RCB Vs PBKS: ಪಂಜಾಬ್ ವಿರುದ್ಧ ಆರ್‌ಸಿಬಿ ಪರ ಲಿವಿಂಗ್‌ಸ್ಟೋನ್ ಬದಲಿಗೆ ಈ ಇಬ್ಬರು ಆಲ್‌ರೌಡರ್‌ಗಳಲ್ಲಿ ಒಬ್ಬರಿಗೆ ಅವಕಾಶ..
IPL RCB Vs PBKS: ಐಪಿಎಲ್ 2025ರ 37ನೇ ಪಂದ್ಯದಲ್ಲಿ ಮತ್ತೆ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಇಂದು (ಏಪ್ರಿಲ್ 20) ಮುಖಾಮುಖಿಯಾಗಲಿದೆ. ಈಗಾಗಲೇ ಕಳೆದ ಪಂದ್ಯದಲ್ಲಿ ಇದೇ ತಂಡದ ವಿರುದ್ಧ ತರವರು ಮೈದಾನದಲ್ಲೇ ಸೋಲನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಹಾಗಾದ್ರೆ ಪಂದ್ಯದ ಸಮಯ, ಸ್ಥಳ ಹಾಗೂ ಪ್ಲೇಯಿಂಗ್ 11 ಹೇಗಿರಲಿದೆ ಎಂದು ಇಲ್ಲಿ ತಿಳಿಯಿರಿ.
ಈಗಾಗಲೇ ಆರ್‌ಸಿಬಿಯು ಆಡಿರುವ 7ರಲ್ಲಿ 4 ಪಂದ್ಯ ಗೆದ್ದಿದ್ದು, ಇನ್ನೂ ಮೂರು ಪಂದ್ಯಗಳನ್ನು ತವರಿನಲ್ಲೇ ಸೋತಿದೆ ಸೋತಿದೆ. ಮೊದಲು ಗುಜರಾತ್ ಟೈಟಾನ್, ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಸಲು ಕಂಡಿದೆ. ಏಪ್ರಿಲ್ 18ರಂದು ಪಂಜಾಬ್ ವಿರುದ್ಧ ಸುಲಭವಾಗಿ ಸೋಲುಂಡಿರುವ ಆರ್‌ಸಿಬಿ ಇಂದು ಇದೇ ತಂಡದ ವಿರುದ್ಧ ಗೆಲವು ಸಾಧಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಏಪ್ರಿಲ್ 18ರಂದು ಮಳೆ ಕಾರಣ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು 14 ಓವರ್‌ಗಳಿಗೆ ಸೀಮಿತ ಮಾಡಲಾಗಿತ್ತು. ಈ ವೇಳೆ ಪಂಜಾಬ್ ಕಿಂಗ್ಸ್ ಆರ್‌ಸಿಬಿ ಬಿರುದ್ಧ 5 ವಿಕೆಟ್‌ಗಳಿಂದ ಸುಲಭದ ಗೆಲವು ಸಾಧಿಸಿತ್ತು. ಇಂದು ಮತ್ತೆ ಇವೆರೆಡು ತಂಡಗಳು ಸೆಣಸಲು ಸಿದ್ಧವಾಗಿದ್ದು, ಈ ಸೇಡಿನ ಪಂದ್ಯ ವೀಕ್ಷಣೆ ಮಾಡಲು ಆರ್‌ಸಿಬಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇಬ್ಬರು ಆಲ್‌ರೌಂಡರ್‌ಗಳು: ಆರ್‌ಸಿಬಿಯಲ್ಲಿ ಲಿವಿಂಗ್ ಸ್ಟನ್ ಕಳಪೆ ಫಾರ್ಮ್‌ನಲ್ಲಿದ್ದು, ಇವರ ಬದಲಿಗೆ ಬೆಥೆಲ್ ಆಡಿಸುವಂತೆ ಅಭಿಮಾನಿಗಳ ಬೇಡಿಕೆಯಾಗಿದೆ. ಇವರು ಬ್ಯಾಟಿಂಗ್ ಜೊತೆ, ಬೌಲಿಂಗ್ ಕೂಡ ಮಾಡಲಿದ್ದಾರೆ. ಆದ್ದರಿಂದ ಇವರನ್ನು ಆಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಮತ್ತೊಬ್ಬ ಆಲ್‌ರೌಂಡರ್‌ಗೂ ಬೇಡಿಕೆಯಿದೆ ಎನ್ನಲಾಗುತ್ತಿದೆ.
ಕಳೆದ ಪಂದ್ಯದಲ್ಲಿ ಇದೇ ಟೀಂ ವಿರುದ್ಧ ಲಿವಿಂಗ್‌ಸ್ಟೋನ್ ಕಳಪೆ ಬ್ಯಾಟಿಂಗ್ ಪ್ರದರ್ಶನ್ ತೋರುವ ಮೂಲಕ ಕೈಕೊಟ್ಟಿದ್ದಾರೆ. ಇದು ಮೊದಲಲ್ಲ, ಆಡಿರುವ 7ರಲ್ಲಿ ಬಹುತೇಕ ಪಂದ್ಯಗಳಲ್ಲೂ ಇದೇ ಚಾಳಿ ಮುಂದುವರೆಸಿಕೊಂಡು ಬಂದಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು ಇವರ ವಿರುದ್ಧ ಕೆಂಡಕಾರುತ್ತಲೇ ಇದ್ದಾರೆ. ಆದ್ದರಿಂದ ಇವರ ಬದಲಾಗಿದೆ ಯುವ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಈ ಪಂದ್ಯದಲ್ಲಿ ಆಡಿದುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಇವರನ್ನು ಆಡಿಸಿದರೆ, ಎಡಗೈ ಬ್ಯಾಟಿಂಗ್ ಮತ್ತು ಫಿಂಗರ್ ಸ್ಪಿನ್ ಆರ್‌ಸಿಬಿಗೆ ಆರ್‌ಸಿಬಿಗೆ ಬಲ ಕೊಡಬಹುದು.
ಮತ್ತೊಂದೆಡೆ ಶೆಫರ್ಡ್ ಅವರನ್ನು ಕಣಕ್ಕಿಳಿಸಿದರೆ ಬಿಗ್ ಹಿಟ್ಟರ್ ಆಯ್ಕೆಯೊಂದಿಗೆ ಆರ್ಸಿಬಿ ಹೆಚ್ಚುವರಿ ವೇಗಿಯ ನೆರವು ಪಡೆದುಕೊಳ್ಳಬಹುದು. ಆದ್ದರಿಂದ ಲಿವಿಂಗ್ಸ್ಟೋನ್ ಬದಲಿಗೆ ರೊಮಾರಿಯೊ ಶೆಫರ್ಡ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆಯೂ ಇದೆ ಎನ್ನಲಾಗುತ್ತಿದೆ.
ಇನ್ನು ಟಿಮ್ ಡೇವಿಡ್ ಕಳೆದ ಪಂದ್ಯದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಆಸರೆಯಾಗಿ 26 ಎಸೆತಗಳಲ್ಲಿ 50 ರನ್ ಚಚ್ಚಿ ಮಿಂಚಿದ್ದರು. ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಅವರು ಪಂಜಾಬ್ ಕಿಂಗ್ಸ್‌ನ ಪ್ರಮುಖ 3 ವಿಕೆಟ್ ಕಿತ್ತು ಬೌಲಿಂಗ್‌ನಲ್ಲಿ ಮಿಂಚಿದ್ದರು. ಇಂದು ಕೂಡ ಅಭಿಮಾನಿಗಳು ಇವರ ಮೇಲೆ ಅಪಾರ ಭರವಸೆ ಇಟ್ಟಿಕೊಂಡಿದ್ಧಾರೆ.
ಅಷ್ಟೇ ಅಲ್ಲದೆ, ಆರಂಭಿಕರಾಗಿ ಕಣಕ್ಕಿಳಿಯುವ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಉತ್ತಮ ರನ್‌ಗಳನ್ನು ಕಲೆಹಾಕುವ ಭರವಸೆಯನ್ನೂ ಇಟ್ಟುಕೊಂಡಿದ್ದಾರೆ. ಯಾಕೆಂದರೆ ಎಲ್ಲಾ ಪಂದ್ಯಗಳಲ್ಲೂ ಅಬ್ಬರಿಸುತ್ತಿದ್ದ ಇವರು ಕಳೆದ ಪಂದ್ಯದಲ್ಲಿ ಮಾತ್ರ ಕಳಪೆ ಪ್ರದರ್ಶನ ತೋರಿದ್ದರು.
ಇಂದಿನ ಪಂದ್ಯ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಮಧ್ಯಾಹ್ನ 3:30ಕ್ಕೆ ಆರಂಭ ಆಗಲಿದೆ. ಇದಕ್ಕೂ ಮೊದಲು ಅಂದರೆ ಮಧ್ಯಾಹ್ನ 3 ಗಂಟೆಗೆ ಟಾಸ್ ಆಗಲಿದೆ. ಇಂದಿನ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕ ಆಗಿದೆ.
ಮುಲ್ಲನ್‌ಪುರದ ಪಿಚ್ ಸಮತೋಲಿತವಾಗಿದೆ. ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ರನ್ ಗಳಿಸಲು ಸಹಾಯಕವಾಗಿದೆ. ಆದರೆ, ವೇಗದ ಬೌಲರ್‌ಗಳಿಗೆ ಆರಂಭಿಕ ಓವರ್‌ಗಳಿಗೂ ಕೂಡ, ಅದರಲ್ಲೂ ಬೌನ್ಸ್‌ಗೂ ಕೂಡ ಅಷ್ಟೇ ಸಹಕಾರಿಯಾಗಿದೆ. ಆದರೂ ಈ ಪಿಚ್‌ನಲ್ಲಿ ಸರಾಸರಿ ರನ್ 160-180 ಗಳಿಸುವ ತಂಡಕ್ಕೆ ಗೆಲುವು ನಿಶ್ಚಿತ ಎನ್ನಲಾಗತ್ತಿದೆ. ಇಲ್ಲಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದೇ ಉತ್ತಮ ಎನ್ನಲಾಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಝಲ್‌ವುಡ್, ಯಶ್ ದಯಾಳ್, ಸುಯಶ್ ಶರ್ಮಾ, ಸ್ವಪ್ನಿಲ್ ಸಿಂಗ್, ರಾಸಿಖ್ ದರ್ ಸಲಾಮ್, ಜೇಕಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಲುಂಗಿ ಎನ್‌ಗಿಡಿ, ನುವಾನ್ ತುಷಾರ, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರ, ಅಭಿನಂದನ್ ಸಿಂಗ್.












Click it and Unblock the Notifications