CSK Vs KKR: ಕೆಕೆಆರ್‌ ವಿರುದ್ಧ ಸಿಎಸ್‌ಕೆ ಗೆಲ್ಲಿಸಿದ ಎಂಎಸ್‌ ಧೋನಿ

CSK Vs KKR: ಐಪಿಎಲ್‌ 2025ನೇ ಆವೃತ್ತಿಯ 57ನೇ ಪಂದ್ಯದಲ್ಲಿ ಚೆನ್ನೂ ಸೂಪರ್ ಕಿಂಗ್ಸ್‌ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 2 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಇದುವರೆಗೂ ಆಡಿದ 12 ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಗೆದ್ದು, 9ರಲ್ಲಿ ಸೋತು ಪಾಯಿಂಟ್ಸ್‌ ಟೇಬಲ್‌ನಲ್ಲಿ 6 ಅಂಕಗಳೊಂದಿಗೆ ಕೊನೇ ಸ್ಥಾನವನ್ನೇ ಭದ್ರಪಡಿಸಿಕೊಂಡಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿಗೆ ಬಂದಿದೆ.

ಸಿಎಸ್‌ಕೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2025ರ 57ನೇ ಪಂದ್ಯ ಕೊಲ್ಕತ್ತಾದ ಈಡನ್‌ ಗಾರ್ಡನ್‌ ಕ್ರೀಂಡಾಂಗಣದಲ್ಲಿ ನಡೆಯಿತು. ಟಾಸ್ ಸೋತ ಸಿಎಸ್‌ಕೆ ಬೌಲಿಂಗ್‌ ಮಾಡಿತು. ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 179 ರನ್‌ ಕಲೆಹಾಕಿ 180 ರನ್‌ಗಳ ಗುರಿ ನೀಡಿತು.

IPL 2025 Chennai Super Kings won by 2 Wickets against KKR

ಈ ಗುರಿ ಬೆನ್ನತ್ತಿದ ಸಿಎಸ್‌ಕೆ 19.4 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 183 ರನ್‌ ಕಲೆಹಾಕುವ ಮೂಲಕ ಗೆದ್ದು ಬೀಗಿತು. ಆದರೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದ್ದು, ಈ ಗೆಲುವು ಆಟಕ್ಕುಂಟ್ಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಮೊದಲು ಬ್ಯಾಟ್ ಮಾಡಿದ ಕೆಕೆಆರ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ, ನಂತರದ ಕ್ರಮಾಂಕದಲ್ಲಿ ಬಂದ ಅಜಿಂಕ್ಯಾ ರಹಾನೆ ಸುನಿಲ್ ನರೈನ್ ಜೊತೆ ಸೇರಿ ಎರಡನೇ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ಆಡಿದರು. ಆದರೆ, ಸುನೀಲ್‌ ನರೈನ್‌ 26 ರನ್‌ಗೆ ಔಟ್ ಆಗಿ ಪೆವಿಲಿಯನ್‌ನತ್ತ ನಡೆದರು.

ನಂತರ ರಘುವಂಶಿ 1 ರನ್‌ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಆದರೆ, ಅಜಿಂಕ್ಯಾ ರಹಾನೆ 33 ಎಸೆತಗಳಲ್ಲಿ 48 ರನ್ ಗಳಿಸಿದರು. ಬಳಿಕ ಅಂಡ್ರೆ ರಸೆಲ್ 38 ಸಿಡಿಸಿದರು. ಕೊನೆಯಲ್ಲಿ ಕನ್ನಡಿಗ ಮನಿಷ್ ಪಾಂಡೆ 36 ರನ್ ಗಳಿಸಿ ನಾಟೌಟ್ ಆಗಿ ಉಳಿದದರು. ಹೀಗೆ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು. ಆದರೆ, ಸಿಎಸ್‌ಕೆ ತಂಡವು 19.4 ಓವರ್‌ನಲ್ಲಿ 183 ಕಲೆಹಾಕುವ ಮೂಲಕ ಗೆದ್ದು ಬೀಗಿತು.

ಕೋಲ್ಕತ್ತಾ ನೈಟ್ ರೈಡರ್ಸ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಶ್ ರಘುವಂಶಿ, ಮನೀಶ್ ಪಾಂಡೆ, ಆಂಡ್ರೆ ರಸೆಲ್, ರಿಂಕು ಸಿಂಗ್, ಮೊಯಿನ್ ಅಲಿ, ರಮಣದೀಪ್ ಸಿಂಗ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.

ಚೆನ್ನೈ ಸೂಪರ್ ಕಿಂಗ್ಸ್: ಆಯುಷ್ ಮ್ಹಾತ್ರೆ, ಉರ್ವಿಲ್ ಪಟೇಲ್, ಡೆವೊನ್ ಕಾನ್ವೆ, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ರವಿಚಂದ್ರನ್ ಅಶ್ವಿನ್, ಎಂಎಸ್ ಧೋನಿ(ವಿ.ಕೀ., ನಾಯಕ), ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪತಿರಾನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+