IPL 2026 RCB Squad: ಐಪಿಎಲ್ 2026ಕ್ಕೆ ಆರ್‌ಸಿಬಿ ತಂಡ ಹೀಗಿರಲಿದೆ
IPL 2026 RCB Squad: ಐಪಿಎಲ್ 2026 ಮಿನಿ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಬಾಕಿಯಿದೆ. ಈ ವೇಳೆ ಆರ್‌ಸಿಬಿ ಮೂವರು ಸ್ಟಾರ್ ಆಟಗಾರರಿಗೆ ಗಾಳ ಹಾಕಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಹಾಗಾದ್ರೆ, ಮುಂದಿನ ಆವೃತ್ತಿಗೆ ತಂಡ ಹೇಗಿರಲಿದೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿ ಕಾಡುತ್ತಿರುತ್ತಿದೆ. ಇದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್‌ನಲ್ಲಿ ಗಲ್ಲುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. 18ನೇ ಆವೃತ್ತಿಯ ಫೈನಲ್ ಪಂದ್ಯ ಜೂನ್ 3ರಂದು ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ವೇಳೆ ಆರ್‌ಸಿಬಿ ಪಂಜಾಬ್ ಕಿಂಗ್ಸ್ ಮಣಿಸುವ ಮೂಲಕ ಟ್ರೋಫಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಇದೀಗ ಎಲ್ಲರ ಚಿತ್ತ 19ನೇ ಆವೃತ್ತಿಯತ್ತ ನೆಟ್ಟಿದೆ.

ರಿಟೈನ್ ಪ್ರಕ್ರಿಯೆ ವೇಳೆ ಆರ್‌ಸಿಬಿ ಕೆಲವೇ ಕೆಲವರನ್ನು ಬಿಡುಗಡೆಗೊಳಿಸಿ ಬಹುತೇಕ ಕಳೆದ ಬಾರಿಯ ಆಟಗಾರರನ್ನೇ ಉಳಿಸಿಕೊಂಡಿದೆ. ಇನ್ನು ಇದೀಗ ಮಂಗಳವಾರ ಅಂದರೆ ಡಿಸೆಂಬರ್ 16ರಂದು ನಡೆಯಲಿರುವ ಮಿನಿ ಹಾರಾಜಿನಲ್ಲಿ ಮೂವರು ಆಲ್‌ರೌಂಡರ್‌ಗಳನ್ನು ಕೊಂಡುಕೊಳ್ಳುವ ಪ್ಲಾನ್‌ನಲ್ಲಿದೆ. ಹಾಗಾದ್ರೆ ಅವರು ಯಾರು ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಐಪಿಎಲ್ 2026 ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 16ರಂದು ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ 350ಕ್ಕಿಂತ ಹೆಚ್ಚಿನ ಆಟಗಾರರ ಹೆಸರು ಇರಲಿದೆ. ಈ ಪೈಕಿ ಗರಿಷ್ಠ 77 ಆಟಗಾರರು ಮಾತ್ರ ಹರಾಜು ಆಗಲಿದ್ದಾರೆ. ಯಾಕೆಂದ್ರೆ, 10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಮಾತ್ರ ಖಾಲಿ ಒದ್ದು, ಈ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ.
ಐಪಿಎಲ್ 2026ರ ಹರಾಜಿಗೆ ಒಟ್ಟು 1355 ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಆದರೆ, ಬಿಸಿಸಿಐ ಅಂತಿಮ ಪಟ್ಟಿಯಲ್ಲಿ 1,000 ಹೆಸರುಗಳನ್ನು ಕೈಬಿಟ್ಟಿದೆ. ಇನ್ನೂ 350 ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್ 2026ರ ಮಿನಿ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು.
ಈ ಪೈಕಿ 40 ಆಟಗಾರರ ಮೂಲ ಬೆಲೆ 2 ಕೋಟಿ ರೂಪಾಯಿಗಳಾಗಿದ್ದರೆ, 227 ಆಟಗಾರರ ಮೂಲ ಬೆಲೆ 30 ಲಕ್ಷ ರೂಪಾಯಿಗಳಾಗಿದ್ದು, ಶಾರ್ಟ್ ಲಿಸ್ಟ್ ಮಾಡಲಾದ ಆಟಗಾರರಲ್ಲಿ 16 ಮಂದಿ ಭಾರತೀಯ ಆಟಗಾರರು ಮತ್ತು 96 ಮಂದಿ ವಿದೇಶಿ ಆಟಗಾರರು ಇದ್ದಾರೆ. ಮತ್ತೊಂದೆಡೆ ನೋಡೋದಾದ್ರೆ, ಪ್ರಸ್ತುತ ಆರ್‌ಸಿಬಿಯಲ್ಲಿರುವ 17 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ ಈ ಪಟ್ಟಿಗೆ ಇನ್ನೂ ಮೂವರನ್ನು ಸೇರ್ಪಡೆ ಮಾಡಿಕೊಳ್ಳುವ ಪ್ಲ್ಯಾನ್‌ನಲ್ಲಿದೆ. ರಚಿನ್ ರವೀಂದ್ರ, ವೆಂಕಟೇಶ್ ಅಯ್ಯರ್, ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಅವರು ಈ ಪಟ್ಟಿಯಲ್ಲಿದ್ದಾರೆ.
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿ.ಕೀ.), ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ಜಾಕೋಬ್ ಬೆಥೆಲ್, ಅಭಿನಂದನ್ ಸಿಂಗ್, ಸ್ವಪ್ನಿಲ್ ಸಿಂಗ್, ರಸಿಖ್ ದಾರ್, ನುವಾನ್ ತುಷಾರ ಇದ್ದಾರೆ. ಈ ಪಟ್ಟಿಗೆ ನ್ಯೂಜಿಲೆಂಡ್ ಆಲ್‌ರೌಡರ್ ರಚಿನ್ ರವೀಂದ್ರ, ವೆಂಕಟೇಶ್ ಅಯ್ಯರ್, ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.












Click it and Unblock the Notifications