IPL 2025 Playoffs: ಐಪಿಎಲ್‌ನಲ್ಲಿ ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗರು
IPL 2025 Playoff: ಇಂಡಿಯನ್ ಪ್ರೀಮಿಯರ್ ಲೀಮಗ್ ವೀಶ್ವದಲ್ಲೇ ಅತೀ ದೊಡ್ಡ ಲೀಗ್ ಆಗಿದೆ. ಈ ಬಾರಿಯ ಐಪಿಎಲ್ 18ನೇ ಆವೃತ್ತಿ ಮಾರ್ಚ್ 22ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯಲಿದೆ. ಇದಕ್ಕೂ ಮುನ್ನವೇ ಫ್ಲೇ ಆಫ್‌ಗೆ ಯಾವೆಲ್ಲಾ ತಂಡಗಳು ಹೋಗಲಿವೆ ಎಂದು ಮಾಜಿ ಕ್ರಿಕೆಟ್ ಆಟಗಾರರು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದಾರೆ.
ಐಪಿಎಲ್ 2025 ಪ್ಲೇ ಆಫ್ ತಲುಪುವ ತಂಡಗಳ ಬಗ್ಗೆ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅಚ್ಚರಿಯ ಭವಿಷ್ಯ ನುಡಿಸಿದ್ದಾರೆ. ಆರ್‌ಸಿಬಿ, ಸಿಎಸ್‌ಕೆ ತಂಡ ಅಲ್ಲ, ಬದಲಿಗೆ ಯಾವ ತಂಡಗಳು ಪ್ಲೇಆಫ್ ಪ್ರವೇಶಿಸುತ್ತವೆ ಎಂಬ ಬಗ್ಗೆ ಐಪಿಎಲ್ ಆರಂಭಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದಾರೆ.

ಐಪಿಎಲ್ 2025 ಆರಂಭಕ್ಕೆ ಕೇವಲ ಒಂದಿ ದಿನ ಮಾತ್ರ ಬಾಕಿಯಿದೆ. ಇದಕ್ಕೂ ಮುನ್ನವೇ ಪ್ಲೇ ಆಫ್‌ಗೆ ಯಾವೆಲ್ಲಾ ತಂಡಗಳು ಪ್ರವೇಶ್ ಮಾಡುತ್ತವೆ ಎಂದು ಮಾಜಿ ಕ್ರಿಕೆಟ್ ಆಟಗಾರರು ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಮೈಕೆಲ್ ವಾಘನ್, ಆಡಮ್ ಗಿಲ್‌ಕ್ರಿಸ್ಟ್ ಸೇರಿದಂತೆ ಹಲವರು ಸೆಮಿಫೈನಲ್ ತಲುಪಲಿರುವ ಟಾಪ್ 4 ತಂಡಗಳನ್ನು ಹೆಸರಿಸಿದ್ದಾರೆ. ಮತ್ತೊಂದೆಡೆ 10ರಲ್ಲಿ ಎಂಟು ಮಾಜಿ ಕ್ರಿಕೆಟಿಗರು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಫೈನಲ್ ತಲುಪಲಿದೆ ಎಂದು ಭವಿಷ್ಯ ನುಡಿದು ಗಮನ ಸೆಳೆದಿದ್ದಾರೆ.
ಮಾಜಿ ಕ್ರಿಕೆಟ್ ಆಟಗಾರರ ಪ್ರಕಾರ ಸೆಮಿಫೈನಲ್ ಪ್ರವೇಶಿಸುವ 4 ತಂಡಗಳು
ವೀರೇಂದ್ರ ಸೆಹ್ವಾಗ್: MI, SRH, PBKS & LSG
ಆಡಮ್ ಗಿಲ್‌ಕ್ರಿಸ್ಟ್: PBKS, MI, SRH & GT
ರೋಹನ್ ಗವಾಸ್ಕರ್: RCB, SRH, DC & MI
ಹರ್ಷ ಭೋಗ್ಲೆ: SRH, MI, KKR & RCB
ಶಾನ್ ಪೊಲಾಕ್: MI, CSK, SRH & PBKS
ಮನೋಜ್ ತಿವಾರಿ : SRH, PBKS, GT & KKR
ಸೈಮನ್ ಬ್ಲೇರ್ ಡೌಲ್: CSK, KKR, SRH & PBKS
ಮೈಕೆಲ್ ವಾನ್: GT, MI, KKR & PBKS
Mpumelelo Mbangwa: SRH, GT, KKR & LSG
ಶನಿವಾರ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ, ಬಿಸಿಸಿಐ ಐಪಿಎಲ್ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಗುರುವಾರ ಮುಂಬೈನಲ್ಲಿ ನಡೆದ ಐಪಿಎಲ್ 2025 ನಾಯಕರ ಸಭೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನೂ ನಾಳೆ ಕೊಲ್ಕತ್ತಾ ಮತ್ತು ಆರ್‌ಸಿಬಿ ಉದ್ಘಾಟನಾ ಪಂದ್ಯ ಆಡಲಿದ್ದು, ಈ ಪಂದ್ಯ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಮತ್ತೊಂದೆಡೆ ಆರ್‌ಸಿಬಿ ಇದುವರೆಗೂ ಒಂದು ಟ್ರೋಫಿ ಗೆದ್ದಿಲ್ಲ. ಆದರೂ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಎಷ್ಟು ಬಾರಿ ಸೋತರೂ ನಮ್ಮ ಫೇವರಿಟ್ ತಂಡ ಆರ್‌ಸಿಬಿನೇ ಅಂತಿದ್ದಾರೆ. ಅಲ್ಲದೆ, ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ, ಅದು ಆರ್‌ಸಿಬಿ ಮಾತ್ರ, ಇದು ಎಲ್ಲಾರಿಗೂ ಗೊತ್ತಿರುವ ವಿಚಾರವೇ ಆಗಿದೆ.












Click it and Unblock the Notifications