ಆರ್‌ಸಿಬಿ ಅಲ್ಲ ಐಪಿಎಲ್ ಚಾಂಪಿಯನ್ ತಂಡ ಮಾರಾಟ, 50,00,00,00,000 ಡೀಲ್ ಫಿಕ್ಸ್... Virat Kohli
ಕನ್ನಡಿಗರ ಹೃದಯ ಸೀಳಿ ಹೋಗುವ ಸುದ್ದಿಯೊಂದು ಆವರಿಸಿತ್ತು, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಮಾರಾಟವೇ ಆಗುತ್ತಿದೆ... ಕಾಲ್ತುಳಿತ ಘಟನೆ ನಂತರ 11 ಜನರು ಸತ್ತು ಹೋಗಿದ್ದು ದೊಡ್ಡ ಬಿರುಗಾಳಿ ಎಬ್ಬಿಸಿದೆ ಅನ್ನೋ ಸುದ್ದಿಯು ಹಬ್ಬಿತ್ತು... ಆದರೆ ಅದೆಲ್ಲವೂ ಠುಸ್ಸ್.. ಠುಸ್ಸ್... ಪಟಾಕಿ ಆಗಿದ್ದು, ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಸೇಫ್ ಆಗಿದೆ. ಹೀಗಿದ್ದಾಗಲೇ, ಐಪಿಎಲ್ ಚಾಂಪಿಯನ್ ಆಗಿದ್ದ ಮತ್ತೊಂದು ತಂಡದ ಮಾರಾಟ ಸುದ್ದಿ ಬೆಂಕಿಯನ್ನೇ ಹೊತ್ತಿಸುತ್ತಿದೆ!
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ 18 ವರ್ಷಗಳ ನಂತರ ಇತಿಹಾಸ ಸೃಷ್ಟಿ ಮಾಡುವಂತೆ ಕಪ್ ಗೆದ್ದು ಬೀಗಿದೆ. ಆದ್ರೆ ಕನ್ನಡಿಗರು ಇದೀಗ ಆರ್‌ಸಿಬಿ ಕಪ್ ಗೆದ್ದ ನಂತರ ಕೂಡ ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ... 2008 ಅಂದ್ರೆ ಸತತ 18 ವರ್ಷಗಳಿಂದ ಕಾದು ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಇದೀಗ 2025 ಐಪಿಎಲ್ ಕಪ್ ಗೆದ್ದಿದ್ದರೂ ಸಂಭ್ರಮ ಸತ್ತು ಹೋಗುತ್ತಿದೆ. ಒಂದು ಕಡೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಉಂಟಾಗಿ 11 ಜನ ಸತ್ತು ಹೋಗಿರುವ ವಿಚಾರಕ್ಕೆ ಕ್ಷಣಕ್ಷಣಕ್ಕೂ ತಿರುವು ಸಿಗುತ್ತಿದೆ. ಇಂತಹ ಸಮಯದಲ್ಲೇ ಐಪಿಎಲ್ ತಂಡವೊಂದರ ಮಾರಾಟ ಸುದ್ದಿ ಸುಂಟರಗಾಳಿ ಎಬ್ಬಿಸಿದೆ, ಅದೂ 50,00,00,00,000 ರೂಪಾಯಿಗೆ ಐಪಿಎಲ್ ತಂಡದ ಮಾರಾಟ...

50,00,00,00,000 ರೂಪಾಯಿಗೆ ಐಪಿಎಲ್ ತಂಡದ ಮಾರಾಟ...
ಬೆಂಗಳೂರು ತಂಡ ಆರ್‌ಸಿಬಿ ಮಾರಾಟ ಆಗುತ್ತಿದೆ... ಎಂಬ ಸುದ್ದಿ ಹಬ್ಬಿದ್ದೇ ತಡ ಇಡೀ ಇಂಟರ್‌ನೆಟ್ ಶೇಕ್ ಆಗಿತ್ತು & ಕೋಟಿ, ಕೋಟಿ ಅಭಿಮಾನಿಗಳು ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಬಗ್ಗೆ ಚರ್ಚೆ ಮಾಡಲು ಶುರು ಮಾಡಿದ್ದರು. ಅದರಲ್ಲೂ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಮಾರಾಟ ಆದರೆ ಮುಂದೆ ಏನು ಪರಿಸ್ಥಿತಿ ಎಂಬ ಚಿಂತೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳನ್ನ ಕಾಡುತ್ತಿತ್ತು. ಹೀಗಿದ್ದಾಗಲೇ, ಆರ್‌ಸಿಬಿ ಅಲ್ಲ ಐಪಿಎಲ್ ಚಾಂಪಿಯನ್ ತಂಡ ಮಾರಾಟ, 50,00,00,00,000 ಡೀಲ್ ಫಿಕ್ಸ್...
ಹೌದು, ಆರ್‌ಸಿಬಿ ತಂಡ ಸೇಲ್ ಆಗೋಯ್ತು ಅನ್ನೋ ಗಾಳಿ ಸುದ್ದಿ ಸಂಚಲನ ಸೃಷ್ಟಿ ಮಾಡಿರುವಾಗಲೇ ಅದಕ್ಕೆ ಸ್ಪಷ್ಟನೆ ಕೂಡ ಸಿಕ್ಕಿದ್ದು ಅಭಿಮಾನಿಗಳು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಆರ್‌ಸಿಬಿ ತಂಡ ಇಡೀ ಕ್ರಿಕೆಟ್ ಲೋಕದಲ್ಲೇ ವಜ್ರದಂತೆ ಇದ್ದು, ಹೀಗೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನ ಯಾರು ಮಾರುತ್ತಾರೆ? ಅನ್ನೋ ಪ್ರಶ್ನೆಯನ್ನ ಕೂಡ ಅಭಿಮಾನಿಗಳು ಕೇಳುತ್ತಿದ್ದರು. ಹಾಗಾದ್ರೆ ಸೇಲ್ ಆಗಿರುವ ಐಪಿಎಲ್ ಚಾಂಪಿಯನ್ ತಂಡ ಯಾವುದು? 50,00,00,00,000 ರೂಪಾಯಿ ಮೊತ್ತಕ್ಕೆ ಯಾರ ಜೊತೆಗೆ ಡೀಲ್ ಆಗಿದ್ದು? ಐಪಿಎಲ್ ಚಾಂಪಿಯನ್ ತಂಡದ ಮಾರಾಟದ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಇದೆ...
ಈ ಐಪಿಎಲ್ ತಂಡವನ್ನು ಮಾರಾಟ...
ಯೆಸ್, 2022 ಐಪಿಎಲ್ ಟ್ರೋಫಿ ಗೆದ್ದು ಹೊಸ ಇತಿಹಾಸ ಬರೆದಿದ್ದ ಗುಜರಾತ್ ಟೈಟಾನ್ಸ್ ಐಪಿಎಲ್ ತಂಡವನ್ನೇ ಸೇಲ್ ಮಾಡಲಾಗಿತ್ತು. 2025 ಐಪಿಎಲ್ ಟೋರ್ನಿ ಆರಂಭಕ್ಕೆ ಮೊದಲೇ ಗುಜರಾತ್ ಟೈಟಾನ್ಸ್ ಐಪಿಎಲ್ ತಂಡವನ್ನ ಸೇಲ್ ಮಾಡಿ, ಶೇಕಡಾ 67 ಷೇರು ಮಾರಾಟ ಮಾಡಲಾಗಿತ್ತು. ಮೂಲತಃ ಸಿವಿಸಿ ಕಡೆಯಿಂದ ಗುಜರಾತ್ ಟೈಟಾನ್ಸ್ ಐಪಿಎಲ್ ತಂಡದ ಪಾಲನ್ನು ಟೋರೆಂಟ್‌ಗೆ ಮಾರಾಟ ಮಾಡಲಾಗಿತ್ತು. ಟೋರೆಂಟ್ ಗ್ರೂಪ್ ಇದಕ್ಕಾಗಿ ಸುಮಾರು 50,00,00,00,000 ರೂಪಾಯಿ ಹಣ ನೀಡಿತ್ತು ಎಂಬ ಮಾಹಿತಿ ಹೊರ ಬಿದ್ದಿತ್ತು. ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಮಾರಾಟ ಆಗಲ್ಲ ಅನ್ನೋದು ಇದೀಗ ಅಭಿಮಾನಿಗಳಿಗೆ ಖುಷಿ ನೀಡಿದೆ!












Click it and Unblock the Notifications