IPL 2026 RCB: ಆರ್‌ಸಿಬಿ 30,00,000 ರೂಪಾಯಿಗೆ ಖರೀದಿಸಿದ ನಾಲ್ವರು ಯುವ ಆಟಗಾರರು
IPL 2026 RCB: ಆರ್‌ಸಿಬಿ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇತ್ತೀಚೆಗಷ್ಟೇ ನಡೆದ ಮಿನಿ ಹರಾಜಿನಲ್ಲಿ 8 ಹೊಸ ಆಟಗಾರರನ್ನು ಖರೀದಿಸಿ ತಂಡನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡಿದೆ. ಈ ಮೂಲಕ ಮುಂದಿನ ಬಾರಿಯೂ ಕಪ್ ಗೆದ್ದೇ ಗೆಲ್ಲಬೇಕು ಎಂದು ಪಣತೊಟ್ಟಿದೆ. ಇನ್ನೂ 8ರಲ್ಲಿ ನಾಲ್ವರನ್ನು ತಲಾ 30,00,000 ರೂಪಾಯಿಗೆ ಖರೀದಿ ಮಾಡಿದೆ. ಹಾಗಾದ್ರೆ, ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ಟ್ರೋಫಿ ಗೆಲ್ಲಲು ಪ್ರಮುಖ ಕಾರಣವೇ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿದ್ದು. ಅಷ್ಟರ ಮಟ್ಟಿಗೆ ಬಲಿಷ್ಠ ತಂಡವನ್ನು ಆರ್‌ಸಿಬಿ ಹೊಂದಿದೆ. ಇದೇ ಕಾರಣದಿಂದ ಈ ಬಾರಿ ರಿಟೈನ್ ಪ್ರಕ್ರಿಯೆ ವೇಳೆ ಬಹುತೇಕ ಈ ಬಾರಿಯ ಆಟಗಾರರನ್ನು ಮುಂದಿನ ಬಾರಿಗೆ ಉಳಿಸಿಕೊಂಡಿದೆ. ಜೊತೆಗೆ ಮಿನಿ ಹರಾಜಿನಲ್ಲಿ ಎಂಟು ಆಟಗಾರರನ್ನು ಖರೀದಿಸಿ ತಂಡವನ್ನು ಮತ್ತಷ್ಟು ಬಲಿಷ್ಠಪಸಿಕೊಂಡಿದೆ.

ಈ ಹಿಂದೆ ಅಂದರೆ 2025ಕ್ಕೂ ಮುಂಚೆ ಆರ್‌ಸಿಬಿ ಪ್ರತಿ ಬಾರಿಯೂ ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ಎಡವಿ ಕೊನೆ ಕ್ಷಣಗಳಲ್ಲಿ ಸೋಲನುಭವಿಸುತ್ತಿತ್ತು. ಆದರೆ, ಈ ಬಾರಿ ಒಬ್ಬರು ಹೊರಗುಳಿದರೆ, ಆ ಸ್ಥಾನ ತುಂಬಬಲ್ಲ ಆಟಗಾರರನ್ನು ಆರ್‌ಸಿಬಿ ಹೊಂದಿತ್ತು. ಇದೇ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣವಾಗಿದ್ದು. ಕೊನೆಯವರೆಗೂ ಹೀಗೆ ಉತ್ತಮ ಪ್ರದರ್ಶನ ತೋರುವ ಮೂಲಕ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಟ್ರೋಫಿ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತು.
ಇನ್ನೂ ಐಪಿಎಲ್ 2026ಕ್ಕೆ 17 ಆಟಗಾರರ ಜೊತೆ 8 ಮಂದಿ ಸೇರ್ಪಡೆಯಾಗಿದ್ದಾರೆ. ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ಟ್ವಾಲ್, ಕನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ ಅವರನ್ನು ಸ್ವಾಗತ ಮಾಡಿಕೊಂಡಿದೆ. ಇವರ ಪೈಕಿ ನಾಲ್ವರನ್ನು ಮೂಲಬೆಲೆ 30,00,000 ರೂಪಾಯಿಗೆ ಖರೀದಿ ಮಾಡಿದೆ. ಅವರು ಯಾರು ಎನ್ನುವ ಪ್ರಶ್ನೆ ಉತ್ತರ ಇಲ್ಲಿದೆ ನೋಡಿ.
ಮಿನಿ ಹರಾಜಿನಲ್ಲಿ ಸಾತ್ವಿಕ್ ದೇಸ್ವಾಲ್, ವಿಕಿ ಓಸ್ಟ್ವಾಲ್, ಕನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ ಇವರಿಗೆ ತಲಾ ₹30,00,000 ನೀಡಿ ಖರೀದಿ ಮಾಡಿದೆ. ಉಳಿದಂತೆ ವೆಂಕಟೇಶ್ ಅಯ್ಯರ್ ₹7,00,00,000, ಮಂಗೇಶ್ ಯಾದವ್ ₹5,20,00,000, ಜಾಕೋಬ್ ಡಫ್ಫಿ ₹2,00,00,000, ಜೋರ್ಡಾನ್ ಕಾಕ್ಸ್‌ಗೆ ₹75,00,000 ನೀರಿ ಬರಮಾಡಿಕೊಂಡಿದೆ.
₹30,00,000ಕ್ಕೆ ಖರೀದಿಸಿದ ಆಟಗಾರರು
* ಸಾತ್ವಿಕ್ ದೇಸ್ವಾಲ್
* ವಿಕಿ ಓಸ್ಟ್ವಾಲ್
* ಕನಿಷ್ಕ್ ಚೌಹಾಣ್
* ವಿಹಾನ್ ಮಲ್ಹೋತ್ರಾ
ಇವರನ್ನು ಬ್ಯಾಕಪ್ ಆಗಿ ತೆಗೆದುಕೊಂಡಿದ್ದು, ಯಾರಾದರೂ ಗಾಯದಿಂದ ಹೊರಗುಳಿದರೆ ಆಡಿಸುವ ಸಾಧ್ಯತೆಯಿದೆ. ಅದರಲ್ಲೂ ವೆಂಕಟೇಶ್ ಅಯ್ಯರ್ ಅವರನ್ನು ರಜತ್ ಪಾಟೀದಾರ್ ಹೊರಗುಳಿದರೆ ಈ ಸ್ಥಾನಸಲ್ಲಿ ಆಡಿಸಲಾಗುತ್ತದೆ. ಮತ್ತೊಂದೆಡೆ, ಪಾಟೀದಾರ್ ಇದ್ದು, ಈ ವೇಳೆ ದೇವದತ್ ಪಡಿಕ್ಕಲ್ ಇಂಜುರಿಯಿಂದ ಕೈಕೊಟ್ಟರೆ ಆ ಸ್ಥಾನದಲ್ಲಿ ಆಡಿಸಲಾಗುತ್ತದೆ ಎನ್ನುವ ಮಾಹಿತಿ ಇದೆ. ಆದರೆ, ಇವರ ಎಂಟ್ರಿಯಿಂದ ಆರ್‌ಸಿಬಿ ಬಲ ಮತ್ತಷ್ಟು ಹೆಚ್ಚಾಗಿದ್ದು, ಎದುರಾಳಿ ತಂಡಗಳ ನಿದ್ದೆಗೆಡಿಸಿರುವುದಂತೂ ಸತ್ಯ. ಇವರು ಬೌಲಿಂಗ್ ಕೂಡ ಮಾಡಲಿದ್ದು, ಆಲ್‌ರೌಂಡರ್ ಆಗಿದ್ದಾರೆ. ಆದರೆ, ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯಲಿದ್ದಾರೆಯಾ ಎಂದು ಕಾದುನೋಡಬೇಕಿದೆ.
ಆರ್‌ಸಿಬಿ ತಂಡದ ಆಟಗಾರರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್‌ವುಡ್, ಸುಯೇಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ಟ್ವಾಲ್, ಕನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ.












Click it and Unblock the Notifications