CSK Vs RCB: ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದ ಸಮಯ, ಸ್ಥಳ ಮತ್ತು ನೇರ ಪ್ರಸಾರದ ವಿವರ
IPL 2025 CSK Vs RCB: ಐಪಿಎಲ್ 2025ರ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈ ವೋಲ್ಟೇಜ್ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಸಾಗರವೇ ಕಾತರದಿಂದ ಕಾತರದಿಂದ ಕಾಯುತ್ತದೆ. ಪಂದ್ಯದ ಸಮಯ, ಸ್ಥಳ ಹಾಗೂ ಯಾರೆಲ್ಲಾ ಆಟಗಾರರು ಇರಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆರ್‌ಸಿಬಿ-ಚೈನ್ನೈ ಪಂದ್ಯವನ್ನು ಅತೀ ಹೆಚ್ಚು ಜನ ವೀಕ್ಷಣೆ ಮಾಡುತ್ತಾರೆ. ಯಾಕಂದ್ರೆ ಈ ಎರಡು ತಂಡಗಳು ಮೊದಲಿನಿಂದಲೂ ತೀವ್ರ ಪೈಪೋಟಿ ಕೊಟ್ಟುಕೊಂಡು ಅಭಿಮಾನಿಗಳನ್ನು ರಂಜಿಸುವ ತಂಡಗಳಾಗಿವೆ. ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭವಾಗಲಿದ್ದು, ಇದಕ್ಕೂ ಮುನ್ನವೇ ಕೆಲ ಚೈನ್ನೈ ಅಭಿಮಾನಿಗಳು ಕೆಟ್ಟ ಪೋಸ್ಟರ್‌ಗಳ ಮೂಲಕ ಆರ್‌ಸಿಬಿ ತಂಡವನ್ನು ಕೆಣಕುವ ಕೆಲಸವನ್ನು ಮಾಡಿದ್ದಾರೆ. ಇದೇ ಸೇಡನ್ನು ಇಂದಿನ ಪಂದ್ಯದಲ್ಲಿ ತೀರಿಸಿಕೊಳ್ಳಲು ರಜತ್ ಪಡೆ ಸಿದ್ಧವಾಗಿದೆ.

ಇಂದು ರಜತ್ ಪಟಿದಾರ್ ನಾಯಕತ್ವದ ಆರ್‌ಸಿಬಿ ಇಂದು ಸಿಎಸ್‌ಕೆ ವಿರುದ್ಧ ಸೆಣಸಲಿದೆ. ಇಂದಿನ ಪಂದ್ಯವು ಚೆನ್ನೈನಲ್ಲಿರುವ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಕಳೆದ 17 ಸೀಸನ್‌ಗಳಲ್ಲೂ ಆರ್‌ಸಿಬಿ ಚೆನ್ನೈ ವಿರುದ್ಧ ಗೆದ್ದ ಇತಿಹಾಸವೇ ಇಲ್ಲ. ಆದ್ದರಿಂದ ಇಲ್ಲಿ ನಡೆಯುವ ಇಂದಿನ ಪಂದ್ಯವನ್ನಾದರೂ ಗೆಲ್ಲಬೇಕಾಗಿದ್ದು, ರಜತ್ ಪಟಿದಾರ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಆರ್‌ಸಿಬಿ ಕೆಕೆಆರ್ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಗೆದ್ದರೆ, ಸಿಎಸ್‌ಕೆ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ತಂಡಗಳು ಮೊದಲ ಪಂದ್ಯಗಳಲ್ಲಿ ಗೆದ್ದು ಬೀಗಿದ್ದು, ಇಂದು ಎರಡನೇ ಗೆಲುವಿನ ನೀರಿಕ್ಷೆಯಲ್ಲಿವೆ.
ರುತುರಾ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಜತ್ ಪಾಟಿದರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಎರಡನೇ ಪಂದ್ಯದ ಗೆಲುವಿನ ನೀರೀಕ್ಷೆಯಲ್ಲಿವೆ. ಕಳೆದ ಬಾರಿ ಎರಡು ತಂಡಗಳು ಮುಖಾಮುಖಿಯಾದಾಗ, ಆರ್‌ಸಿಬಿ ಗೆಲುವು ಸಾಧಿಸಿ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಸಿಎಸ್‌ಕೆ ಲೀಗ್ ಹಂತಂದಲೇ ಹೊರಬಿದಿತ್ತು.
ಪಂದ್ಯದ ಸಮಯ, ಸ್ಥಳ ಹಾಗೂ ನೇರ ಪ್ರಸಾರದ ವಿವರ: ಇನ್ನು ಇಂದು ನಡೆಯುವ ಈ ಎರಡು ತಂಡಗಳ ನಡುವಿನ ಬಹುನಿರೀಕ್ಷಿತ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30ರಿಂದ ಆರಂಭವಾಗಲಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಟಿವಿ ಚಾನೆಲ್‌ನಲ್ಲಿ ಮಾಡಲಾಗುತ್ತದೆ. ಅಲ್ಲದೆ, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ನೇರ ಪ್ರಸಾರ ವೀಕ್ಷಣೆ ಮಾಡಬಹುದು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಗಮನಿಸಬೇಕಾದ ಇಬ್ಬರು ಶ್ರೇಷ್ಠ ಆಟಗಾರರಾಗಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಶಿಖರ್ ಧವನ್ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಸಾಲಿಗೆ ಸೇರಲು ವಿರಾಟ್ ಕೋಹ್ಲಿ ಕೇವಲ 5 ರನ್‌ಗಳನ್ನು ಮಾತ್ರ ಕಲೆಹಾಕಬೇಕಿದೆ. ಈ ಮೂಲಕ ಇಂದು ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಗೆ ಸಿದ್ಧರಾಗಿದ್ದಾರೆ.
ಎರಡೂ ತಂಡಗಳು ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಜಯಗಳಿಸಿದವು. ಆರ್‌ಸಿಬಿ ತಂಡವು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಜಯ ಸಾಧಿಸಿತು. ಸಿಎಸ್‌ಕೆ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿತ್ತು. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿಯು ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ತಂಡವು ನಾಲ್ಕನೇ ಸ್ಥಾನದಲ್ಲಿದೆ.
ಆರ್‌ಸಿಬಿ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್/ಜೇಕಬ್ ಬೆಥೆಲ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.
ಸಿಎಸ್‌ಕೆ ಸಂಭಾವ್ಯ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಎಂ.ಎಸ್.ಧೋನಿ (ವಿ.ಕೀ.), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್.












Click it and Unblock the Notifications