IPL 2025 Auction: ಐಪಿಎಲ್‌ ಮೆಗಾ ಹರಾಜಿಗೆ ಕ್ಷಣಗಣನೆ; ಮೊದಲ ಸೆಟ್‌ನ ಆಟಗಾರರು ಇವರೇ

ಬಹು ನಿರೀಕ್ಷಿತ ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ 10 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಲು ಎಲ್ಲಾ ಲೆಕ್ಕಾಚಾರ ಹಾಕಿಕೊಂಡಿದ್ದು ಹರಾಜು ಟೇಬಲ್‌ಗೆ ಬರಲಿವೆ. ಈ ಬಾರಿ ಐಪಿಎಲ್ ಮೆಗಾ ಹರಾಜು ಜೆಡ್ಡಾದಲ್ಲಿ ನಡೆಯಲಿದ್ದು, ಇಂದು (ನವೆಂಬರ್ 24) ಮತ್ತು ನಾಳೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.

ಈ ಬಾರಿ ಮೆಗಾ ಹರಾಜಿನಲ್ಲಿ ಭಾಗವಹಿಸಲು 1500 ಕ್ಕೂ ಹೆಚ್ಚು ಆಟಗಾರರು ಅರ್ಜಿ ಹಾಕಿದ್ದರು, ಈ ಪಟ್ಟಿಯನ್ನು ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಗೂ ಕಳಿಸಿಕೊಟ್ಟ ಬಳಿಕ 577 ಆಟಗಾರರನ್ನು ಶಾರ್ಟ್‌ ಲಿಸ್ಟ್‌ ಮಾಡಲಾಗಿದೆ. ಹಲವು ಆಟಗಾರರು ಕೋಟಿ ಕೋಟಿ ಪಡೆಯುವ ನಿರೀಕ್ಷೆಯಲ್ಲಿದ್ದು, ಇನ್ನೂ ಕೆಲವು ಆಟಗಾರರು ತಮ್ಮ ಮಾಜಿ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

IPL 2025 Auction Begins with Star Player Selections

ಮೊದಲ ಸೆಟ್‌ನಲ್ಲಿ ಪ್ರಮುಖ ಆಟಗಾರರು

ಐಪಿಎಲ್‌ ಮೆಗಾ ಹರಾಜು ಹಲವು ಸುತ್ತುಗಳಲ್ಲಿ ನಡೆಯಲಿದೆ. ಪ್ರತಿಯೊಂದು ಸುತ್ತಿನಲ್ಲಿ ಹಲವು ಆಟಗಾರರು ಇದ್ದಾರೆ. ಮೊದಲ ಎರಡು ಸೆಟ್‌ ಪ್ರಮುಖ ಆಟಗಾರರ ಹೆಸರಿದ್ದು ಭಾರಿ ನಿರೀಕ್ಷೆ ಮೂಡಿಸಿದೆ. ಮೊದಲ ಸೆಟ್‌ನಲ್ಲಿ ಜೋಸ್ ಬಟ್ಲರ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕಗಿಸೊ ರಬಾಡ, ಅರ್ಷದೀಪ್ ಸಿಂಗ್ ಮತ್ತು ಮಿಚೆಲ್ ಸ್ಟಾರ್ಕ್ ಸ್ಟಾರ್ಕ್ ಇದ್ದು ಈ ಆಟಗಾರರು ಕೋಟಿ ಕೋಟಿ ರೂಪಾಯಿಗೆ ಹರಾಜಾಗಲಿದ್ದಾರೆ. ಅದರಲ್ಲೂ ರಿಷಬ್ ಪಂತ್‌ ದಾಖಲೆಯ ಮೊತ್ತಕ್ಕೆ ಹರಾಜಾಗಲಿದ್ದಾರೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ.

ಎರಡನೇ ಸೆಟ್‌ನಲ್ಲಿ ಯುಜ್ವೇಂದ್ರ ಚಹಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಿಲ್ಲರ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಹರಾಜಿಗೆ ಬರಲಿದ್ದಾರೆ. ಮಾರ್ಕ್ಯೂ ಸೆಟ್‌ ಬಳಿಕ ಊಟದ ವಿರಾಮ ಇರಲಿದೆ.

ಊಟದ ವಿರಾಮದ ನಂತರ, ಕ್ಯಾಪ್ಡ್ ಬ್ಯಾಟರ್‌ಗಳು ಮೊದಲು ಹರಾಜು ಯುದ್ಧಕ್ಕೆ ಸಿದ್ಧರಾಗುತ್ತಾರೆ ಮತ್ತು ನಂತರ ಆಲ್‌ರೌಂಡರ್‌ಗಳು ಮತ್ತು ವಿಕೆಟ್‌ಕೀಪರ್‌ಗಳು ಹರಾಜಿಗೆ ಬರಲಿದ್ದಾರೆ.

1 ನೇ ದಿನದ ಅಂತಿಮ ಸೆಟ್‌ನಲ್ಲಿ ಮೊದಲ ಅನ್‌ಕ್ಯಾಪ್ಡ್ ಆಟಗಾರರ ಸೆಟ್ ಇರುತ್ತದೆ. ಎರಡನೇ ದಿನವಾದ ಸೋಮವಾರ ಹರಾಜಿನಲ್ಲಿ ಮುಖ್ಯವಾಗಿ ಫಾಫ್ ಡು ಪ್ಲೆಸಿಸ್, ಕೇನ್ ವಿಲಿಯಮ್ಸನ್, ಪೃಥ್ವಿ ಶಾ ಮತ್ತು ಅಜಿಂಕ್ಯ ರಹಾನೆಯಂತಹ ಅನುಭವಿ ಆಟಗಾರರು ಹರಾಜಿಗೆ ಬರುತ್ತಾರೆ.

ಮೊದಲ ದಿನವೇ ಬಹುತೇಕ ಫ್ರಾಂಚೈಸಿಗಳು ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಮಾಡಿಕೊಳ್ಳುವ ಉತ್ಸಾಹದಲ್ಲಿವೆ. ಪಂಜಾಬ್ ಕಿಂಗ್ಸ್ 110 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು, ಅತಿ ಹೆಚ್ಚು ಪರ್ಸ್ ಜೊತೆ ಹರಾಜಿಗೆ ಬರಲಿದೆ. ಹರಾಜಿಗೆ ಮುನ್ನ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿದೆ. ಆರ್ ಸಿಬಿ 83 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು ಎರಡನೇ ಅತಿ ಹೆಚ್ಚು ಪರ್ಸ್ ಹೊಂದಿರುವ ತಂಡವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+