IPL 2025 RCB vs KKR: ಎರಡು ತಂಡಗಳ ಪ್ಲೇಯಿಂಗ್ 11 ಹೇಗಿರಲಿದೆ?: ಇಲ್ಲಿದೆ ಮಾಹಿತಿ
IPL 2025 KKR vs RCB: ಎಲ್ಲರೂ ಕಾತರದಿಂದ ಕಾಯುತ್ತಿರುವ ಐಪಿಎಲ್ 2025ನೇ ಆವೃತ್ತಿಯ ಮೊದಲ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ನಡೆಯಲಿದೆ. ಹಾಗಾದ್ರೆ ಎರಡು ತಂಡಗಳ 11ರ ಬಳಗದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಸೆಣಸಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಎರಡು ತಂಡಗಳ ಆಡುವ 11ರ ಬಳಗ ಹೇಗಿರಲಿದೆ ಎಂವ ಕುತೂಹಲ ಎಲ್ಲಾರಲ್ಲೂ ಇದೆ.

ಐಪಿಎಲ್ 2025ರ ಸೀಸನ್ ಮಾರ್ಚ್ 22ರ ಶನಿವಾರದಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪ್ರಾರಂಭ ಆಗುತ್ತಿದೆ. 18ನೇ ಆವೃತ್ತಿಯ ಲೀಗ್‌ನ ಮೊದಲ ಪಂದ್ಯ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ನಡೆಯಲಿದೆ. ಇದು ಮೊದಲ ಪಂದ್ಯವಾಗಿದ್ದು, ಎರಡೂ ತಂಡಗಳು ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸುವ ಕಾತರದಲ್ಲಿದೆ.
ಆರ್ಸಿಬಿ ತಂಡದಲ್ಲಿ ಯಾರಿಗೆ ಸ್ಥಾನ?: ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನ್ನಿಂಗ್ಸ್ ಮೊದಲ ಕ್ರಮಾಂಕದಲ್ಲಿ, ನಾಯಕ ರಜತ್ ಪಾಟಿದಾರ್ ಮೊದಲಿನಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದು, 5ನೇ ಕ್ರಮಾಂಕದಲ್ಲಿ ಬರುವ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಹಾಗೂ ಫಿನಿಷರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆರನೇ ಕ್ರಮಾಂಕಕ್ಕೆ ಪೈಪೋಟಿ ಇದ್ದು, ಜಾಕೋಬ್ ಬೆಥೆಲ್ ಅಥವಾ ಟಿಮ್ ಡೇವಿಡ್ ಅವರಲ್ಲಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಕಾದುನೋಡಬೇಕಿದೆ.
ಇನ್ನು ಸ್ಪಿನ್ ವಿಭಾಗದಲ್ಲಿ ಆಲ್‌ರೌಂಡರ್ ಆಗಿ ಕೃನಲ್ ಪಾಂಡ್ಯರನ್ನು ಆಡಿಸುವುದು ಖಚಿತವಾಘಿದೆ. ಜೊತೆಗೆ ಸುಯಾಶ್ ಶರ್ಮಾ ಅಥವಾ ಸ್ವಪ್ನಿಲ್ ಸಿಂಗ್ ಇರಲಿದ್ದಾರೆ. ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್, ಆಸ್ಟ್ರೇಲಿಯಾದ ಅನುಭವಿ ಜೋಶ್ ಹ್ಯಾಜಲ್‌ವುಡ್ ಹಾಗೂ ಯಶ್ ದಯಾಳ್ ಮುನ್ನಡೆಸಲಿದ್ದಾರೆ. ರಸಿಕ್ ಸಲಾಂ ದಾರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಸಹ ಇದ್ದು, ಅವರಿಗೆ ಅವಕಾಶ ಸಿಗುತ್ತದೆಯಾ ಎಂದು ಕಾದುನೋಡಬೇಕಿದೆ.
ಆರ್‌ಸಿಬಿಯ ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಾಕೋಬ್ ಬೆಥೆಲ್/ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ/ ಸ್ವಪ್ನಿಲ್ ಸಿಂಗ್.
ಕೆಕೆಆರ್ ತಂಡ ಹೀಗಿರಲಿದೆ: ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಸುನೀಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಕೆಕೆಆರ್ ಪರ ಆರಂಭಿಕರಾಗಿ ಆಡಬಹುದು. ಕಳೆದ ಕೆಲವು ವರ್ಷಗಳಿಂದ ಕೆಕೆಆರ್ ಪರ ಆರಂಭಿಕ ಆಟಗಾರನಾಗಿ ಸುನೀಲ್ ನರೈನ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಡಿ ಕಾಕ್ ಈ ವರ್ಷವಷ್ಟೇ ಕೆಕೆಆರ್ ಸೇರ್ಪಡೆಯಾಗಿದ್ದು, ಈ ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳು ಈ ವರ್ಷ ಕೆಕೆಆರ್ ಪರ ಆರಂಭಿಕರಾಗಿ ಬರಲಿದ್ದಾರೆ ಎನ್ನಲಾಗುತ್ತಿದೆ.
ನಾಯಕ ಅಜಿಂಕ್ಯ ರಹಾನೆ 3ನೇ ಕ್ರಮಾಂಕ, ನಂತರ ವೆಂಕಟೇಶ್ ಅಯ್ಯರ್ ಆದಲಿದ್ದು, ಮಧ್ಯಮ ಹಾಗೂ ಕೊನೇ ಕ್ರಮಾಂಕದಲ್ಲಿ ಅಂಗ್‌ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್ ಮತ್ತು ರಮಣದೀಪ್ ಸಿಂಗ್ ಬ್ಯಾಟಿಂಗ್ ಮಾಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಆಡುವುದು ಬಹುತೇಕ ಖಚಿತ ಆದಂತಾಗಿದೆ. ವೇಗದ ಬೌಲರ್ಗಳಾಗಿ ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾಗೆ ಅವಕಾಶ ದೊರಕುವ ಸಾಧ್ಯತೆಯಿದೆ.
ಕೆಕೆಆರ್ ತಂಡ: ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿ.ಕೀ.), ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ಅಂಗ್ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ರಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾ/ವರುಣ್ ಚಕ್ರವರ್ತಿ.
-
Virat Kohli: ಘನತೆಗೆ ತಕ್ಕ ಆಟ ಇಲ್ಲ; ವಿರಾಟ್ ಕೊಹ್ಲಿ ಬದಲಿಗೆ ಬೆಥೆಲ್ ಆಡಿಸುವ ಸೂಚನೆ ನೀಡಿದ್ರಾ ಭಾರತದ ಮಾಜಿ ಕ್ರಿಕೆಟಿಗ? -
ಸುಮ್ನೆ ಬಾಲ್ ಕೊಡೋ ಮಾರಾಯ.. ನಾ ಕೊಡಕಿಲ್ಲ ಏನ್ ಮಾಡ್ತೀರಾ? ಟಿಮ್ ಡೇವಿಡ್-ಅಂಪೈರ್ ಫನ್ನಿ ವಿಡಿಯೋ ಭಾರೀ ವೈರಲ್ -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಅನುಷ್ಕಾ-ಅನನ್ಯಾ ಬಿರ್ಲಾ: ನೆಟ್ಟಿಗರ ಮನಗೆದ್ದ ಆ ಹ್ಯಾಂಡ್ಶೇಕ್ ವಿಡಿಯೋ -
ಬೆಂಗಳೂರಲ್ಲಿ RCB ಪಂದ್ಯ: ಏ.15ರಂದು ಸ್ಟೇಡಿಯಂ ಸುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು











Click it and Unblock the Notifications