IPL 2025: ಆರ್‌ಸಿಬಿ-ರಾಯಸ್ಥಾನ್ ರಾಯಲ್ಸ್‌ಗೆ ಪಂದ್ಯ ರದ್ದಾಗುವ ಆತಂಕ
IPL 2025 RCB Vs RR Match: ಐಪಿಎಲ್ 2025ರ ಆವೃತ್ತಿಯಲ್ಲೂ ಆರ್‌ಸಿಬಿ ಹೋಂ ಗ್ರೌಂಡ್ ಬಿಟ್ಟು ತವರಿನಿಂದಾಂಚೆ ಆಡಿದ ಎಲ್ಲಾ ಪಂದ್ಯಗಳಲ್ಲೂ ಗೆಲ್ಲುತ್ತಿದೆ. ಆದರೆ, ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರ ಸೋಲನುಭವಿಸುತ್ತಿದೆ. ನಾಳೆಯಾದ್ರೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಬೀಗುವ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ. ಆದರೆ, ಈ ನಡುವೆಯೇ ಅಡೆತಡೆಯೊಂದು ಕಾಡುತ್ತಿದೆ. ಅದೇನು ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಆರ್‌ಸಿಬಿಯು ಇದುವರೆಗೂ ತವರು ಮೈದಾನವಾದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದೆ. ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ದ ಪಂದ್ಯಗಳನ್ನು ಸೋತಿದೆ. ನಾಳೆ ಸಹ ರಾಜಸ್ಥಾನ್ ರಾಯಲ್ಸ್ ವಿರುದ್ಧ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಪಂದ್ಯ ಇದ್ದು, ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದೇ ಗೆಲ್ಲಲೇಬೇಕು ಎನ್ನವ ಪಣ ತೊಟ್ಟಿದೆ. ಆದರೆ, ಆತಂಕವೊಂದು ಶುರುವಾಗಿದೆ.

ಕಳೆದ ಪಂದ್ಯ ಪಂಜಾಬ್ ಕಿಂಗ್ಸ್ ವಿರುದ್ಧ ತವರು ಮೈದಾನದಲ್ಲೇ ಸೋಲನುಭವಿಸಿತ್ತು. ಇದಕ್ಕೇ ಕಾರಣವೂ ಇದೆ. ಬೆಂಗಳೂರಿನಲ್ಲಿ ಅಂದು ಭಾರೀ ಮಳೆ ಸುರಿದ ಕಾರಣ ಪಂದ್ಯವನ್ನು 14 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ಬ್ಯಾಟರ್‌ಗಳು ಪಿಚ್ ತೇವಾಂಶದಿಂದ ಕೂಡಿದ ಕಾರಣ ರನ್‌ಗಳನ್ನು ಕಲೆಹಾಕುವಲ್ಲಿ ಪರದಾಡಿದರು. ಅಲ್ಲದೆ, ಉತ್ತಮ ಪ್ರದರ್ಶನ ತೋರಬೇಕಿದ್ದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ತೆರಳಿದರು.
ಈ ಎರಡು ವಿಕೆಟ್‌ಗಳು ಬಿದ್ದ ಬಳಿಕ ಆರ್‌ಸಿಬಿ ತುಂಬಾ ಸಂಕಷ್ಟಕ್ಕೆ ಒಳಗಾಯಿತು. ಮಧ್ಯಮ ಕ್ರಮಾಂಕದಲ್ಲಿ ಬಂದತಂಹ ಬ್ಯಾಟರ್‌ಗಳು ಕೂಡ ಹೇಳಿಕೊಳ್ಳುವಷ್ಟು ಬ್ಯಾಟಿಂಗ್ ಪ್ರದರ್ಶನ್ ತೋರದೇ ಸರದಿಯಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಪೆವಿಲಿಯನ್‌ನತ್ತ ತೆರಳುದರು. ಆಗ ತಂಡವು 50 ರನ್ ದಾಟುವುದು ಕಷ್ಟ ಎನ್ನುವ ಪರಿಸ್ಥಿತಿ ಇತ್ತು. ಆದರೆ, ಟೀಂ ಡೆವಿಡ್ ಆಪದ್ಭಾಂದವನಂತೆ ಏಕಾಂಗಿ ಓರಾಟ ನಡೆಸಿ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡದ ಮೊತ್ತವನ್ನು 95ಕ್ಕೆ ಕೊಂಡೋಯ್ದರು.
ಬಳಿಕ ಆರ್‌ಸಿಬಿ ಪರ ಬೌಲರ್‌ಗಳು ಕೂಡ ಅಷ್ಟೇ ಚೆನ್ನಾಗಿ ಬೌಲಿಂಗ್ ಮಾಡಿದರು. ಆದರೂ, ಈ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಕೇವಲ 12.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ ಸುಲಭವಾಗಿ ಗೆಲುವು ಸಾಧಿಸಿತು. ಈ ಮೂಲಕ ಆರ್‌ಸಿಬಿಯು ಬೇಡವಾದದ ದಾಖಲೆಯೊಂದನ್ನು ನಿರ್ಮಾಣ ಮಾಡಿತು.
ಪಂಜಾಬ್ ಮೇಲೆ ಆರ್‌ಸಿಬಿ ಸೋಲಿಗೆ ಮಳೆಯೂ ಕೂಡ ಕಾರಣವಾಗಿದೆ. ಸಾಮಾನ್ಯವಾಗಿ ಈ ಪಿಚ್‌ನಲ್ಲಿ ಚೇಸ್ ಮಾಡಿದ ತಂಡವೇ ಹೆಚ್ಚು ಗೆಲುವು ಸಾಧಿಸಿರುವ ಉದಾಹರಣೆಗಳಿವೆ. ಅದರಲ್ಲೂ ಪಂದ್ಯದ ವೇಳೆ ಸಾಧರಣ ಮಳೆ ಬಂದು ನಿಂತರೂ ಕೂಡ ಮೊದಲು ಬ್ಯಾಟ್ ಮಾಡುವ ತಂಡಕ್ಕೆ ತುಂಬಾ ಪರಿಣಾಮ ಬೀರಲಿದೆ. ಪಿಚ್ ತೇವಾಂಶ ಕಾರಣ ಬ್ಯಾಟರ್‌ಗಳು ರನ್ ಕದಿಯಲು ತುಂಬಾ ಕಷ್ಟವಾಗುತ್ತದೆ. ಆದರೆ, ನಂತರ ಬ್ಯಾಟ್ ಮಾಡುವ ತಂಡಕ್ಕೆ ತೇವಾಂಶ ಮಾಯವಾಗಿರುತ್ತದೆ. ಇದು ಸುಲಭವಾಗಿ ರನ್ ಕಲೆಹಾಲು ತುಂಬಾ ಸಹಾಯಕವಾಗಲಿದೆ. ಅಂದು ಆಗಿದ್ದು ಅದೇ.
ಇನ್ನು ನಾಳೆ ಅಂದರೆ ಏಪ್ರಿಲ್ 24ರಂದು ಆರ್‌ಸಿಬಿಯು ಆರ್‌ಆರ್ ವಿರುದ್ಧ ಕಾದಾಡಲು ಸಜ್ಜಾಗಿದೆ. ಈ ನಡುವೆಯೇ ಎರಡು ತಂಡಗಳಿಗೂ ಮಳೆಯ ಆತಂಕ ಶುರುವಾಗಿದೆ. ಭಾರೀ ಮಳೆಯಾದ್ರೆ, ಪಂದ್ಯ ರದ್ದು ಮಾಡಲಾಗುತ್ತದೆ. ಇದೇ ಆತಂಕ ಇದೀಗ ಎರಡು ತಂಡಗಳಿಗೂ ಕಾಡತೊಡಗಿದೆ.
ಹವಾಮಾನ ಇಲಾಖೆ ಪ್ರಕಾರ, ಏಪ್ರಿಲ್ 24, ಗುರುವಾರ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದರಿಂದ ಎರಡು ತಂಡಗಳು ಪಂದ್ಯ ರದ್ದಾಗುವ ಆತಂಕದಲ್ಲಿವೆ.












Click it and Unblock the Notifications