GT vs CSK: ಜಿಟಿ ವಿರುದ್ಧ ಗೆದ್ದು ಆರ್‌ಸಿಬಿಗೆ ಲಡ್ಡು ತಿನ್ನಿಸಿದ ಸಿಎಸ್‌ಕೆ
IPL 2025 CSK Vs GT: ಐಪಿಎಲ್ 2025ರ 67ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್‌ಕೆ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರ್‌ಸಿಬಿಗೆ ಸಿಹಿ ಲಡ್ಡು ತಿನ್ನಿಸಿದಂತಾಗಿದೆ. ಇದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಅದಕ್ಕೆ ಉತ್ತರ.
ಚೆನ್ನೈ ಸೂಪರ್ ಕಿಂಗ್ಸ್-ಗುಜರಾತ್ ಟೈಟಾನ್ಸ್ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 230 ರನ್‌ಗಳನ್ನು ಕೆಲೆಹಾಕಿ ಜಿಟಿಗೆ 231 ರನ್‌ಗಳ ಬೃಹತ್ ಗುರಿ ನೀಡಿತು. ಆದರೆ, ಶುಭ್‌ಮನ್ ಗಿಲ್ ಪಡೆ 18.3 ಓವರ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 147 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದರಿಂದ ಆರ್‌ಸಿಗೆ ದೊಡ್ಡ ಲಾಭ ಆದಂತಾಗಿದೆ.

ಗುಜರಾತ್ ಟೈಟಾನ್ಸ್ ತಂಡವು ಇಂದು ಸಿಎಸ್‌ಕೆ ವಿರುದ್ಧ 83 ರನ್‌ಗಳಿಂದ ಸೋಲು ಕಂಡಿದೆ. ಈ ಸೀಸನ್‌ನನಲ್ಲಿ 18 ಅಂಕಗಳನ್ನು ಗಳಿಸಿ ಅಗ್ರ ಸ್ಥಾನದಲ್ಲೇನೋ ಇದೆ. ಪ್ಲೇ ಆಫ್‌ಗೂ ಪ್ರವೇಶ ಮಾಡಿದೆ. ಆದರೆ, ಕೆಳಗಿನ ತಂಡಗಳಿಗೆ ಇನ್ನೂ ಒಂದೊಂದು ಪಂದ್ಯಗಳಿರುವ ಹಿನ್ನೆಲೆ ಜಿಟಿ ಈ ಸ್ಥಾನ ಉಳಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ.
ಗುಜರಾತ್ ಟೈಟಾನ್ಸ್‌ಗೆ ಎಲ್ಲಾ ಲೀಗ್ ಪಂದ್ಯಗಳು ಮುಗಿದಿವೆ. ಕೆಳಗಿನ ಪಂಜಾಬ್ ಕಿಂಗ್ಸ್‌ಗೆ ಇನ್ನೊಂದು ಪಂದ್ಯ ಬಾಕಿಯಿದ್ದು, ಇದರಲ್ಲಿ ಗುಲುವು ಸಾಧಿಸಿದರೆ ಪಾಯಿಂಟ್ಸ್ ಟೇಬಲ್‌ನಲ್ಲಿ 19 ಅಂಕಗಳೊಂದಿಗೆ ಮೊದಲ ಸ್ಥಾನ ಅಲಂಕರಿಸಲಿದೆ. ಮತ್ತೊಂದೆಡೆ ಆರ್‌ಸಿಬಿ ಉಳಿದ ಒಂದು ಮ್ಯಾಚ್‌ನಲ್ಲಿ ಉತ್ತಮ ರನ್ ರೇಟ್‌ನೊಂದಿಗೆ ಗೆಲುವು ಸಾಧಿಸಿದ್ರೆ ಮೊದಲೆರಡರಲ್ಲಿ ಒಂದು ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಈ ಮೂಲಕ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದುಕೊಳ್ಳಲಿದೆ.
ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಒಂದು ಪಂದ್ಯ ಗೆದ್ದರೂ ಪಾಯಿಂಟ್ಸ್ ಟೇಬಲ್‌ನಲ್ಲಿ ರನ್ ರೇಟ್ ಆಧಾರದ ಮೇಲೆ ಮೊದಲೆರಡು ಸ್ಥಾನಗಳನ್ನು ಅಲಂಕರಿಸಲಿವೆ. ಆಗ ಗುಜರಾತ್ ಟೈಟಾನ್ಸ್ ಕ್ಲಾಲಿಫೈಯರ್ ದಲಿಗೆ ಎಲಿಮಿನೇಟರ್ ಪಂದ್ಯ ಆಡಬೇಕಾಗುತ್ತದೆ.
ಮುಂಬೈ ಇಂಡಿಯನ್ಸ್ ತಂಡವು ಉಳಿದ ಇನ್ನೊಂದು ಪಂದ್ಯದಲ್ಲಿ ಏನಾದರೂ ಸೋತರೆ ಅದು ಸಹ ಕ್ವಾಲಿಫೈಯರ್ ಬದಲಿಗೆ ಎಲಿಮಿನೇಟರ್ ಪಂದ್ಯ ಆಡಬೇಕಾಗುತ್ತದೆ. ಮುಂದಿನ ಪಂದ್ಯವನ್ನು ನಾಳೆ ಪಂಜಾಬ್ ವಿರುದ್ಧ ಆಡಬೇಕಾಗುತ್ತದೆ. ಇದರಲ್ಲಿ ಯಾವುದಾರೂ ಒಂದು ತಂಡ ಸೋತರೂ ಆಗಲೂ ಆರ್‌ಸಿಬಿಗೆ ಅನುಕೂಲವಾಗಲಿದೆ. ಯಾಕಂದ್ರೆ ಬೆಂಗಳೂರು ಬಾಯ್ಸ್‌ಗೆ ಇನ್ನೊಂದು ಮ್ಯಾಚ್ ಬಾಕಿ ಇರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ.
ಒಂದು ವೇಳೆ ನಾಳೆ ನಡೆಯುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ಗೆದ್ದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನ ಪಡೆದು ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲಿದೆ. ಆಗ ಪಂಜಾಬ್ ಮೂರು ಅಥವಾ ನಾಲ್ಕನೇ ಸ್ಥಾನಕ್ಕೇ ಇಳಿದು ಎಲಿಮಿನೇಟರ್ ಪಂದ್ಯ ಆಡಬೇಕಾಗುತ್ತದೆ.
* ಗುಜರಾತ್ ಟೈಟಾನ್ಸ್: ಗುಜರಾತ್ ಟೈಟಾನ್ಸ್ ತಂಡವು ಇದುವರೆಗೂ 14 ಪಂದ್ಯಗಳನ್ನಾಡಿದೆ. 9 ರಲ್ಲಿ ಗೆದ್ದು, 5 ಸೋಲು ಕಂಡಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
* ಪಂಜಾಬ್ ಕಿಂಗ್ಸ್: ಪಂಜಾಬ್ ಕಿಂಗ್ಸ್ ತಂಡವು ಇದುವರೆಗೆ 13 ಪಂದ್ಯಗಳನ್ನಾಡಿದೆ. ಇವುಗಳಲ್ಲಿ 8 ಗೆಲುವು, 4 ಸೋಲು ಕಂಡಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 17 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಉಳಿದ ಒಂದು ಪಂದ್ಯದಲ್ಲಿ ಗೆದ್ದರೆ, 19 ಅಂಕಗಳನ್ನು ಪಡೆದು ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅವಕಾಶ ಪಡೆಯಲಿದೆ.
* ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ 13 ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ 4 ಸೋಲು, 8 ಗೆಲುವು, ಒಂದು ರದ್ದಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದೆ. ಮುಂದಿನ ಉಳಿದ ಒಂದು ಪಂದ್ಯದಲ್ಲಿ ಉತ್ತಮ ರನ್ ರೇಟ್‌ನಲ್ಲಿ ಗೆದ್ದರೆ, 19 ಅಂಕಗಳೊಂದಿಗೆ ಮೊದಲ ಅಥವಾ ದ್ವಿತೀಯ ಸ್ಥಾನಕ್ಕೇರುವ ಅವಕಾಶವಿದೆ. ಅಲ್ಲದೆ, ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಲಿದೆ.
* ಮುಂಬೈ ಇಂಡಿಯನ್ಸ್: ಮುಂಬೈ ಇಂಡಿಯನ್ಸ್ ಈವರೆಗೂ 13 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ 5ರಲ್ಲಿ ಸೋಲು, 8ರಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇನ್ನೂ ಒಂದೇ ಒಂದು ಲೀಗ್ ಪಂದ್ಯ ಮಾತ್ರ ಬಾಕಿಯಿದ್ದು, ಇದರಲ್ಲೇ ಮುಂಬೈ ಕ್ವಾಲಿಫೈಯರ್ ಅಥವಾ ಎಲಿಮಿನೇಟರ್ ಎಂಬ ಭವಿಷ್ಯ ನಿರ್ಧಾರವಾಗಲಿದೆ.












Click it and Unblock the Notifications