IPL 2025: 230 ದಡ ದಾಟಿದ್ರೆ ಗುಜರಾತ್ ಟೈಟಾನ್ಸ್ ನಂಬರ್ ಒನ್ ಇಲ್ಲದಿದ್ರೆ..
IPL 2025 CSK Vs GT: ಐಪಿಎಲ್ 2025ರ 67ನೇ ಪಂದ್ಯ ಸಿಎಸ್‌ಕೆ-ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಸೂಪರ್ ಕಿಂಗ್ ಜಿಟಿಗೆ ಬೃಹತ್ ರನ್‌ಗಳ ಗುರಿ ನೀಡಿದ್ದು, ಇದನ್ನು ದಾಟಿದ್ರೆ ಮಾತ್ರ ಜಿಟಿಗೆ ಅಗ್ರಸ್ಥಾನ. ಇಲ್ಲದಿದ್ರೆ ಕೆಳಗಿನ ತಂಡಗಳಿಗೆ ಅನುಕೂಲ ಆದಂತಾಗಲಿದೆ.
ಸಿಎಸ್‌ಕೆ-ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದು (ಮೇ 27) ಮಧ್ಯಾಹ್ನ 3:30ಕ್ಕೆ ಆರಂಭ ಆಗಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 230 ರನ್‌ಗಳನ್ನು ಕೆಲೆಹಾಕಿ ಜಿಟಿಗೆ 231 ರನ್‌ಗಳ ಬೃಹತ್ ಗುರಿ ನೀಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 230 ರನ್‌ಗಳ ಅಂಕಿ ದಾಟಿದ್ರೆ ಮಾತ್ರ ಗುಜರಾತ್ ಟೈಟಾನ್ಸ್ ತಂಡವು ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲೇ ಉಳಿದುಕೊಂಡು ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಇಲ್ಲದಿದ್ರರೆ ಕೆಳಗಿನ ತಂಡಗಳಿಗೆ ಹೆಚ್ಚು ಅನುಕೂಲ ಆಗಲಿದ್ದು, ಆಗ ಜಿಟಿ ಮೂರನೇ ಸ್ಥಾನಕ್ಕೆ ಇಳಿಯುವುದರಲ್ಲೂ ಅನುಮಾನವಿಲ್ಲ. ಈಗಾಗಲೇ ಪ್ಲೇ ಆಫ್ ಏನೋ ಪ್ರವೇಶ ಮಾಡಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಸೋತರೆ ಕ್ವಾಲಿಫೈಯರ್ ಬದಲಾಗಿ ಎಲಿಮಿನೇಟರ್ ಪಂದ್ಯ ಆಡಬೇಕಾಗುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯುಷ್ ಮ್ಹಾತ್ರೆ ಮತ್ತು ಡೆವೊನ್ ಕಾನ್ವೇ ಭರ್ಜರಿ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟ ಆಡಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಆಯುಷ್ ಮ್ಹಾತ್ರೆ 17 ಎಸೆತಗಳಿಗೆ 34 ರನ್ ಚಚ್ಚಿ ಔಟಾಗಿ ಪೆವಿಲಯನ್ ಸೇರಿಕೊಂಡರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿದ ಉರ್ವಿಲ್ ಪಟೇಲ್ ಸಹ 19 ಎಸೆತಗಳಲ್ಲಿ 37 ರನ್‌ಗಳನ್ನು ಚಚ್ಚಿ ಗುಜರಾತ್ ಟೈಟಾನ್ಸ್ ಬೌಲರ್‌ಗಳಿಗೆ ಬೆವರಿಳಿಸಿದರು. ಶಿವಂ ದುಬೆ 8 ಎಸೆತಗಳಲ್ಲಿ 17 ರನ್ ಬಾರಿಸಿ ಔಟಾದರು. ಇನ್ನು ಕಾನ್ವೇ ಆರಂಭದಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ್ ಮಾಡಿ, 35 ಎಸೆತಗಳಲ್ಲಿ 52 ರನ್ ಬಾರಿಸಿದರು.
ಕೊನೆಯ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಡೆವಾಲ್ಡ್ ಬ್ರೆವಿಸ್ 23 ಎಸೆತಗಳಲ್ಲಿ 57 ರನ್‌ಗಳನ್ನು ಸಿಡಿಸಿದರು. ರವೀದ್ರ ಜಡೇಜಾ ಸಹ 18 ಎಸೆತಗಳಲ್ಲಿ 21 ರನ್ ಬಾರಿಸಿದರು ಈ ಮೂಲಕ ತಂಡದ ಮೊತ್ತವನ್ನು 230ಕ್ಕೆ ಕೊಂಡೊಯ್ದರು. ಇನ್ನು ಗುಜರಾತ್ ಪಡ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್, ರಶೀದ್ ಖಾನ್, ಸಾಯಿ ಕಿಶೋರ್ ಮತ್ತು ಶಾರುಖ್ ತಲಾ ಒಂದು ವಿಕೆಟ್ ಪಡೆದರು. ಆದರೆ, ಮೊಹ್ಮದ್ ಸಿರಾಜ್ ನಾಲ್ಕು ಓವರ್ ಬೌಲಿಂಗ್ ಮಾಡಿ ಯಾವುದೇ ಒಂದು ವಿಕೆಟ್ ಪಡೆಯದೆ, ಬರೊಬ್ಬರಿ 47 ರನ್‌ಗಳನ್ನು ಬಿಟ್ಟುಕೊಟ್ಟರು.












Click it and Unblock the Notifications