IPL 2025 RCB Play off: ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ
IPL 2025 RCB Play off: ಐಪಿಎಲ್ 2025ರ ಪ್ಲೇ ಆಫ್ ರೇಸ್‌ನಿಂದ ಕೆಲ ತಂಡಗಳು ಈಗಾಗಲೇ ಹೊರಬಿದ್ದಿದ್ದು, ಇನ್ನು ಕೆಲವು ಭಾರೀ ಪೈಪೋಟಿ ನಡೆಸುತ್ತಿವೆ. ಹಾಗಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಥೆ ಏನು ಎನ್ನವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆರ್‌ಸಿಬಿ ಇದುವರೆಗೂ ಒಂದೇ ಒಂದು ಐಪಿಎಲ್ ಟ್ರೋಫಿ ಗೆದ್ದಿಲ್ಲ. ಹಾಗಂತ ಅಭಿಮಾನಿಗಳ ಸಂಖ್ಯೆಯೇನು ಕಡಿಮೆ ಆಗಿಲ್ಲ. ಬದಲಾಗಿ ಹೆಚ್ಚಾಗುತ್ತಲೇ ಇದೆ. ಇನ್ನೂ ಈ ಬಾರಿ ಆಡಿರುವ 8 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ತವರಿನಾಚೆ ಗೆದ್ದರೆ, ತವರಿನಲ್ಲಿ ಸತತವಾಗಿ ಮೂರು ಪಂದ್ಯಗಳನ್ನು ಸೋತಿದೆ.

ಇಂದು (ಏಪ್ರಿಲ್ 24) ಕೂಡ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಆರ್‌ಆರ್ ವಿರುದ್ಧ ಸೆಣಸಲಿದೆ. ರಾಜಸ್ಥಾನ್ ರಾಯಲ್ಸ್‌ಗೆ ಇದು ಮಾಡು ಇಲ್ಲದೆ ಮಡಿ ಪಂದ್ಯವಾದ್ರೆ, ಆರ್‌ಸಿಬಿ ಪಾಲಿಗೆ ತವರಿನಲ್ಲಿ ಗೆದ್ದೇ ಗೆಲ್ಲಬೇಕೆನ್ನುವ ಹಠ. ಅಲ್ಲದೆ ಪ್ಲೇ ಆಫ್ ಲೆಕ್ಕಾಚಾರ ಕೂಡ ನಿರ್ಧಾರ ಆಗಲಿದೆ.
ಇದೀಗ ಪ್ಲೇ ಆಫ್‌ಗಾಗಿ ಹಲವು ತಂಡಗಳು ಭಾರೀ ಪೈಪೋಟಿ ನಡೆಸುತ್ತಿವೆ. ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಇನ್ನೂ ಕೆಳಗಡೆ ಈ ತಂಡಗಳನ್ನು ಕಾಲೆಳೆದು ಮೇಲೆ ಬರಲು ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಮಡಗಳು ಕೂಡ ಪೈಪೋಟಿ ನಡೆಸುತ್ತಿವೆ.
ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲಿನೊಂದಿಗೆ 12 ಅಂಕಗಳೊಂದಿಗೆ ಅಗ್ರ 2 ಸ್ಥಾನದಲ್ಲಿವೆ. ಈ ತಂಡಗಳು ಉಳಿದ 6 ಪಂದ್ಯಗಳಲ್ಲಿ ಕೇವಲ 2 ಗೆದ್ದರೂ ಪ್ಲೇಆಫ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ 8 ಪಂದ್ಯಗಳಲ್ಲಿ 5 ಗೆಲುವು ಮತ್ತು 3 ಸೋಲಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 10 ಅಂಕಗಳನ್ನು ಗಳಿಸಿವೆ. ಈ ತಂಡಗಳು ಉಳಿದ 6 ಪಂದ್ಯಗಳಲ್ಲಿ ಕನಿಷ್ಠ 3 ಗೆಲುವು ಸಾಧಿಸಲೇಬೇಕಾಗುತ್ತದೆ. ಹಾಗಾದ್ರೆ ಮಾತ್ರ ಪ್ಲೇ ಆಫ್‌ಗೆ ತಲುಪಲು ಸಾಧ್ಯ ಆಗಲಿದೆ.
ಪಂಜಾಬ್ ಕಿಂಗ್ಸ್ ಸಹ ಗೆಲುವುಗಳನ್ನ ಸಾಧಿಸಿಕೊಂಡು ಬರುತ್ತಿದೆ. ಆದರೆ ತವರಿನಲ್ಲಿ ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಂಡಿದೆ. ಆದರೆ ಇನ್ನೂ 6 ಪಂದ್ಯಗಳಿರುವುದರಿಂದ 3 ಗೆಲುವು ಪಡೆದರೆ ತಂಡದ ಪ್ಲೇ ಆಫ್‌ಗೆ ಬರುವ ಸಾಧ್ಯತೆಯಿದೆ.
ಪ್ಲೇಆಫ್ ರೇಸ್‌ನಲ್ಲಿ ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸಾಕಷ್ಟು ಬಲಿಷ್ಠವಾಗಿವೆ. ಈ ತಂಡಗಳ ಇತ್ತೀಚಿನ ಪ್ರದರ್ಶನ ನೋಡುತ್ತಿದ್ದರೆ, ಪ್ಲೇಆಫ್‌ಗೆ ತಲುಪುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆದರೆ, ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಮತ್ತು ಕೆಕೆಆರ್ ತಂಡಗಳಿಗೆ ಪ್ಲೇಆಫ್ ರೇಸ್‌ನಲ್ಲಿ ಉಳಿದುಕೊಳ್ಳಲು ದಾರಿ ಅಷ್ಟೊಂದು ಸುಲಭವಾಗಿಲ್ಲ.












Click it and Unblock the Notifications