MI vs RCB: ಬೆಂಗಳೂರು ತಂಡದಲ್ಲಿ ಬದಲಾವಣೆ ಮಾಡಿದರೆ ಗೆಲುವಿನ ಚಾನ್ಸ್: ಪ್ಲೆ ಆಫ್ ಪ್ರವೇಶಿಸಲು ಗೆಲುವು ಅನಿವಾರ್ಯ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಮುಂಬೈನ ವಾಂಖೇಡೆ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ. ಪ್ರಸಕ್ತ ಐಪಿಎಲ್‌ನಲ್ಲಿ ಉಭಯ ತಂಡಗಳು ಕೇವಲ ಒಂದೇ ಒಂದು ಪಂದ್ಯವನ್ನು ಗೆದ್ದಿದ್ದು ಈ ಪಂದ್ಯ ಮಹತ್ವದಾಗಿದೆ.
ಪ್ಲೇ ಆಫ್ ದೃಷ್ಟಿಯಿಂದ ನೋಡುವುದಾದರೆ ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈಗಾಗಲೇ ಆರ್‌ಸಿಬಿ ಆಡಿರುವ ಐದು ಪಂದ್ಯಗಳಲ್ಲಿ 4 ಸೋಲು 1 ಗೆಲುವು ಕಂಡಿದೆ. ಮುಂಬೈ ನಾಲ್ಕು ಪಂದ್ಯಗಳಲ್ಲಿ ಒಂದು ಗೆಲುವು ಮೂರು ಸೋಲು ಕಂಡಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಮೋಘ ಪ್ರದರ್ಶನ ನೀಡಿದ್ದು ಆರ್‌ಸಿಬಿ ವಿರುದ್ಧವೂ ಜಯ ಸಾಧಿಸುವ ಹುಮ್ಮಸ್ಸಿನಲ್ಲಿದೆ.

ಟಾಪ್ ಆರ್ಡರ್ ಬದಲಾವಣೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಪಂದ್ಯದಲ್ಲಿ ಬದಲಾವಣೆ ಮಾಡಿಕೊಂಡು ಆಡಿದರೆ ಗೆಲುವಿನ ನಗೆ ಬೀರಬಹುದು. ಆರಂಭಿಕರಾಗಿ ಫಾಫ್ ಡುಪ್ಲೇಸಿಸ್, ವಿಲ್ ಜಾಕ್ಸ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಬೇಕು. ಅಂದಾಗ ಇಬ್ಬರೂ ಆಟಗಾರರು ಪವರ್ ಹಿಟ್ಟರ್ ಆಗಿದ್ದು, ಪವರ್ ಪ್ಲೇನಲ್ಲಿ ಪವರ್ ಫುಲ್ ಓಪನಿಂಗ್ ನೀಡಬಲ್ಲರು. ಅಲ್ಲದೆ ಈ ಪಂದ್ಯದಲ್ಲಿ ವಿಲ್ ಜಾಕ್ಸ್ ಅವರಿಗೆ ಸ್ಥಾನ ನೀಡಬೇಕು. ಗ್ಲೇನ್ ಮ್ಯಾಕ್ಸ್‌ವೆಲ್ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದು, ಈ ಬಾರಿ ಅವರನ್ನು ತಂಡದಿಂದ ಕೈ ಬಿಡುವ ಅವಶ್ಯಕತೆ ಇದೆ.
ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಮಾಡಿದರೆ. ಒಂದು ವಿಕೆಟ್ ಬೀಳುತ್ತಿದ್ದಂತೆ ವಿರಾಟ್ ಆಟಕ್ಕೆ ಬಂದರೆ ತಮ್ಮ ಜೊತೆಗಾರರನ್ನು ಸಹ ಆಡಿಸಿಕೊಂಡು ಹೋಗುವ ಕ್ಷಮತೆ ಹೊಂದಿರುತ್ತಾರೆ. ಕ್ಯಾಮರೂನ್ ಗ್ರೀನ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು. ಅಂದಾಗ ಗೆಲುವಿನ ಆಸೆ ಫಲಿಸಬಹುದು.
ಮಹಿಪಾಲ್ ಲೊಮ್ರೊರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಬೇಕಿದೆ. ಇವರು ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಹ ಮಾಡಬಲ್ಲರು. ದಿನೇಶ್ ಕಾರ್ತಿಕ್ ಡೆತ್ ಓವರ್‌ಗಳಲ್ಲಿ ಅಬ್ಬರಿಸಬಲ್ಲರು.

ಲಾಕಿಗೆ ಅವಕಾಶ ಯಾವಾಗ?
ಎಂದಿನಿಂತೆ ಆರ್‌ಸಿಬಿಗೆ ಈ ಬಾರಿಯೂ ಬೌಲಿಂಗ್ ವಿಭಾಗದ್ದೆ ಚಿಂತೆಯಾಗಿದೆ. ಅಲ್ಜಾರಿ ಜೋಸೆಫ್ ಪರಿಣಾಮಕಾರಿ ಬೌಲಿಂಗ್ ನಡೆಸುತ್ತಿಲ್ಲ. ಇವರ ಬದಲಿಗೆ ನ್ಯೂಜಿಲೆಂಡ್ ತಂಡದ ಲಾಕಿ ಫರ್ಗ್ಯುಸನ್ ಅವರಿಗೆ ಅವರಿಗೆ ಅವಕಾಶ ನೀಡಬೇಕು. ಇವರು ಡೆತ್ ಓವರ್‌ಗಳಲ್ಲಿ ತಮ್ಮ ಸ್ಲೋವರ್ ಒನ್‌ನಿಂದ ಕಾಟ ನೀಡಬಲ್ಲರು. ಸಿರಾಜ್ ದುಬಾರಿ ಆಗುತ್ತಿದ್ದಾರೆ. ಆಕಾಶ್ ದೀಪ್, ವಿಜಯ್‌ಕುಮಾರ್ ವೈಶಾಖ್, ರೀಸ್ ಟೋಪಲೆ, ಬಿಗುವಿನ ದಾಳಿ ನಡೆಸುವ ಕ್ಷಮತೆ ಹೊಂದಿದ್ದಾರೆ. ಮಯಾಂಕ್ ದಗಾರ್ ಸ್ಪಿನ್ ಮೋಡಿ ಕೆಲಸ ಮಾಡಬೇಕಿದೆ. ಅಂದಾಗ ಮಾತ್ರ ಗೆಲುವಿನ ಆಸೆ ಫಲಿಸುತ್ತದೆ.
ಬದಲಾವಣೆ ಸಾಧ್ಯತೆ ಇಲ್ಲ
ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತ್ತು. ಆದ್ದರಿಂದ ಈ ತಂಡದ ಆಡುವ ಹನ್ನೊಂದರಲ್ಲಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆ. ಮುಂಬೈ ತಂಡ ತವರಿನಲ್ಲಿ ಸಂಘಟಿತ ಆಟವನ್ನು ಪ್ರದರ್ಶಿಸಿ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ.
MI ಆಡುವ ಸಂಭಾವ್ಯ ಬಳಗ: ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಹಾರ್ದಿಕ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಮೊಹಮ್ಮದ್ ನಬಿ, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ ಮತ್ತು ಜಸ್ಪ್ರೀತ್ ಬುಮ್ರಾ.
RCB ಆಡುವ ಸಂಭಾವ್ಯ ಬಳಗ: ಫಾಫ್ ಡು ಪ್ಲೆಸಿಸ್, ವಿರಾಟ್ ಕೋಹಲಿ, ರಜತ್ ಪಾಟೀದಾರ್, ಕೈಮರೂನ್ ಗ್ರೀನ್, ಗ್ಲೆನ್, ಮ್ಯಾಕ್ಸ್, ಮ್ಯಾಕ್ಸವ ಕಾರ್ತಿಕ್, ಮಹಿಪಾಲ್ ಲೊಮರೋರ್, ಮಯಂಕ್ ಡಾಗರ್, ರೀಸ್ ಟೋಪಲೆ ಮತ್ತು ಮೊಹಮ್ಮದ್ ಸಿರಾಜ್.












Click it and Unblock the Notifications