ ಕೊಹ್ಲಿ ತುಂಬಾ ಒಳ್ಳೆಯ ಆಟಗಾರ, ಮತ್ತು ಅದು ಯಾವಾಗಲೂ ಅವನ ಸುತ್ತ ನನ್ನ ಉದ್ದೇಶವಾಗಿತ್ತು. ನಾನು ವಿರಾಟ್ ಕೊಹ್ಲಿ ಬಗ್ಗೆ ಸಾವಿರ ಅದ್ಭುತ ವಿಷಯಗಳನ್ನು ಹೇಳಿದ್ದೇನೆ, ಆದರೆ ನಾನು ಸ್ವಲ್ಪ ಟೀಕೆ ಮಾಡಿದರೂ ಕೊಲೆ ಬೆದರಿಕೆಗಳು ಬರುತ್ತವೆ" ಎಂದು ಹೇಳಿದ್ದಾರೆ.
"ಕೊಹ್ಲಿಯನ್ನು ಟೀಕಿಸುವುದು ವೈಯಕ್ತಿಕವಲ್ಲ. ನಾವು ಉತ್ತಮವಾಗಿ ಮಾತನಾಡುತ್ತೇವೆ, ಪಂದ್ಯಗಳ ನಂತರ ಮಾತನಾಡಿದ್ದೇವೆ, ಎಂದಿಗೂ ಸಮಸ್ಯೆ ಇಲ್ಲ." ಎಂದು ಹೇಳಿದರು.
ಕಾರ್ತಿಕ್ ಅವರು ಸೈಮನ್ ಡೌಲ್ ವಿರುದ್ಧದ ಕೊಲೆ ಬೆದರಿಕೆಗಳನ್ನು ಖಂಡಿಸಿದ್ದು, ಉತ್ತಮ ಟೀಕೆ ಮತ್ತು ಯಾರಾದರೂ ವೈಯಕ್ತಿಕ ಗೇಲಿ ಮಾಡುವ ನಡುವಿನ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.












Click it and Unblock the Notifications