Get Updates
Get notified of breaking news, exclusive insights, and must-see stories!

ಐಪಿಎಲ್‌ 2026 ಮಿನಿ ಹರಾಜಿಗೆ ಯಾವ ತಂಡಗಳ ಬಳಿ ಎಷ್ಟು ಹಣ ಉಳಿದಿದೆ? ಹಾಗೂ ಆಟಗಾರರ ಪಟ್ಟಿ: ಇಲ್ಲಿದೆ ವಿವರ

IPL 2026: ಐಪಿಎಲ್‌ 2026 ಮಿನಿ ಹರಾಜು ಪ್ರಕ್ರಿಯೆ ಇಂದು (ಡಿಸೆಂಬರ್ 16) ನಡೆಯಲಿದೆ. ಹಾಗಾದ್ರೆ, ರಿಟೈನ್‌ ಪ್ರಕ್ರಿಯೆ ವೇಳೆ ಯಾವ ತಂಡಗಳು ಎಷ್ಟು ಆಟಗಾರರು ಹಾಗೂ ಹಣವನ್ನು ಉಳಿಸಿಕೊಂಡಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈಗಾಗಲೇ ಐಪಿಎಲ್‌ 2026 ಆವೃತ್ತಿಯ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಕೆ ಮಾಡಿವೆ. 49 ವಿದೇಶಿ ಕ್ರಿಕೆಟಿಗರು ಸೇರಿದಂತೆ ಒಟ್ಟು 173 ಆಟಗಾರರನ್ನು ತಂಡಗಳಲ್ಲಿ ಉಳಿಸಿಕೊಳ್ಳಲಾಗಿದೆ. ಹರಾಜಿನಲ್ಲಿ 77 ಸ್ಥಾನಗಳನ್ನು ಭರ್ತಿ ಮಾಡಬೇಕಾಗಿದ್ದು, ಒಟ್ಟು ₹237.55 ಕೋಟಿ ರೂಪಾಯಿ ಆಟಗಾರರ ಖರೀದಿಗೆ ಹಣ ಲಭ್ಯ ಇದೆ.

IPL 2026 Mini Auction Team-wise Retained Players Remaining Slots and Purse Details

ಉಳಿಸಿಕೊಂಡಿರುವ ಆಟಗಾರರು: ಇಲ್ಲಿದೆ ತಂಡವಾರು ವಿವರ

* CSK ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಸಂಜು ಸ್ಯಾಮ್ಸನ್ (ರಾಜಸ್ಥಾನ್‌ ರಾಯಲ್ಸ್‌ನಿಂದ ವಿನಿಮಯ), ಆಯುಶ್ ಮ್ಹಾತ್ರೆ, ಡೆವಾಲ್ಡ್ ಬ್ರೂವಿಸ್, ಶಿವಂ ದುಬೆ, ಉರ್ವಿಲ್ ಪಟೇಲ್, ನೂರ್ ಅಹ್ಮದ್, ನಾಥನ್ ಎಲ್ಲಿಸ್ ಶ್ರೇಯಸ್ ಗೋಪಾಲ್, ಖಲೀಲ್ ಅಹ್ಮದ್, ರಾಮಕೃಷ್ಣ ಘೋಷ್, ಮುಕೇಶ್ ಚೌಧರಿ, ಜೆಮಿ ಓವರ್ಟನ್, ಗುರ್ಜನ್ಪೀತ್ ಸಿಂಗ್, ಅನ್ಶುಲ್ ಕಂಬೊಜ್. ಇದರಲ್ಲಿ ನಾಲ್ಕು ವಿದೇಶಿ ಆಟಗಾರರಿದ್ದಾರೆ. ಇನ್ನೂ ಒಂಬತ್ತು ಸ್ಥಾನಗಳು ಉಳಿದಿವೆ.

* ಡೆಲ್ಲಿ ಕ್ಯಾಪಿಟಲ್ಸ್‌ (DC): ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಅಜಯ್ ಮಂಡಲ್, ಅಶುತೋಷ್ ಶರ್ಮಾ, ಅಕ್ಷರ್ ಪಟೇಲ್, ದುಷ್ಮಂತ ಚಮೀರಾ, ಕರುಣ್ ನಾಯರ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಸಮೀರ್ ರಿಜ್ವಿ, ಟಿ ನಟರಾಜನ್, ತ್ರಿಪುರನ ವಿಜಯ್, ಟ್ರಿಸ್ಟನ್ ಸ್ಟಬ್ಸ್, ವಿಪ್ರಾಜ್ ನಿಗಮ್. ಇದರಲ್ಲಿ 5 ವಿದೇಶಿಗರು ಇದ್ದಾರೆ. ಇನ್ನೂ 8 ಸ್ಥಾನಗಳು ಉಳಿದಿವೆ.

* ಗುಜರಾತ್ ಟೈಟಾನ್ಸ್ (GT): ಅನುಜ್ ರಾವತ್, ಗ್ಲೆನ್ ಫಿಲಿಪ್ಸ್, ಗುರ್ನೂರ್ ಬ್ರಾರ್, ಇಶಾಂತ್ ಶರ್ಮಾ, ಜಯಂತ್ ಯಾದವ್, ಜೋಸ್ ಬಟ್ಲರ್, ಕಗಿಸೊ ರಬಾಡ, ಕುಮಾರ್ ಕುಶಾಗ್ರಾ, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಅರ್ಷದ್ ಖಾನ್, ನಿಶಾಂತ್ ಸಿಂಧು, ಪ್ರಸಿದ್ಧ್ ಕೃಷ್ಣ, ರಾಹುಲ್ ತೆವಾ ಕಿಶೋರ್, ರಾಹುಲ್ ತೆವಾ ಕಿಶೊರ್ ಶಾರುಖ್ ಖಾನ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್. 4 ವಿದೇಶಗರು ಇದ್ದಾರೆ. 5 ಸ್ಥಾನಗಳು ಉಳಿದುಕೊಂಡಿವೆ.

* ಕೋಲ್ಕತ್ತಾ ನೈಟ್ ರೈಡರ್ಸ್ (KKR): ಅಜಿಂಕ್ಯ ರಹಾನೆ, ಆಂಗ್ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಹರ್ಷಿತ್ ರಾಣಾ, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ. ಇದರಲ್ಲಿ ಆರು ಮಂದಿ ವಿದೇಶಿ ಆಟಗಾರರಿದ್ದಾರೆ. ಉಳಿದ ಸ್ಥಾನಗಳು 13.

* ಲಕ್ನೋ ಸೂಪರ್ ಜೈಂಟ್ಸ್ (LSG): ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ಆಕಾಶ್ ಸಿಂಗ್, ಅರ್ಜುನ್ ತೆಂಡೂಲ್ಕರ್, ಅರ್ಶಿನ್ ಕುಲಕರ್ಣಿ, ಅವೇಶ್ ಖಾನ್, ಆಯುಷ್ ಬಡೋನಿ, ದಿಗ್ವೇಶ್ ರಾಠಿ, ಹಿಮ್ಮತ್ ಸಿಂಗ್, ಮಣಿಮಾರನ್ ಸಿದ್ಧಾರ್ಥ್, ಮ್ಯಾಥ್ಯೂ ಬ್ರೀಟ್ಜ್ಕೆ, ಮಯಾಂಕ್ ಯಾದವ್, ಮೊಹಮ್ಮದ್ ಶಮಿ, ಮಿಚೆಲ್ ಮಾರ್ಷ್, ಮೊಹ್ಸಿನ್ ಖಾನ್, ನಿಕೋಲಸ್ ಪೂರನ್, ಪ್ರಿನ್ಸ್ ಯಾದವ್, ರಿಷಭ್ ಪಂತ್, ಶಹಬಜ್ ಅಹ್ಮದ್. ಇದರಲ್ಲಿ ನಾಲ್ವರು ವಿದೇಶಿ ಆಟಗಾರರಿದ್ದಾರೆ.

* ಮುಂಬೈ ಇಂಡಿಯನ್ಸ್ (MI): ಶಾರ್ದೂಲ್ ಠಾಕೂರ್, ಶೆರ್ಫೇನ್ ರುದರ್‌ಫೋರ್ಡ್, ಮಯಾಂಕ್ ಮಾರ್ಕಾಂಡೆ, ಎಎಮ್ ಘಜನ್‌ಫರ್, ಅಶ್ವನಿ ಕುಮಾರ್, ಕಾರ್ಬಿನ್ ಬಾಷ್, ದೀಪಕ್ ಚಾಹರ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಮಿಚೆಲ್ ಸ್ಯಾಂಟ್ನರ್, ನಮನ್ ಧೀರ್, ರಘು ಶರ್ಮಾ, ರಾಜ್ ಬಾವಾ, ರಾಬಿನ್ ಮಿಂಜ್, ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ವಿಲ್ ಜಾಕ್ಸ್.

* ಪಂಜಾಬ್ ಕಿಂಗ್ಸ್ (PBKS): ಅರ್ಷದೀಪ್ ಸಿಂಗ್, ಅಜ್ಮತುಲ್ಲಾ ಒಮರ್ಜೈ, ಹರ್ನೂರ್ ಪನ್ನು, ಹರ್‌ಪ್ರೀತ್ ಬ್ರಾರ್, ಲಾಕಿ ಫರ್ಗುಸನ್, ಮಾರ್ಕೊ ಜಾನ್ಸೆನ್, ಮಾರ್ಕಸ್ ಸ್ಟೊಯಿನಿಸ್, ಮಿಚ್ ಓವನ್, ಮುಶೀರ್ ಖಾನ್, ನೆಹಾಲ್ ವಧೇರಾ, ಪ್ರಭ್‌ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಸುರಶಾಂಕ್ ಅವಿನಾಶ್, ಪೈಲಾ ಸಿಂಗ್ ಅವಿನಾಶ್ ಶೆಡ್ಜ್, ವಿಷ್ಣು ವಿನೋದ್, ವೈಶಾಕ್ ವಿಜಯ್ ಕುಮಾರ್, ಕ್ಸೇವಿಯರ್ ಬಾರ್ಟ್ಲೆಟ್, ಯಶ್ ಠಾಕೂರ್, ಯುಜ್ವೇಂದ್ರ ಚಹಾಲ್.

* ರಾಜಸ್ಥಾನ ರಾಯಲ್ಸ್ (RR): ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಸ್ಯಾಮ್ ಕರ್ರಾನ್, ಧ್ರುವ್ ಜುರೆಲ್, ಜೋಫ್ರಾ ಆರ್ಚರ್, ಕ್ವೆನಾ ಮಫಕಾ, ಲುವಾನ್-ಡ್ರೆ ಪ್ರಿಟೋರಿಯಸ್, ನಂದ್ರೆ ಬರ್ಗರ್, ರಿಯಾನ್ ಪರಾಗ್, ಷರ್ಯಾನ್ ಪರಾಗ್, ಸಂದೀಪ್ ಹೇತ್ಮಾ, ಸಂಭಾನ್ ಪರಾಗ್ ತುಷಾರ್ ದೇಶಪಾಂಡೆ, ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಯುದ್ವೀರ್ ಸಿಂಗ್.

* ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಕ್ ದರ್, ಸ್ವಪ್ನಿಲ್ ಸಿಂಗ್.

* ಸನ್‌ರೈಸರ್ಸ್‌ ಹೈದರಬಾದ್‌ (SRH): ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಬ್ರೈಡನ್ ಕಾರ್ಸೆ, ಎಶನ್ ಮಾಲಿಂಗ, ಹರ್ಷ್ ದುಬೆ, ಹರ್ಷಲ್ ಪಟೇಲ್, ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ಜಯದೇವ್ ಉನದ್ಕತ್, ಕಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್, ಆರ್ ಸ್ಮರನ್, ಟ್ರಾವಿಸ್ ಹೇಡ್, ಜೀಶಾನ್ ಅನ್ಸರಿ.

ಮಿನಿ ಹಾರಾಜಿಗೆ ಯಾವ ತಂಡ ಎಷ್ಟು ಹಣ ಉಳಿಸಿಕೊಂಡಿದೆ?

1. ಕೊಲ್ಕತ್ತಾ ನೈಟ್‌ ರೈಡರ್ಸ್‌ (KKR):₹64,30,00,000
2. ಚೆನ್ನೈ ಸೂಪರ್ ಕಿಂಗ್ಸ್‌ (CSK): ₹43,40,00,000
3. ಸನ್‌ರೈಸರ್ಸ್‌ ಹೈದರಾಬಾದ್: ₹25,50,00,000
4. ಲಕ್ನೋ ಸೂಪರ್ ಜೈಂಟ್ಸ್‌ (LSG): ₹22,95,00,000
5. ಡೆಲ್ಲಿ ಕ್ಯಾಪಿಟಲ್ಸ್‌ (DC): ₹21,80,00,000
6. ರಾಯಲ್ ಚಾಲೆಂಜರ್ಸ್‌ ಬೆಂಗಳೂರು (RCB): ₹16,40,00,000
7. ರಾಜಸ್ಥಾನ ರಾಯಲ್ಸ್‌ (RR):₹16,05,00,000
8 . ಗುಜರಾತ್ ಟೈಟಾನ್ಸ್ (GT):₹12,90,00,000
9. ಪಂಜಾಬ್‌ ಕಿಂಗ್ಸ್‌ (PBKS): ₹11,50,00,000
10. ಮುಂಬೈ ಇಂಡಿಯನ್ಸ್ (MI): 2,75,00,000

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+