RCB: ಐಪಿಎಲ್ 2026ಕ್ಕೆ ಆರ್ಸಿಬಿ ಹೊಸ ತಂಡ ಇಲ್ಲಿದೆ
IPL 2026 RCB: ಈಗಾಗಲೇ ಆರ್ಸಿಬಿಯು ಐಪಿಎಲ್ 2025ರ ಟ್ರೋಫಿ ಗೆದ್ದುಕೊಂಡಿದೆ. ಇದೀಗ ಎಲ್ಲದರ ಚಿತ್ತ 2026ರ ಸೀಸನ್ನತ್ತ ನೆಟ್ಟಿದೆ. ಇತ್ತೀಚೆಗಷ್ಟೇ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ಬಾರಿಗೆ ಫ್ರಾಂಚೈಸಿಯು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಹಾಗಾದ್ರೆ, 19ನೇ ಆವೃತ್ತಿಗೆ ಯಾರೆಲ್ಲಾ ಇರಲಿದ್ದಾರೆ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆರ್ಸಿಬಿ ಐಪಿಎಲ್ 2026ರ ಮಿನಿ ಹರಾಜಿನಲ್ಲಿ 8 ಆಟಗಾರರನ್ನು ಕೊಂಡುಕೊಂಡಿದ್ದು, ತಂಡ ಮತ್ತಷ್ಟು ಬಲಿಷ್ಠಗೊಂಡಿದೆ. ಇದೀಗ ತಂಡದಲ್ಲಿ ಇವರನ್ನೂ ಸೇರಿದಂತೆ ಒಟ್ಟು 25 ಆಟಗಾರು ಇದ್ದಾರೆ. ರಿಟೈನ್ ಪ್ರಕ್ರಿಯೆ ವೇಳೆ 17 ಮಂದಿಯನ್ನ ಉಳಿಸಿಕೊಂಡು ಉಳಿದ ಆಟಗಾರರನ್ನು ಕೈಬಿಟ್ಟಿತ್ತು. ಉಳಿದ ಹಣದಲ್ಲಿ ಮಿನಿ ಹರಾಜಿನ ವೇಳೆ 8 ಆಟಗಾರರಿಗೆ ಮಣೆ ಹಾಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣವೇ ಬ್ಯಾಟಿಂಗ್, ಬೌಲಿಂಗ್ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಹಾಗೂ ದಿನೇಶ್ ಕಾರ್ತೀಕ್ ಅವರ ಮಾರ್ಗಶನ ಎಂದರೆ ತಪ್ಪಾಗಲಾರದು. ಎಲ್ಲಾ ತಂಡಗಳನ್ನು ಬಗ್ಗುಬಡಿಯುವ ಮೂಲಕ ಫೈನಲ್ ಪ್ರವೇಶ ಮಾಡಿ ಅಲ್ಲಿಯೂ ಬಲಿಷ್ಠ ಪಂಜಾಬ್ ಕಿಂಗ್ಸ್ ಮಣಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು.
ಇದೀಗ ಫ್ರಾಂಚೈಸಿ ಹೊಸ ಎಂಟು ಆಟಗಾರರನ್ನು ಬರಮಾಡಿಕೊಂಡು ತಂಡವನ್ನು ಬಲಿಷ್ಠಪಡಿಸಿದೆ. ವಿರಾಟ್ ಕೊಹ್ಲಿ ಸೇರಿದಂತೆ ಉತ್ತಮ ಅನುಭವಿಗಳೊಂದಿಗೆ ಸ್ಟಾರ್ ಯುವ ಆಟಗಾರರು ಆರ್ಸಿಬಿ ಬಳಗದಲ್ಲಿದ್ದಾರೆ. ಈ ಮೂಲಕ ಮುಂದಿನ ಬಾರಿಯೂ ಸಹ ಟ್ರೋಫಿ ಎತ್ತುವ ಭರವಸೆಯಲ್ಲಿದೆ. 19ನೇ ಆವೃತ್ತಿಯಲ್ಲಿ ಆರ್ಸಿಬಿಯಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿವೆ. ಅದಕ್ಕೆಲ್ಲಾ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೈನ್ ಪ್ರಕಿಯೆ ವೇಳೆ ಬಹುತೇಕ ಈ ಬಾರಿಯ ಆಟಗಾರರನ್ನೇ ಮುಂದಿನ ಆವೃತ್ತಿಗೆ ಉಳಿಸಿಕೊಂಡಿತ್ತು. ಒಟ್ಟು 17 ಆಟಗಾರರನ್ನು ಉಳಿಸಿಕೊಂಡಿತ್ತು. ಇದೀಗ ಈ ಪಟ್ಟಿಗೆ ಮಿನಿ ಹಾರಾಜಿನಲ್ಲಿ ಎಂಟು ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದೆ.
ಕಳೆದ ಸೀಸನ್ಗಳಲ್ಲಿ ಕೊನೆಯವರೆಗೂ ಬಂದು ಬ್ಯಾಟಿಂಗ್ ಅಥವಾ ಬೌಲಿಂಗ್ನಲ್ಲಿ ಎಡವಿ ಕೊನೆಗೆ ಸೋಲು ಕಾಣುತ್ತಿತ್ತು. ಆದರೆ, ಈ ಬಾರಿ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲೂ ಉತ್ತಮ ಪ್ರದರ್ಶನದ ಮೂಲಕ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿ ಆಯಿತು. ಒಬ್ಬರು ಗಾಯಗೊಂಡು ಪಂದ್ಯದಿಂದ ಹೊರಗುಳಿದರೆ, ಮತ್ತೊಬ್ಬರು ಆ ಸ್ಥಾನ ತುಂಬಲು ತಯಾರಿರುತ್ತಿದ್ದರು.
ಇನ್ನೂ ಗಾಯಗೊಂಡು ಹೊರಗುಳಿಯುತ್ತಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ಗೆ ಇದೀಗ ಬ್ಯಾಕ್ ಅಪ್ ಆಗಿ ವೆಂಕಟೇಶ್ ಅಯ್ಯರ್ ಅವರು ಇದ್ದಾರೆ. ಇವರು ಬ್ಯಾಟಿಂಗ್ ಜೊತೆ ಬೌಲಿಂಗ್ ಸಹ ಮಾಡುತ್ತಾರೆ. ಇದರಿಂದ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ವೆಂಕಟೇಶ್ ಅಯ್ಯರ್ ಅವರು ಕಳೆದ ಬಾರಿಗಿಂತ ಕಡಿಮೆ ಬೆಲೆಗೆ ಹಾರಾಜಾಗಿದ್ದಾರೆ. ಇದರಿಂದ ಬೆಂಗಳೂರು ತಂಡಕ್ಕೆ ಲಾಭ ಆದಂತಾದೆ. ಕಳೆದ ಆವೃತ್ತಿಯಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಕೆಕೆಆರ್ 23.75 ಕೋಟಿ ರೂಪಾಯಿಗೆ ವೆಂಕಟೇಶ್ ಅಯ್ಯರ್ ನನ್ನು ಖರೀದಿ ಮಾಡಿತ್ತು.
ಆರ್ಸಿಬಿ ಪ್ರಸ್ತುತ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್ವುಡ್, ಸುಯಾಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್ ಸೇರ್ಪಡೆಯಾಗಿದ್ದಾರೆ.
-
IPL 2026 Free Ticket: ರಾಜ್ಯದ ಶಾಸಕರಿಗೆ ಪ್ರತಿ ಪಂದ್ಯಕ್ಕೂ 3 ಟಿಕೆಟ್ ಉಚಿತ; ಡಿ.ಕೆ.ಶಿವಕುಮಾರ್ -
ಐಪಿಎಲ್ ಪಂದ್ಯಗಳ ವೇಳೆ ಅಪ್ರಾಪ್ತರನ್ನು ಬಳಸಿ ಮೊಬೈಲ್ ಕಳ್ಳತನ: ಅಂತರರಾಜ್ಯ ಗ್ಯಾಂಗ್ ಬೆಂಗಳೂರಿನಲ್ಲಿ ವಶಕ್ಕೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
ಮುಂಬೈನಲ್ಲಿ ಬರೋಬ್ಬರಿ 20,00,00,000 ರೂಪಾಯಿ ಮೌಲ್ಯದ ಅಪಾರ್ಟ್ಮೆಂಟ್ ಖರೀದಿಸಿದ ಶುಭ್ಮನ್ ಗಿಲ್: ವರದಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ











Click it and Unblock the Notifications