ಕನ್ನಡಿಗರ ಆರ್‌ಸಿಬಿ ತಂಡಕ್ಕೆ ಭರ್ಜರಿ ಗೆಲುವು!
ಕನ್ನಡಿಗರು ಇಂದು ಖುಷಿ ಖುಷಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಯಾಕೆಂದರೆ ಇಂದು, ಕನ್ನಡಿಗರ ಐಪಿಎಲ್ ಟೀಂ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಪಂಜಾಬ್ ತಂಡದ ವಿರುದ್ಧ ನಮ್ಮ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದೆ. 177 ರನ್‌ಗಳ ಗುರಿ ಬೆನ್ನತ್ತಿದ್ದ ನಮ್ಮ ಆರ್‌ಸಿಬಿ ತಂಡ 178 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪಂಜಾಬ್ ತಂಡಕ್ಕೆ RCB ತಂಡ ದೊಡ್ಡ ಆಘಾತ ನೀಡಿದೆ.
ಆರ್‌ಸಿಬಿ ತಂಡ ಇಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್‌ನ ಗೆದ್ದು ಬೀಗಿತ್ತು. ಈ ಮೂಲಕ ಶುಭಾರಂಭ ಮಾಡಿತ್ತು. ಹಿಂದಿನ ಪಂದ್ಯದಲ್ಲಿ ಚೆನ್ನೈ ತಂಡದ ಎದುರು ಆರ್‌ಸಿಬಿ ಸೋಲು ಕಂಡಿತ್ತು. 2ನೇ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವ ವಿಶ್ವಾಸದಲ್ಲೇ ಮುನ್ನುಗ್ತಿತ್ತು. ಈ ಕಾರಣಕ್ಕೆ, ಅಚ್ಚುಕಟ್ಟಾಗಿ ಆಟ ಆಡುತ್ತಿದ್ದರು ಆರ್‌ಸಿಬಿ ಪ್ಲೇಯರ್ಸ್. RCB ಅಭಿಮಾನಿಗಳು ಕಳೆದ 16 ವರ್ಷದಿಂದ ಕಾಯುತ್ತಿದ್ದು, ಪ್ರತಿ ವರ್ಷ ಕೂಡ ಬೇಸರ ಕಾಡುತ್ತಿದೆ. ಆದರೆ ಈ ಬಾರಿ ಆರ್‌ಸಿಬಿ ಪಕ್ಕಾ ಕಪ್ ಗೆಲ್ಲುತ್ತೆ ಅನ್ನೋ ಆಸೆ ಮೂಡಿದೆ. ಹೀಗಿದ್ದಾಗ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿತ್ತು. ಈ ಸೋಲಿನ ನಡುವೆ ಇಂದು ಪಂಜಾಬ್ ವಿರುದ್ಧ ಗೆಲುವು ಸಾಧಿಸುತ್ತೆ ಆರ್‌ಸಿಬಿ ಅಂತಾ ಫ್ಯಾನ್ಸ್ ಕಾಯುತ್ತಿದ್ದರು.

ಸೋಲಿನ ಸುಳಿಯಲ್ಲಿ ಸಿಲುಕಿದ್ದ ಆರ್‌ಸಿಬಿ!
ಆರ್‌ಸಿಬಿ ತಂಡ ಟಾಸ್ ಗೆದ್ದು, ಮೊದಲಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಪಂಜಾಬ್ ತಂಡಕ್ಕೆ ಆರಂಭದಲ್ಲೇ ಆಘಾತ ಸಿಕ್ಕಿತ್ತು. ಟಾಸ್ ಸೋತಿದ್ದ ಪಂಜಾಬ್, ಮೊದಲ ವಿಕೆಟ್ ಬೇಗ ಕಳೆದುಕೊಂಡಿತ್ತು. ಆದರೆ ಆ ನಂತರ ಶಿಖರ್ ಧವನ್ ಕೊಂಚ ಚೇತರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ, ಪಂಜಾಬ್ ತಂಡ ಕಂಬ್ಯಾಕ್ ಮಾಡಿತ್ತು. ಅಂತೂ, ಇಂತೂ ಈ ತಂಡ ಭರ್ಜರಿ 176 ರನ್ ಗಳಿಸಿತ್ತು. ಹೀಗೆ 177 ರನ್ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡಕ್ಕೆ, ಗೆಲುವು ಸುಲಭವಾಗಿ ಸಿಗಲೇ ಇಲ್ಲ. ಆದರೆ ವಿರಾಟ್ ಕೊಹ್ಲಿ ಗೆಲುವನ್ನು ಬಿಟ್ಟು ಕೊಡಲೇ ಇಲ್ಲ.
ಕೊಹ್ಲಿ.. ಕೊಹ್ಲಿ.. ಕೊಹ್ಲಿ..
177 ರನ್ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡ 26 ರನ್‌ಗೆ ಮೊದಲ ವಿಕೆಟ್, 43 ರನ್‌ಗೆ ತಮ್ಮ 2ನೇ ವಿಕೆಟ್, 86 ರನ್‌ಗೆ 3ನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ಈ ಎಲ್ಲಾ ಹಂತದಲ್ಲು ಗಟ್ಟಿಯಾಗಿ ನಿಂತು ಆಟವಾಡಿದ ವಿರಾಟ್ ಕೊಹ್ಲಿ ಅವರು, ಭರ್ಜರಿ 77 ರನ್ ಗಳಿಸಿದರು. 11 ಬೌಂಡರಿ ಸೇರಿದಂತೆ 2 ಸಿಕ್ಸ್ ಬಾರಿಸಿದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳು, ತವರು ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸಿದರು.
ಒಟ್ನಲ್ಲಿ ಆರ್‌ಸಿಬಿ ತಂಡ ಮೊದಲ ಸೋಲಿನ ಬಳಿಕ ಈಗ 2ನೇ ಪಂದ್ಯದಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ. ಅದರಲ್ಲೂ ಪಂಜಾಬ್ ತಂಡದ ವಿರುದ್ಧ ಇದೀಗ ಆರ್‌ಸಿಬಿ ತಂಡವು ಗಳಿಸಿರುವ ಗೆಲುವು ಅಭಿಮಾನಿಗಳಿಗೆ ಕೂಡ ಖುಷಿ ಕೊಟ್ಟಿದೆ. ಹಾಗೇ ಮುಂದಿನ ಪಂದ್ಯದ ಸಮಯದಲ್ಲೂ ಆರ್‌ಸಿಬಿ ಹೀಗೆ ಗೆಲುವು ಸಾಧಿಸಲಿ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ.












Click it and Unblock the Notifications