IPL Ban: ಆರ್‌ಸಿಬಿ ಹಿಂತಿರುಗುವವರೆಗೂ ಐಪಿಎಲ್‌ ಬ್ಯಾನ್‌.. ಜಯ್‌ ಶಾ ಹೀಗೆ ಹೇಳಿದ್ಯಾಕೆ?

RCB: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆಲ್ಲುವ ಮೂಲಕ 17 ವರ್ಷಗಳ ಬಳಿಕ ಮೊಟ್ಟ ಮೊದಲ ಟ್ರೋಫಿಗೆ ಮುತ್ತಿಟ್ಟಿತು. ಆ ದಿನ ರಾಯಲ್‌ ತಂಡದ ಗೆಲುವನ್ನ ಬರೀ ಕರ್ನಾಟಕ ಅಷ್ಟೇ ಅಲ್ಲದೆ, ಇಡೀ ದೇಶವೇ ಸಂಭ್ರಾಚರಣೆ ಮಾಡಿತು. ಆದರೆ, ಮಾರನೇ ಜೂನ್‌ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಬಳಿಕ ತುಂಬಾ ಬೆಳವಣಿಗೆಗಳು ಆಗುತ್ತಲಿವೆ.

18ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ವೇಳೆ ಬಲಿಷ್ಠ ಪಂಜಾಬ್‌ ಕಿಂಗ್ಸ್‌ ತಂಡವನ್ನು ಬಗ್ಗುಬಡಿದು ಆರ್‌ಸಿಬಿ ಚೊಚ್ಚಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಹಿನ್ನೆಲೆ ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಇದೇ ವೇಳೆ ಎಂ.ಚಿನ್ನಸ್ವಾಮಿ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಇಡೀ ದೇಶದ ಗಮನ ಸೆಳೆಯಿತು. ಇದೀಗ ಜಯ್‌ ಶಾ ಹೇಳಿಕೆಯೊಂದು ಭಾರೀ ವೈರಲ್‌ ಆಗುತ್ತಿದೆ.

IPL Ban Until RCB Returns Why Did Jay Shah Say This Viral

ದುರಂತ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಎಫ್‌ಐಆರ್‌ ದಾಖಲಿಸಿತು. ಅಷ್ಟೇ ಸಾಲದೆಂಬಂತೆ ವಿರಾಟ್‌ ಕೊಹ್ಲಿ ವಿರುದ್ಧವೂ ದೂರು ದಾಖಲಾಯಿತು. ಬಳಿಕ ಬಂಧನವಾಗಿದ್ದ ಆರ್‌ಸಿಬಿ ಮಾರ್ಕೆಟಿಂಗ್‌ ಹೆಡ್‌ ನಿಖಿಲ್‌ ಸೋಸಲೆ ಜಾಮೀನಿನ ಮೇಲೆ ಹೊರಗಡೆ ಬಂದರು. ಬಳಿಕ ಆರ್‌ಸಿಬಿಯನ್ನು ಮಾರಾಟ ಮಾಡಲಾಗುತ್ತದೆ ಹಾಗೂ ಐಪಿಎಲ್‌ನಿಂದಲೇ ಬ್ಯಾನ್‌ ಮಾಡಲಾಗುತ್ತದೆ ಎನ್ನುವ ವದಂತಿಗಳು ಹಬ್ಬಿದ್ದವು. ಆದರೆ ಇದಕ್ಕೆಲ್ಲ ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆಯುವ ಕೆಲಸವನ್ನು ಪ್ರಾಂಚೈಸಿ ಮಾಡಿತು.

ಯಾವುದೇ ಕಾರಣಕ್ಕೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟ ಮಾಡಲಾಗುವುದಿಲ್ಲ ಎಂದು ಪ್ರಾಂಚೈಸಿ ಸ್ಪಷ್ಟನೆ ನೀಡುವ ಕೆಲಸವನ್ನು ಪ್ರಾಂಚೈಸಿ ಮಾಡಿತು. ಇದೀಗ ಕಾಲ್ತುಳಿತ ದುರಂತ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿದೆ. ಈ ನಡುವೆಯೇ ಜಯ್ ಶಾ ಅವರು ಐಪಿಎಲ್‌ನಿಂದ ಆರ್‌ಸಿಬಿ ಬ್ಯಾನ್‌ ಯಾಕೆ ಆಗುವುದಿಲ್ಲ ಎನ್ನುವ ಬಗ್ಗೆ ಬಿಗ್‌ ಅಪ್ಡೇಟ್‌ವೊಂದನ್ನು ನೀಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿದ ದುತಂತ ಸಂಬಂಧ ಆರ್‌ಸಿಬಿಯನ್ನು ಐಪಿಎಲ್‌ನಿಂದಲೇ ಬ್ಯಾನ್‌ ಮಾಡಲಾಗುತ್ತದೆ ಎನ್ನುವ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಡಿದ್ದವು. ಇದೀಗ ಈ ಪ್ರಕರಣ ಕೋರ್ಟ್‌ನಲ್ಲಿದೆ. ಒಂದು ವೇಳೆ ಇದು ಸುಪ್ರೀಂ ಕೋರ್ಟ್‌ಗೆ ಹೋದರೆ ಏನಾಗಲಿದೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಯ್ ಶಾ ಅವರು, "ಸುಪ್ರೀಂ ಕೋರ್ಟ್‌ನಲ್ಲಿ ಒಂದು ವೇಳೆ ಆರ್‌ಸಿಬಿ ಮೇಲೆ ನಿಷೇಧ ಹೇರಿದರೆ, ಆರ್‌ಸಿಬಿ ಹಿಂತಿರುಗುವವರೆಗೂ ಐಪಿಎಲ್‌ ಇರುವುದಿಲ್ಲ ಎಂದು ಜಯ್ ಶಾ ಹೇಳಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ, ಐಪಿಎನಲ್ಲಿ ಆದಾಯ ಎಲ್ಲವೂ ಆರ್‌ಸಿಬಿ ಸುತ್ತ ಸುವರೆದಿದೆ," ಅಂತಲೂ ಹೇಳಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಹೌದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲ ಅಂದ್ರೆ ಐಪಿಎಲ್‌ ನಡೆಸುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ಇದೆ. ಅಷ್ಟರ ಮಟ್ಟಿಗೆ ಆರ್‌ಸಿಬಿ ಮಾರ್ಕೆಟಿಂಗ್‌ ವ್ಯಾಲ್ಯೂ ಹೆಚ್ಚಳ ಆಗುತ್ತಲಿದೆ. ಈ ಬಾರಿ ದೈತ್ಯ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಹಿಂದಿಕ್ಕಿದೆ. ಅಷ್ಟೇ ಅಲ್ಲದೆ, ಇಡೀ ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಲೂ ಗುರುತಿಸಿಕೊಂಡಿದೆ. ಹಾಗಾಗಿ ಆರ್‌ಸಿಬಿ ಇಲ್ಲದಿದ್ದರೆ, ಐಪಿಎಲ್‌ ನಡೆಯುವುದೇ ಡೌಟ್‌ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+