IPL 2025 RCB: ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಸ್ಥಾನ ಏನು?; ಆರೆಂಜ್, ಪರ್ಪಲ್ ಕ್ಯಾಪ್..
IPL 2025 Points Table: ಐಪಿಎಲ್ 2025ರ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದೆ. ಹಾಗಾದ್ರೆ ಇದುವರೆಗೂ ಅಂದರೆ ಆರ್‌ಸಿಬಿ ಸೇರಿದಂತೆ ಉಳಿದ ತಂಡಗಳು ಎಷ್ಟು ಪಂದ್ಯಗಳನ್ನು ಆಡಿ ಎಷ್ಟು ಗೆದ್ದಿವೆ? ಪಾಯಿಂಟ್ಸ್ ಟೇಬಲ್‌ನಲ್ಲಿ ಸ್ಥಾನ ಏನು ಹಾಗೂ ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿವೆ ಹಾಗೂ ಈ ರೇಸ್‌ನಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್ ಅಂದ್ರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್). ಈ ಬಾರಿ ಅಂದರೆ 18ನೇ ಆವೃತ್ತಿ ಭರ್ಜರಿಯಾಗಿ ನಡೆಯುತ್ತಿದ್ದು, 10 ತಂಡಗಳ ಪರ್ಫಾಮೆನ್ಸ್ ಹೇಗಿದೆ? ಅದರಲ್ಲೂ ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಎಷ್ಟನೇ ಸ್ಥಾನದಲ್ಲಿದೆ ಗಮನಿಸಿ.

1. ಆಡಿರುವ 11 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು 4ರಲ್ಲಿ ಸೋತು ಉಳಿದ 7 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 14 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದೆ.
2. ಆಡಿರುವ 10 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರರಲ್ಲಿ ಸೋತು ಉಳಿದ 7 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 14 ಅಂಕಗಳನ್ನು ಪಡೆಯುವ ಮೂಲಕ 2ನೇ ಸ್ಥಾನದಲ್ಲಿದೆ.
3. ಆಡಿರುವ 10 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು 3ಲ್ಲಿ ಸೋತು 6 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 13 ಅಂಕಗಳನ್ನು ಪಡೆಯುವ ಮೂಲಕ 3ನೇ ಸ್ಥಾನದಲ್ಲಿದೆ.
4. ಇದುವರೆದೂ ಆಡಿರುವ 9 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವು 3ಲ್ಲಿ ಸೋತು ಉಳಿದ 6 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 12 ಅಂಕಗಳನ್ನು ಪಡೆಯುವ ಮೂಲಕ 4ನೇ ಸ್ಥಾನದಲ್ಲಿದೆ.
5. ಇದುವರೆದೂ ಆಡಿರುವ 10 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಟ್ ತಂಡವು 4ರಲ್ಲಿ ಸೋತು ಉಳಿದ 6ರಲ್ಲಿ ಗೆದ್ದು 12 ಅಂಕಗಳನ್ನು ಪಡೆಯುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ.
6. ಆಡಿರುವ 10 ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 5ರಲ್ಲಿ ಸೋತು ಉಳಿದ 5 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆಯುವ ಮೂಲಕ 6ನೇ ಸ್ಥಾನದಲ್ಲಿದೆ.
7. ಆಡಿರುವ 10 ಪಂದ್ಯಗಳಲ್ಲಿ ಕೊಲ್ಕಾತ್ತಾ ನೈಟ್ ರೈಡರ್ಸ್ ತಂಡವು 5ಲ್ಲಿ ಸೋತು ಉಳಿದ 4 ಪಂದ್ಯಗಳಲ್ಲಿ ಗೆದ್ದು ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 9 ಅಂಕಗಳನ್ನು ಪಡೆಯುವ 7ನೇ ಸ್ಥಾನದಲ್ಲಿದೆ.
8. ಆಡಿರುವ 11 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 8ರಲ್ಲಿ ಸೋತು ಉಳಿದ 3 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 6 ಅಂಕಗಳನ್ನು ಪಡೆಯುವ ಮೂಲಕ 8ನೇ ಸ್ಥಾನದಲ್ಲಿದೆ.
9. ಆಡಿರುವ 9 ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು 6ರಲ್ಲಿ ಸೋತು ಉಳಿದ 3 ಪಂದ್ಯಗಳಲ್ಲಿ ಮಾತ್ರ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 6 ಅಂಕಗಳನ್ನು ಪಡೆಯುವ ಮೂಲಕ 9ನೇ ಸ್ಥಾನದಲ್ಲಿದೆ.
10. ಆಡಿರುವ 10 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 8ರಲ್ಲಿ ಸೋತು ಉಳಿದ 2 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 4 ಅಂಕಗಳನ್ನು ಪಡೆಯುವ ಮೂಲಕ ಕೊನೇ ಸ್ಥಾನವನ್ನು ಅಂದರೆ ಕಳಗಿನಿಂದ ಒಂದನೇ ಸ್ಥಾನ ಅಲಂಕರಿಸಿದೆ. ಪ್ರತಿ ಬಾರಿಯೂ ಪಾಯಿಂಟ್ಸ್ ಟೇಬಲ್‌ನಲ್ಲ ಮೇಲೆ ಇರುತ್ತಿದ್ದ ತಂಡಗಳೇ ಈ ಬಾರಿ ಕೆಳಗಿಳಿದಿರುವುದೇ ಆಶ್ಚರ್ಯಕರ ಸಂಗತಿ.
ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವ ತಂಡ ಎಷ್ಟನೇ ಸ್ಥಾನ?
1. ಮುಂಬೈ ಇಂಡಿಯನ್ಸ್
2. ರಾಯಲ್ ಚಾಲೆಂಜರ್ಸ್ ಬೆಂಗಳೂರು
3. ಪಂಜಾಬ್ ಕಿಂಗ್ಸ್
4. ಗುಜರಾತ್ ಟೈಟಾನ್ಸ್
5. ಡೆಲ್ಲಿ ಕ್ಯಾಪಿಟಲ್ಸ್
6. ಲಕ್ನೋ ಸೂಪರ್ ಜೈಂಟ್ಸ್
7. ಕೊಲ್ಕತ್ತಾ ನೈಟ್ ರೈಡರ್ಸ್
8. ರಾಜಸ್ಥಾನ್ ರಾಯಲ್ಸ್
9. ಸನ್ ರೈಸರ್ಸ್ ಹೈದರಾಬಾದ್
10. ಚೆನ್ನೈ ಸೂಪರ್ ಕಿಂಗ್ಸ್
ಇನ್ನು ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡವು ಗೆಲುವಿನ ಹಾದಿಯನ್ನು ಹಿಡಿದಿದ್ದು, ಕಪ್ ಗೆಲ್ಲುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ. ಯಾಕಂದ್ರೆ ಇದುವರೆಗೂ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಇದೀಗ ಮೇಲೇರಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಕೆಳಗಿಸಿಳಿಸಿ ಮೂಲಕ ಪ್ಲೇ ಆಫ್‌ಗೆ ಏರುವ ತವಕದಲ್ಲಿದೆ.
ಆರ್‌ಸಿಬಿಯು ತವರಿನಲ್ಲಿ ಮೂರು ಪಂದ್ಯಗಳನ್ನು ಸೋತಿದ್ದು, ಬಿಟ್ಟರೆ ಉಳದ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಒಂದು ತವರಿನಲ್ಲಿ ಗೆದ್ದರೆ, ಉಳಿದ ಆರು ಪಂದ್ಯಗಳನ್ನು ತವರಿನಂದಾಚೆ ಗೆದ್ದು ಬೀಗಿದೆ. ಈ ಮೂಲಕ ಪ್ಲೇ ಆಫ್‌ಗೆ ತಲುಪುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಳ್ಳಲು ಮುಂದಾಗಿದೆ. ನಾಳೆ ಅಂದರೆ ಮೇ 3ರಂದು ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಗೆಲವು ಸಾಧಿಸುವ ಭರವಸೆಯಲ್ಲಿದೆ. ಈ ಪಂದ್ಯದಲ್ಲಿ ಉತ್ತಮ ರನ್ ರೇಟ್‌ನಲ್ಲಿ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್‌ಗೆ ಬಹುತೇಕ ಖಚಿತವಾಗಲಿದೆ.
ಆರ್‌ಸಿಬಿಯು ಪ್ಲೇ ಆಫ್‌ಗೆ ಬಹುತೇಕ ಫೈನಲ್ ಆಗಬೇಕೆಂದರೆ, ನಾಲ್ಕು ಪಂದ್ಯಗಳಲ್ಲಿ ಉತ್ತಮ ರನ್ ರೇಟ್‌ನ ಮೂಲಕ 1 ಪಂದ್ಯ ಗೆಲ್ಲಬೇಕಿದೆ. ಇದು ಯಶಸ್ವಿಯಾದ್ರೆ ಆರ್‌ಸಿಬಿ ಅಭಿಮಾನಿಗಳು ಫೈನಲ್ ಗೆದ್ದಿರುವ ಮಟ್ಟಿಗೆ ಸಂಭ್ರಮಾಚರಣೆ ಮಾಡುವುದಂತೂ ಖಚಿತವಾಗಿಬಿಟ್ಟಿದೆ. ಅದರಲ್ಲೂ ಮುಂಬರುವ ಪಂದ್ಯ ಸಿಎಸ್‌ಕೆ ವಿರುದ್ಧ ಇದ್ದು, ಆರ್‌ಸಿಬಿ ಗೆಲುವು ಖಚಿತ ಎನ್ನಲಾಗುತ್ತಿದೆ. ಯಾಕಂದ್ರೆ ಬ್ಯಾಟಿಂಗ್, ಬೌಲಿಂಗ್ ಲೈನ್ ಅಪ್‌ನಲ್ಲಿ ಉತ್ತಮವಾಗಿದೆ.
ಆರೆಂಜ್ ಕ್ಯಾಪ್ ಯಾರ ಬಳಿ ಇದೆ?: ಈ ಆವೃತ್ತಿಯಲ್ಲಿ ಇಲ್ಲಿಯವರೆಗೂ ಆಡಿದ ಪಂದ್ಯಗಳಲ್ಲಿ ಅತೀ ಹೆಚ್ಚು ರನ್‌ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 11 ಪಂದ್ಯಗಳಲ್ಲಿ 475 ರನ್ ಗಳಿಸಿದ್ದಾರೆ.
ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿ
* ಮುಂಬೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ್: 475
* ಗುಜರಾತ್ ಟೈಟಾನ್ಸ್ ತಂಡದ ಎಸ್.ಸುದರ್ಶನ್: 456
* ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ: 443
* ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್: 439
* ಗುಜರಾತ್ ಟೈಟಾನ್ಸ್ ತಂಡದ ಜೋಶ್ ಬಟ್ಲರ್: 406
ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೋಶ್ ಹ್ಯಾಜಲ್‌ವುಡ್ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಪರ್ಪಲ್ ಕ್ಯಾಪ್ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅವರು 18 ವಿಕೆಟ್ ಪಡೆದಿದ್ದಾರೆ.
ಅತೀ ಹೆಚ್ಚು ವಿಕೆಟ್ ಪಡೆದವರು
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೋಶ್ ಹ್ಯಾಜಲ್‌ವುಡ್: 18 ವಿಕೆಟ್
* ಗುಜರಾತ್ ಟೈಟಾನ್ಸ್ ತಂಡದ ಪ್ರಸಿದ್ಧ್ ಕೃಷ್ಣ: 17 ವಿಕೆಟ್
* ಮುಂಬೈ ಇಂಡಿಯನ್ಸ್ ತಂಡದ ಟ್ರೆಂಟ್ ಬೋಲ್ಟ್: 16 ವಿಕೆಟ್
* ಚೈನ್ನೈ ಸೂಪರ್ ಕಿಂಗ್ಸ್ ತಂಡದ ನೂರ್ ಅಹ್ಮದ್: 15 ವಿಕೆಟ್
* ಚೈನ್ನೈ ಸೂಪರ್ ಕಿಂಗ್ಸ್ ತಂಡದ ಕಲೀಲ್ ಅಹ್ಮದ್: 14 ವಿಕೆಟ್












Click it and Unblock the Notifications