ಸಂಜು ಸ್ಯಾಮ್ಸನ್ ಸ್ಥಾನಕ್ಕೆ ರಿಯಾನ್ ಪರಾಗ್ ನೇಮಕ: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೂತನ ನಾಯಕ
IPL 2026: ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ಗೆ ಹೋದಮೇಲೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲವಿತ್ತು. ಇದೀಗ ಕೊನೆಗೂ, ಈ ಸ್ಥಾನಕ್ಕೆ ರಿಯಾನ್ ಪರಾಗ್ ಅವರನ್ನು ಘೋಷಣೆ ಮಾಡಿದೆ. ಹಾಗಾದ್ರೆ ಇವರನ್ನು ಆಯ್ಕೆ ಮಾಡಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2026ರ ಸೀಸನ್ಗೆ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಿಯಾನ್ ಪರಾಗ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಸಂಜು ಅಲಭ್ಯರಾಗಿರುವ ವೇಳೆ ಅವರ ನಾಯಕತ್ವ ಸ್ಥಾನವನ್ನು ಉತ್ತಮವಾಗಿ ನಿಭಾಯಿಸಿದ್ದರು. ಇದನ್ನು ಗಮನಿಸಿ ಫ್ರಾಂಚೈಸಿ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ.

ಪರಾಗ್ ನಾಯಕನಾಗಿ ಆಯ್ಕೆಯಾಗಿದ್ದು ಹೇಗೆ?
ಕಳೆದ ಬಾರಿ ಸೀಸನ್ನಲ್ಲಿಯೇ ಅವರು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ಜೊತೆಗೆ ಪ್ರಮುಖ ಆಟಗಾರನಾಗಿ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದರು. ಆದ್ದರಿಂದ ಫ್ರಾಂಚೈಸಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಂಡದಲ್ಲಿ ಸಹ ಆಟಗಾರರೊಂದಿಗೆ ಉತ್ತಮ ಬಾಂದ್ಯವ್ಯ ಹೊಂದಿದ್ದು, ಇದರಿಂದ ಅವರಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಇನ್ನೂ ಐಪಿಎಲ್ ಹರಾಜಿನ ನಂತರ ಕಳೆದ ಎರಡು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ನಡೆಸಿದ ಪ್ರಕ್ರಿಯೆಯ ಬಳಿಕ ಈ ನೇಮಕಾತಿ ನಡೆದಿದೆ.
ರಿಯಾನ್ ಪರಾಗ್ ಅವರು ಫ್ರಾಂಚೈಸಿಯೊಂದಿಗೆ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಭಾರತೀಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್ 2019ರಿಂದ ಆರ್ಆರ್ ತಂಡದಲ್ಲಿದ್ದಾರೆ. ಕಿರಿಯ ವಯಸ್ಸಿನಲ್ಲಿ ತಂಡಕ್ಕೆ ಸೇರಿದ್ದ ಅವರು, ಇದೀಗ ಉನ್ನತ ಮಟ್ಟದ ಅನುಭವದೊಂದಿಗೆ ನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ರಿಯಾನ್ ಪರಾಗ್ ಹೇಳಿದ್ದೇನು ಗೊತ್ತಾ?
"ಐಪಿಎಲ್ನಲ್ಲಿ ಮೊದಲ ದಿನದಿಂದಲೇ ರಾಜಸ್ಥಾನ್ ರಾಯಲ್ಸ್ ನನ್ನ ಮನೆ ಆಗಿದೆ. ಈ ಫ್ರಾಂಚೈಸಿ ನನಗೆ ಬೆಂಬಲ ನೀಡಿದೆ, ನನ್ನನ್ನು ಬೆಳೆಸಿದೆ ಹಾಗೂ ಪ್ರತೀ ಸೀಸನ್ನಲ್ಲಿ ಪ್ರೇರೇಪಿಸಿದೆ," ಎಂದು ಆರ್ಆರ್ ನಾಯಕನಾಗಿ ನೇಮಕಗೊಂಡ ಬಳಿಕ ರಿಯಾನ್ ಪರಾಗ್ ಹೇಳಿದ್ದಾರೆ.
ಅಲ್ಲದೆ, "ಈ ತಂಡವನ್ನು ಈಗ ಮುನ್ನಡೆಸುವ ಅವಕಾಶ ಸಿಕ್ಕಿರುವುದು ಅತ್ಯಂತ ವಿಶೇಷವಾಗಿ. ಇದು ದೊಡ್ಡ ಜವಾಬ್ದಾರಿಯಾಗಿದ್ದು, ಅದನ್ನು ನಾನು ಸಂಪೂರ್ಣವಾಗಿ ಸ್ವೀಕರಿಸುತ್ತೇನೆ. ನಮ್ಮ ತರಬೇತುದಾರರು ಮತ್ತು ತಂಡದೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ," ಎಂದು ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹೇಳಿಕೆ
ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಮಾತನಾಡಿ, "ರಿಯಾನ್ ನಮ್ಮ ತಂಡದಲ್ಲಿ ಪ್ರಭಾವಶಾಲಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಶಾಂತತೆಯಿಂದ ನಡೆದುಕೊಳ್ಳುವ ಗುಣ, ನಾವು ಹೇಗೆ ಆಡಬೇಕೆಂದು ಬಯಸುತ್ತೇವೋ ಅದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈಗಾಗಲೇ ಆಟಗಾರರ ನಾಯಕತ್ವ ಗುಂಪಿನ ಭಾಗವಾಗಿರುವ ರಿಯಾನ್, ಡ್ರೆಸ್ಸಿಂಗ್ ರೂಮ್ನ ಗೌರವವನ್ನು ಗಳಿಸಿದ್ದಾರೆ. ಈ ಪಾತ್ರದಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ನಮಗಿದೆ," ಎಂದು ಹೇಳಿದರು.
ರಾಜಸ್ಥಾನ್ ರಾಯಲ್ಸ್ ಮಾಲೀಕ ಹೇಳಿದ್ದೇನು?
ರಾಜಸ್ಥಾನ್ ರಾಯಲ್ಸ್ನ ಮಾಲೀಕ ಮನೋಜ್ ಬದಾಲೆ ಮಾತನಾಡಿ, "ರಿಯಾನ್ ರಾಜಸ್ಥಾನ್ ರಾಯಲ್ಸ್ನಲ್ಲಿ ನಾವು ಅಂದುಕೊಂಡಂತೆ ಉತ್ತಮವಾಗಿ ನಾಯಕನ ಸ್ಥಾನವನ್ನು ನಿಭಾಯಿಸುತ್ತಾರೆ. ಅಂತಹ ವ್ಯಕ್ತಿತ್ವ ಅವರಲ್ಲಿ ಕಂಡಿದ್ದೇವೆ. ಹಲವು ವರ್ಷಗಳಿಂದ ಈ ಫ್ರಾಂಚೈಸಿಯ ಭಾಗವಾಗಿದ್ದಾರೆ. ಆದ್ದರಿಂದ ರಿಯಾನ್ಗೆ ತಂಡದ ಬಗ್ಗೆ ತುಂಬಾ ಅರ್ಥಮಾಡಿಕೊಂಡಿದ್ದಾರೆ. ಸ್ಪಷ್ಟತೆ, ಧೈರ್ಯ ಮತ್ತು ಹೊಣೆಗಾರಿಕೆಯೊಂದಿಗೆ ತಂಡವನ್ನು ಮುನ್ನಡೆಸಲು ಅವರು ಸಿದ್ಧರಾಗಿದ್ದಾರೆ ಎಂದು ನಾವು ನಂಬಿದ್ದೇವೆ. ಐಪಿಎಲ್ 2026ರಲ್ಲಿ ಅವರು ಈ ಹೆಜ್ಜೆ ಇಡುವುದನ್ನು ನೋಡಲು ನಾವು ತುಂಬಾ ಉತ್ಸುಕರಾಗಿದ್ದೇವೆ," ಎಂದು ಹೇಳಿದರು.
ಕೋಚ್ಗಳ ವಿವರ: ಐಪಿಎಲ್ 2026ಕ್ಕೆ ರಾಜಸ್ಥಾನ್ ರಾಯಲ್ಸ್ ತಂಡವು ಕುಮಾರ್ ಸಂಗಕ್ಕಾರ ಅವರ ನೇತೃತ್ವದ ಬಲಿಷ್ಠ ಕೋಚಿಂಗ್ನೊಂದಿಗೆ ಮುನ್ನಡೆಯಲಿದೆ. ಇನ್ನು ಇದರಲ್ಲಿ ಪ್ರಮುಖ ಸಹಾಯಕ ಕೋಚ್ ಆಗಿ ವಿಕ್ರಮ್ ರಾಥೋರ್, ಫಾಸ್ಟ್ ಬೌಲಿಂಗ್ ಕೋಚ್ ಆಗಿ ಶೇನ್ ಬಾಂಡ್, ಸಹಾಯಕ ಕೋಚ್ ಆಗಿ ಟ್ರೆವರ್ ಪೆನ್ನಿ ಹಾಗೂ ಸಿಡ್ ಲಹಿರಿ ಪರ್ಫಾರ್ಮೆನ್ಸ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
-
Namma Metro: ಐಪಿಎಲ್ ಪಂದ್ಯದ ದಿನ ದಟ್ಟಣೆ ಇಲ್ಲದೇ ಓಡಾಡಿ, ಮೆಟ್ರೋ ಸೇವಾವಧಿ ವಿಸ್ತರಣೆ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ












Click it and Unblock the Notifications