IPL 2025: ಆರ್‌ಸಿಬಿ ಪಂದ್ಯಗಳು ಯಾವಾಗ? ದಿನಾಂಕ, ಸ್ಥಳ, ಸಮಯದ ಮಾಹಿತಿ
ಐಪಿಎಲ್ 2025ರ ವೇಳಾಪಟ್ಟಿ (IPL 2025 Schedule) ಭಾನುವಾರ ಸಂಜೆ ಬಿಡುಗಡೆಯಾಗಿದೆ. ಮಾರ್ಚ್ 22ರಿಂದ ಐಪಿಎಲ್ ಹಬ್ಬ ಆರಂಭವಾಗಲಿದ್ದು, ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ಕೆಕೆಆರ್ ತಂಡವು ಆರ್ ಸಿಬಿ ತಂಡವನ್ನು ಎದುರಿಸಲಿದೆ.
2024ರ ಐಪಿಎಲ್‌ನಲ್ಲೂ ಆರ್ ಸಿಬಿ ಉದ್ಘಾಟನಾ ಪಂದ್ಯವನ್ನು ಆಡಿತ್ತು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಆರ್ ಸಿಬಿ ಸೆಣೆಸಿತ್ತು. ಈ ಬಾರಿ ಐಪಿಎಲ್‌ನಲ್ಲೂ ಆರ್ ಸಿಬಿ ಆರಂಭಿಕ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಬಾರಿ ಕೂಡ ಆರ್ ಸಿಬಿ ತವರಿನಲ್ಲಿ 7 ಪಂದ್ಯಗಳನ್ನು ಆಡಲಿದೆ.

ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ
1) ಮಾರ್ಚ್ 22, ಶನಿವಾರ, ಕೆಕೆಆರ್ vs ಆರ್‌ಸಿಬಿ, ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತಾ.
2) ಮಾರ್ಚ್ 28, ಶುಕ್ರವಾರ, ಸಿಎಸ್‌ಕೆ vs ಆರ್‌ಸಿಬಿ, ಸ್ಥಳ: ಚಿದಂಬರಂ ಕ್ರೀಡಾಂಗಣ, ಚೆನ್ನೈ.
3) ಏಪ್ರಿಲ್ 2, ಬುಧವಾರ, ಆರ್‌ಸಿಬಿ vs ಗುಜರಾತ್ ಟೈಟಾನ್ಸ್. ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
4) ಏಪ್ರಿಲ್ 7, ಸೋಮವಾರ, ಮುಂಬೈ ಇಂಡಿಯನ್ಸ್ vs ಆರ್‌ಸಿಬಿ. ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ.
5) ಏಪ್ರಿಲ್ 10, ಗುರುವಾರ, ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್, ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
6) ಏಪ್ರಿಲ್ 13, ಭಾನುವಾರ, ರಾಜಸ್ಥಾನ ರಾಯಲ್ಸ್ vs ಆರ್‌ಸಿಬಿ. ಸ್ಥಳ: ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣ, ಜೈಪುರ.
7) ಏಪ್ರಿಲ್ 18, ಶುಕ್ರವಾರ, ಆರ್‌ಸಿಬಿ vs ಪಂಜಾಬ್ ಕಿಂಗ್ಸ್, ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
8) ಏಪ್ರಿಲ್ 20, ಭಾನುವಾರ, ಪಂಜಾಬ್ ಕಿಂಗ್ಸ್ vs ಆರ್‌ಸಿಬಿ. ಸ್ಥಳ: ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣ, ಮುಲ್ಲಾನ್‌ಪುರ.
9) ಏಪ್ರಿಲ್ 24, ಗುರುವಾರ, ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್, ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
10) ಏಪ್ರಿಲ್ 27, ಭಾನುವಾರ, ಡೆಲ್ಲಿ ಕ್ಯಾಪಿಟಲ್ಸ್ vs ಆರ್‌ಸಿಬಿ. ಸ್ಥಳ: ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ.
11) ಮೇ 3, ಶನಿವಾರ, ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್, ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
12) ಮೇ 9, ಶುಕ್ರವಾರ, ಲಕ್ನೋ ಸೂಪರ್ ಜೈಂಟ್ಸ್ vs ಆರ್‌ಸಿಬಿ. ಸ್ಥಳ: ಎಕಾನ ಕ್ರಿಕೆಟ್ ಸ್ಟೇಡಿಯಂ, ಲಕ್ನೋ.
13) ಮೇ 13, ಗುರುವಾರ, ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್, ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
14) ಮೇ 17, ಶನಿವಾರ, ಆರ್‌ಸಿಬಿ vs ಕೋಲ್ಕತಾ ನೈಟ್ ರೈಡರ್ಸ್, ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.












Click it and Unblock the Notifications