ವಿರಾಟ್‌ ಕೊಹ್ಲಿ ಬಳಿಕ ಟೀಂ ಇಂಡಿಯಾಗೆ ಸಿಕ್ರು ಮತ್ತೊಬ್ಬ 'ಚೇಸ್ ಮಾಸ್ಟರ್'; ಭಾರತೀಯ ಕ್ರಿಕೆಟ್‌ ದಿಗ್ಗಜರ ಅಚ್ಚರಿ ಭವಿಷ್ಯ

IPL 2026: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ (ಏಪ್ರಿಲ್‌ 26) ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಐತಿಹಾಸಿಕ ರನ್ ಬೆನ್ನಟ್ಟುವ ಮೂಲಕ ಭರ್ಜರಿ ಜಯ ದಾಖಲಿಸಿತು. ಶ್ರೇಯಸ್ ಅಯ್ಯರ್ ಕೊನೆವರೆಗೂ ನಿಂತು ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಅಜೇಯ 71 ರನ್‌ ಸಿಡಿಸಿ ಪಂಜಾಬ್ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇದರ ಬೆನ್ನಲ್ಲೇ ಅವರನ್ನು ವಿರಾಟ್‌ ಕೊಹ್ಲಿ ಬಳಿಕ ಮತ್ತೊಬ್ಬ ಚೇಸ್‌ ಮಾಸ್ಟರ್ ಎಂದು ಭಾರತೀಯ ಕ್ರಿಕೆಟ್‌ ದಿಗ್ಗಜ ಇರ್ಫಾನ್ ಪಠಾಣ್ ಅವರು ಕರೆದಿದ್ದಾರೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಕೆ.ಎಲ್.ರಾಹುಲ್ ಅವರು ಕೇವಲ 67 ಎಸೆತಗಳಲ್ಲಿ 16 ಬೌಂಡರಿ, 9 ಸಿಕ್ಸರ್‌ಗಳ ಸಹಿತ ಅಜೇಯ 152 ರನ್‌ ಸಿಡಿಸಿದು. ಇವರಿ ಉತ್ತಮ ಸಾಥ್ ನೀಡಿದ ನಿತೀಶ್‌ ರಾಣಾ 91(44) ರನ್‌ಗಳ ಕೊಡುಗೆ ನೀಡಿದರು. ಇವರಿಬ್ಬರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ನಿಗದಿ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಬೆಟ್ಟದಂತಹ 264 ರನ್‌ಗಳನ್ನು ಪೇರಿಸಿತು.

IPL 2026 Shreyas Iyer Named Next Chase Master After Historic Punjab Kings Win Vs Delhi Capitals

ಶ್ರೇಯಸ್‌ ಅಯ್ಯರ್‌ಗೆ ಸಿಕ್ತು ಹೊಸ ಬಿರುದು

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ 265 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಪಂಜಾಬ್ ಕಿಂಗ್ಸ್‌ 18.5 ಓವರ್‌ಗಳಿಗೆ ತಲುಪಿ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್‌ ಚೇಸ್‌ ಮಾಡಿ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಯ್ಯರ್ ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.

ಪಂಜಾಬ್‌ ಕಿಂಗ್ಸ್‌ ಐತಿಹಾಸಿಕ ಗೆಲುವು

ಆರಂಭಿಕ ಆಟಗಾರರಾದ ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಪ್ರಿಯಾನ್ಶ್ ಆರ್ಯ ಹಾಕಿಕೊಟ್ಟ ಭದ್ರ ಬುನಾದಿಯನ್ನು ಅಯ್ಯರ್ ಸರಿಯಾಗಿ ಬಳಸಿಕೊಂಡರು. ಕೇವಲ 36 ಎಸೆತಗಳಲ್ಲಿ ಅಜೇಯ 71 ರನ್ ಚಚ್ಚಿದ ಅಯ್ಯರ್, 197ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 7 ಆಕರ್ಷಕ ಸಿಕ್ಸರ್‌ಗಳು ಸೇರಿವೆ. ಒಟ್ಟಿನಲ್ಲಿ ನಾಯಕನ ಆಟವಾಡಿದ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಂದ್ಯದ ನಂತರ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಅಯ್ಯರ್ ಅವರ ಆಟವನ್ನು ಶ್ಲಾಘಿಸಿದರು. ಈ ಕುರಿತು ಟ್ವಿಟ್ ಮಾಡಿರುವ ಅವರು, "ಕೊಹ್ಲಿಯ ನಂತರ ಅಯ್ಯರ್ ಅವರನ್ನು 'ಚೇಸ್ ಮಾಸ್ಟರ್' ಎಂದು ಕರೆಯಬೇಕು," ಎಂದು ಬರೆದುಕೊಳ್ಳುವ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾಗೆ ಸಿಕ್ರು ಮತ್ತೊಬ್ಬ ಚೇಸ್ ಮಾಸ್ಟರ್

"ವಿರಾಟ್ ಕೊಹ್ಲಿಯ ನಂತರ ಯಾರಾದರೂ 'ಚೇಸ್ ಮಾಸ್ಟರ್' ಎಂಬ ಬಿರುದಿಗೆ ಅರ್ಹರಿದ್ದರೆ, ಅದು ಶ್ರೇಯಸ್ ಅಯ್ಯರ್ ಮಾತ್ರ. ಅವರು ಪ್ರತಿ ಬಾರಿಯೂ ಒತ್ತಡದ ಸಂದರ್ಭದಲ್ಲಿ ಅತ್ಯಂತ ಶಾಂತವಾಗಿ, ಸಂಯಮದಿಂದ ಮತ್ತು ಸಮಯೋಚಿತವಾಗಿ ಆಟವಾಡುತ್ತಾರೆ," ಎಂದು ಅವರು ಟ್ವಿಟರ್‌ನಲ್ಲಿ ಭಾರತೀಯ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್ ಬರೆದುಕೊಂಡಿದ್ದಾರೆ.

ಮೊಹಮ್ಮದ್ ಕೈಫ್ ಹೇಳಿರುವುದೇನು?

"ಪಂಜಾಬ್ ತಂಡದ ಶ್ರೇಯಸ್ ಅಯ್ಯರ್ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಅವರು ವರ್ಷದಿಂದ ವರ್ಷಕ್ಕೆ, ಪಂದ್ಯದಿಂದ ಪಂದ್ಯಕ್ಕೆ ತಂಡವನ್ನು ಗೆಲ್ಲಿಸುವಂತಹ ಅಮೋಘ ಇನ್ನಿಂಗ್ಸ್‌ಗಳನ್ನು ಕಟ್ಟುತ್ತಲೇ ಸಾಗಿದ್ದಾರೆ," ಎಂದು ಮೊಹಮ್ಮದ್ ಕೈಫ್ ತಮ್ಮ ಟ್ವಿಟ್‌ ಮೂಲಕ ತಿಳಿಸಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ, ಮೊದಲಿನಿಂದಲೂ ವಿರಾಟ್‌ ಕೊಹ್ಲಿ ಅವರು ಚೇಸಿಂಗ್ ಮಾಡಲು ಬಂದರೆ ಅವರು ಪಂದ್ಯವನ್ನು ಗೆಲ್ಲಿಸದೇ ಔಟ್‌ ಆಗಿರುವುದು ಕಡಿಮೆ. ಗೆಲ್ಲಿಸಿಕೊಂಡೇ ಬಂದಿರುವುದು ಹೆಚ್ಚು. ಆದ್ದರಿಂದ ಅವರನ್ನು ಚೇಸ್ ಮಾಸ್ಟರ್ ಅಂತಾ ಕರೆಯಲಾಗುತ್ತದೆ. ಇದೀಗ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಕೊಹ್ಲಿ ರೀತಿಯಲ್ಲೇ ಅಯ್ಯರ್ ಚೇಸಿಂಗ್ ಕಂಪ್ಲೀಟ್‌ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ಭಾರತೀಯ ಕ್ರಿಕೆಟ್‌ ದಿಗ್ಗಜ ಇರ್ಫಾನ್ ಪಠಾಣ್ ಅವರು ಮತ್ತೊಬ್ಬ ಚೇಸ್‌ ಮಾಸ್ಟರ್ ಅಂತಾ ಕರೆದು ಗಮನ ಸೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+