IPL Mega Auction 2025: 6 ಆಟಗಾರರ ಉಳಿಸಿಕೊಳ್ಳಲು ಅವಕಾಶ; ಆರ್‌ಟಿಎಂ ವಾಪಸ್

ಬಹುನಿರೀಕ್ಷಿತ ಐಪಿಎಲ್ 2025ರ ಮೆಗಾ ಹರಾಜು ಡಿಸೆಂಬರ್ ನಲ್ಲಿ ನಡೆಯಲಿದ್ದು, ಇದಕ್ಕೆ ಮುನ್ನ ಹಲವು ಹೊಸ ನಿಯಮಗಳನ್ನು ರೂಪಿಸಲಾಗಿದೆ. ಎಷ್ಟು ಜನರನ್ನು ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಪ್ರತಿ ತಂಡಕ್ಕೆ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದ್ದು, ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್‌ ವಾಪಸ್ ಬಂದಿದೆ. ಹರಾಜು ಪರ್ಸ್ ಕೂಡ ಹೆಚ್ಚಿಸಿದ್ದು, ಆಟಗಾರರಿಗೆ ಹಣದ ಹೊಳೆ ಹರಿಯುವ ನಿರೀಕ್ಷೆ ಇದೆ.

2024ರ ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೂ ಅದನ್ನು ಈ ಬಾರಿ ಕೂಡ ಮುಂದುವರೆಸಲಾಗುತ್ತದೆ. ಹರಾಜಿನ ನಿಯಮಗಳ ಬಗ್ಗೆ ಫ್ರಾಂಚೈಸಿಗಳಿಗೆ ಸ್ಪಷ್ಟನೆ ಸಿಕ್ಕಿದ್ದು, ರಣತಂತ್ರಗಳನ್ನು ರೂಪಿಸಲಿವೆ. 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಕ್ಕಿರುವುದರಿಂದ ಪ್ರಮುಖ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಸಹಕಾರಿಯಾಗಿದೆ.

IPL 2025 Mega Auction Key Changes in Player Retention Rules

ವಿದೇಶಿ ಆಟಗಾರರಿಗೆ ಕಠಿಣ ನಿಯಮ

ಐಪಿಎಲ್‌ನಲ್ಲಿ ಆಡಲು ಬಯಸುವ ವಿದೇಶಿ ಆಟಗಾರರು 2025ರ ಮೆಗಾಹರಾಜಿನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು, ಮೆಗ ಹರಾಜಿಗೆ ನೋಂದಾಯಿಸಿಕೊಳ್ಳಲು ವಿಫಲವಾದರೆ, ಮುಂದಿನ ವರ್ಷದ ಐಪಿಎಲ್‌ನಲ್ಲಿ ಭಾಗವಹಿಸಲು ಅವಕಾಶ ಸಿಗುವುದಿಲ್ಲ. ಐಪಿಎಲ್‌ನಲ್ಲಿ ಹರಾಜಾದ ಬಳಿಕ ವಿವಿಧ ಕಾರಣ ಕೊಟ್ಟು ಐಪಿಎಲ್‌ನಲ್ಲಿ ಆಡದೇ ಇದ್ದರೆ ಎರಡು ವರ್ಷಗಳ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಸಿಗುವುದಿಲ್ಲ.

ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ

ಹೊಸ ನಿಯಮದ ಪ್ರಕಾರ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇದೆ. ಆದರೆ ಇದಕ್ಕೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಆರು ಆಟಗಾರರಲ್ಲಿ ಒಬ್ಬರು ಅನ್‌ಕ್ಯಾಪ್ಡ್‌ ಭಾರತೀಯ ಆಟಗಾರ ಇರಲೇಬೇಕು. ಉಳಿದ ಐವರು ಆಟಗಾರರು ವಿದೇಶಿ ಮತ್ತು ಭಾರತೀಯ ಆಟಗಾರರನ್ನು ಫ್ರಾಂಚೈಸಿ ಉಳಿಸಿಕೊಳ್ಳಬಹುದು. ಇಬ್ಬರು ಅನ್‌ಕ್ಯಾಪ್ಡ್ ಭಾರತೀಯ ಆಟಗಾರರನ್ನು ಯಾವುದೇ ಫ್ರಾಂಚೈಸಿಯಿಂದ ಆರ್ ಟಿಎಂ ಮೂಲಕ ಇಲ್ಲವೇ ಟ್ರೇಡಿಂಗ್ ಮೂಲಕ ಉಳಿಸಿಕೊಳ್ಳಲು ಕೂಡ ಅವಕಾಶವಿದೆ.

ಏನಿದು ರೈಟ್ ಟು ಮ್ಯಾಚ್ (RTM)?

ಹರಾಜಿನಲ್ಲಿ ಫ್ರಾಂಚೈಸಿಗಳು ತಾವು ಬಿಡುಗಡೆ ಮಾಡಿದ ಒಬ್ಬ ಆಟಗಾರನಿಗೆ ಹೆಚ್ಚಿನ ಬಿಡ್‌ ಮಾಡಲು ರೈಟ್ ಟು ಮ್ಯಾಚ್ ಅನುಮತಿ ಕೊಡುತ್ತದೆ. ಇದರಿಂದ ಅನಿವಾರ್ಯವಾಗಿ ಬಿಡುಗಡೆ ಮಾಡಿದ ಆಟಗಾರರನ್ನು ಹರಾಜಿನಲ್ಲಿ ಮತ್ತೆ ಉಳಿಸಿಕೊಳ್ಳುವ ಅವಕಾಶ ಸಿಗಲಿದೆ.

ಫ್ರಾಂಚೈಸಿ ಹರಾಜು ಪರ್ಸ್ ಹೆಚ್ಚಳ

ಹರಾಜು ಪರ್ಸ್ ಅನ್ನು ಇದೀಗ 120 ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 20 ಕೋಟಿ ರೂಪಾಯಿ ಹೆಚ್ಚಾಗಿದ್ದು, ದುಬಾರಿ ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ಸಿಕ್ಕಿದೆ. ಐವರು ಆಟಗಾರರನ್ನು ಉಳಿಸಿಕೊಳ್ಳುವ ಫ್ರಾಂಚೈಸಿಗಳು ತಮ್ಮ ಒಟ್ಟಾರೆ ಹರಾಜು ಪರ್ಸ್ ₹120 ಕೋಟಿಯಿಂದ ₹75 ಕೋಟಿ ಖರ್ಚು ಮಾಡಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+