IPL 2026 Mini Auction: ಐಪಿಎಲ್ 2026ರ ಮಿನಿ ಹರಾಜಿಗೆ ಮುಹೂರ್ತ ಫಿಕ್ಸ್
IPL 2026 Mini Auction: ಐಪಿಎಲ್ 2025 ಮುಗಿದಿದ್ದು, ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡು ಹಾಲಿ ಚಾಂಪಿಯನ್ ಆಗಿದೆ. ಇನ್ನೂ ಇದೀಗ ಎಲ್ಲರ ಚಿತ್ತ 2026ನೇ ಸೀಸನ್‌ನತ್ತ ನೆಟ್ಟಿದ್ದು, ಮಿನಿ ಹರಾಜು ದಿನಾಂಕ ನಿಗದಿಯಾಗಿದೆ. ಹಾಗಾದ್ರೆ, ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2025ನೇ ಆವೃತ್ತಿಯ ಫೈನಲ್‌ನಲ್ಲಿ ಆರ್‌ಸಿಬಿ ಬಲಿಷ್ಠ ಪಂಜಾಬ್ ಕಿಂಗ್ಸ್ ಮಣಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದು ಆರ್‌ಸಿಬಿ ಪಾಲಿಗೆ ಹೊಸ ಅಧ್ಯಾಯ ಆದಂತಾಯಿತು. ಆದರೆ, ಸದ್ಯ ಇದು ಮುಗಿದು ಹೋದ ಅಧ್ಯಾಯ ಆಗಿದ್ದು, ಇನ್ನೇನಿದದರೂ ಇದೀಗ ಎಲ್ಲರ ಚಿತ್ತ 2026ರ ಐಪಿಎಲ್‌ನತ್ತ ನೆಟ್ಟಿದೆ.

2026ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 13-15 ರ ನಡುವೆ ನಡೆಯುವ ಸಾಧ್ಯತೆ ಇದೆ. ಫ್ರಾಂಚೈಸಿಗಳಿಗೆ ಆಟಗಾರರನ್ನು ಉಳಿಸಿಕೊಳ್ಳಲು, ಬಿಡುಗಡೆ ಮಾಡಲು ನವೆಂಬರ್ 15 ಕೊನೇ ದಿನಾಂಕ ಆಗಿದೆ. ಹರಾಜು ಈ ಬಾರಿ ಭಾರತದಲ್ಲಿಯೇ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಥಳದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಚೆನ್ನೈ ಸೂಪರ್ ಕಿಂಗ್ಸ್ (CSK) ಕೆ ಮತ್ತು ರಾಜಸ್ಥಾನ ರಾಯಲ್ಸ್ (RR)ನಂತಹ ತಂಡಗಳು ಕೆಲವು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಅದರಲ್ಲೂ ಸಂಜು ಸ್ಯಾಮ್ಸನ್ ತಂಡ ಬದಲಿಸುವ ಸಾಧ್ಯತೆಯಿದೆ. ಯಾಕಂದ್ರೆ, ಈ ಹಿಂದೆಯೇ ಈ ಬಗ್ಗೆ ಮಾತುಗಳು ಜೋರಾಗಿ ಕೇಳಿಬಂದಿದ್ದವು.
ಈಗಾಗಲೇ 2026 ಐಪಿಎಲ್ ಆರಂಭವಾಗಲು ಇನ್ನೂ ಹಲವು ತಿಂಗಳೇ ಬಾಕಿ ಇದ್ದರೂ ಸಹ ಕಳೆದ ಎರಡ್ಮೂರು ತಿಂಗಳಿನಿಂದಲೂ ಆಟಗಾರರನ್ನು ಬದಲಿಸುವ ಬಗ್ಗೆ ತೆರೆಮರೆಯಲ್ಲಿ ಚರ್ಚೆಗಳು ಶುರುವಾಗಿದ್ದವು. ಇನ್ನು ಇದೀಗ ಮಿನಿ ಹರಾಜಿಗೆ ಎಲ್ಲಾ ಫ್ರಾಂಚೈಸಿಗಳು ತಯಾರಿ ಶುರು ಮಾಡಿವೆ. ಇತ್ತ ಬಿಸಿಸಿಐ ಸಹ ಮಿನಿ ಹರಾಜಿಗೆ ದಿನಾಂಕ ನಿಗದಿಪ ಮಾಡಿದೆ.
ಕ್ರಿಕ್‌ಬಜ್ ವರದಿ ಪ್ರಕಾರ, ಐಪಿಎಲ್ 2026 ರ ಮಿನಿ ಹರಾಜು ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆ ಡಿಸೆಂಬರ್ 13 ಮತ್ತು 15ರ ನಡುವೆ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ತಂಡದಿಂದ ಬಿಡುಗಡೆ ಮಾಡಲು ನವೆಂಬರ್ 15ರ ವರೆಗೆ ಸಮಯಾವಕಾಶವನ್ನು ಕಲ್ಪಿಸಲಾಗಿದೆ.
ಇದೀಗ ಐಪಿಎಲ್ 2026 ಮಿನಿ ಹರಾಜು ಪ್ರಕ್ರಿಯೆ ಎಲ್ಲಿ ನಡೆಯುತ್ತದೆ ಎಂಬುದು ಬಹುತೇಕರ ಪ್ರಶ್ನೆಯಾಗಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಐಪಿಎಲ್ 2023ರ ಹರಾಜು ದುಬೈನಲ್ಲಿ ನಡೆದಿತ್ತು. ಹಾಗೆಯೇ 2024ರ ಹರಾಜು ಜೆಡ್ಡಾದಲ್ಲಿ ನಡೆದಿತ್ತು. ಆದರೆ, ಬಿಸಿಸಿಐ ಈ ಬಾರಿ ಭಾರತದಲ್ಲಿ ಮಿನಿ ಹರಾಜನ್ನು ನಡೆಸಿದರೂ ನಡೆಸಬಹುದು ಎನ್ನುವ ಮಾಹಿತಿಯಂತೂ ಇದೆ. ಮಾಹಿತಿ ಪ್ರಕಾರ, ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ ಹೊರತುಪಡಿಸಿ ಉಳಿದ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ. ಆದರೂ ಏನಾಗುತ್ತದೆಯೋ ಎಂದು ಕಾದುನೋಡಬೇಕಷ್ಟೇ.












Click it and Unblock the Notifications