PBKS vs DC: ಪಂಜಾಬ್‌ಗೆ ಭರ್ಜರಿ ಆರಂಭ, ಸೋತು ಸುಣ್ಣವಾದ ದೆಹಲಿ ತಂಡ!

ಐಪಿಎಲ್ 2024ರ ಸೀಸನ್ ಆರಂಭವಾಗಿದ್ದು, ನಿನ್ನೆ ನಮ್ಮ ಆರ್‌ಸಿಬಿ ತಂಡ ಸಿಎಸ್‌ಕೆ ಟೀಂ ವಿರುದ್ಧ ಸೋಲು ಕಂಡಿದೆ. ಈ ಮ್ಯಾಚ್ ಬಳಿಕ ನಡೆದ ಪಂದ್ಯದಲ್ಲಿ ಪಂಜಾಬ್‌ & ದೆಹಲಿ ತಂಡಗಳು ಮುಖಾಮುಖಿ ಆಗಿವೆ. ಅತ್ತ ಪಂಜಾಬ್‌ಗೆ ಭರ್ಜರಿ ಆರಂಭ ಸಿಕ್ಕಿದ್ದರೆ, ದೆಹಲಿಗೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಎದುರಾಗಿದೆ. ಈ ಮ್ಯಾಚ್‌ನ ಇಂಚಿಂಚು ಮಾಹಿತಿ ತಿಳಿಯಲು ಮುಂದೆ ಓದಿ.

ಐಪಿಎಲ್ 2024ರ ಸೀಸನ್‌ನ 2ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ & ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಫೈಟಿಂಗ್ ಮಾಡಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ದೆಹಲಿ ತಂಡ 174 ರನ್ ಗಳಿಸಿ ಸವಾಲಿನ ಮೊತ್ತವನ್ನೇ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ತಂಡ ಆರಂಭಿಕ ಆಘಾತದಿಂದ ಸುಧಾರಿಸಿಕೊಂಡು ಕೊನೆಗೂ ಗುರಿ ಮುಟ್ಟಿತು. ಹಾಗಾದ್ರೆ ಹೇಗಿತ್ತು ಈ ಎರಡೂ ತಂಡಗಳ ಇನ್ನಿಂಗ್ಸ್? ಅತಿಹೆಚ್ಚು ರನ್ ಗಳಿಸಿದ ಆಟಗಾರ ಯಾರು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

IPL 2024 Punjab Started With Victory amp amp Delhi Lost First Match

174 ರನ್ VS 177 ರನ್!

ದೆಹಲಿ ತಂಡದ ಪರವಾಗಿ ಡೇವಿಡ್ ವಾರ್ನರ್ ಆರಂಭದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಗಮನ ಸೆಳೆದರು. ಆದರೆ 20 ರನ್ ಗಳಿಸಿದ್ದ ಮಿಚ್ಚೆಲ್ ಮಾರ್ಷ್ ಔಟ್ ಆದರು & ಆ ನಂತರ ಡೇವಿಡ್ ವಾರ್ನರ್ ಕೂಡ 29 ರನ್‌ಗೆ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ಆ ಬಳಿಕ ಬಂದ ಶಾಯ್ ಹೋಪ್ 33 ರನ್‌ಗೆ ತೃಪ್ತಿಪಟ್ಟರು, ರಿಷಬ್ ಪಂತ್ 13 ಬಾಲ್‌ನ ಆಡಿ 18 ರನ್ ಗಳಿಸಿದರು. ಅಂತಿಮವಾಗಿ ಅಕ್ಸರ್ ಪಟೇಲ್ 21 ರನ್ & ಅಬಿಷೇಕ್ ಪೋರೆಲ್ 32 ರನ್ ಗಳಿಸಿ ದೆಹಲಿ ತಂಡ 174 ರನ್ ಗಳಿಸಲು ಸಹಾಯ ಮಾಡಿದರು.

ದೆಹಲಿ ತಂಡಕ್ಕೆ ಯಾರು ವಿಲನ್?

ಹೀಗೆ ತನ್ನ ಇನ್ನಿಂಗ್ಸ್ ಆರಂಭ ಮಾಡಿದ ಪಂಜಾಬ್ ತಂಡ 177 ರನ್ ಚಚ್ಚಿತು. ಶಿಖರ್ ಧವನ್ 22 ರನ್ ಗಳಿಸಿ ಔಟಾದರು. ನಂತರ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ಸ್ಯಾಮ್ ಕರನ್ ಅವರು ಉತ್ತಮ ಜೊತೆಯಾಟ ನೀಡಿದರು. ಪ್ರಭ್‌ಸಿಮ್ರಾನ್ ಸಿಂಗ್, 17 ಬಾಲ್ ಆಡಿ 26 ರನ್‌ಗಳನ್ನ ಗಳಿಸಿದರು. ಈ ಆಟದಲ್ಲಿ 5 ಬೌಂಡರಿ ಕೂಡ ಬಾರಿಸಿದರು. ಸ್ಯಾಮ್ ಕರನ್ 47 ಬಾಲ್‌ಗಳನ್ನ ಆಡಿ 6 ಬೌಂಡರಿ 1 ಸಿಕ್ಸರ್ ಬಾರಿಸಿ ಭರ್ಜರಿ ಆಟ ಪ್ರದರ್ಶನ ಮಾಡಿದ್ದರು. ಲಿವಿಂಗ್ಸ್‌ಟನ್ ಅವರು ಕೇವಲ 21 ಬೌಲ್ ಆಡಿ 38 ರನ್ ಚಚ್ಚಿದರು. 2 ಬೌಂಡರಿ & 3 ಸಿಕ್ಸರ್ ಬಾರಿಸಿದ ಲಿವಿಂಗ್ಸ್‌ಟನ್ ಪಂಜಾಬ್ ಪಾಲಿಗೆ ಹೀರೋ ಆದರೆ, ದೆಹಲಿ ತಂಡಕ್ಕೆ ವಿಲನ್ ಆದರು.

IPL 2024 Punjab Started With Victory amp amp Delhi Lost First Match

ಒಟ್ನಲ್ಲಿ ಅಂತಿಮವಾಗಿ ದೆಹಲಿ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋತು ಸುಣ್ಣವಾಗಿದೆ. ಮೊದಲ ಪಂದ್ಯದಲ್ಲೇ ಸೋತ ಹಿನ್ನೆಲೆ ದೆಹಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಬೇಸರ, ನೋವಿನಲ್ಲೇ ಪಂದ್ಯ ಮುಗಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಅದ್ಭುತವಾಗಿ ಜಯ ಸಾಧಿಸುವ ನಿರೀಕ್ಷೆಯಲ್ಲಿ ಇದ್ದಾರೆ. ಮತ್ತೊಂದು ಕಡೆ ಪಂಜಾಬ್ ತಂಡಕ್ಕೆ ಮೊದಲ ಮ್ಯಾಚ್ ಕೈಹಿಡಿದಿರುವುದು ಹೊಸ ಹುಮ್ಮಸ್ಸು ತುಂಬಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+