IPL 2023: ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಮುರಿಯಬಲ್ಲ 3 ಸಂಭಾವ್ಯ ಮೈಲಿಗಲ್ಲುಗಳು!
ಈ ಬಾರಿಯ ಐಪಿಎಲ್‌ನ ಎರಡು ಬಲಿಷ್ಠ ತಂಡಗಳು ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ರಾಜಸ್ಥಾನ್ ರಾಯಲ್ಸ್ ತಂಡದ ಆತಿಥ್ಯದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಧೋನಿ ನೇತೃತ್ವದ ಸಿಎಸ್‌ಕೆ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಆರ್‌ಆರ್ ತಂಡ ಮೂರನೇ ಸ್ಥಾನದಲ್ಲಿದೆ.
ಅದ್ಭುತ ಆರಂಭದೊಂದಿಗೆ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ತಂಡ ನಂತರ ಹಿನ್ನಡೆ ಕಂಡಿದೆ. ಅದರಲ್ಲೂ ಕಳೆದ ನಾಲ್ಕು ಪಂದ್ಯಗಳಲ್ಲಿ ಆರ್ಆರ್ ಮೂರು ಸೋಲು ಅನುಭವಿಸಿರುವುದು ಮ್ಯಾನೇಜ್‌ಮೆಂಟ್ ಚಿಂತೆ ಹೆಚ್ಚಿಸಿದೆ. ಮತ್ತೊಂದೆಡೆ ಸಿಎಸ್‌ಕೆ ತಂಡ ಆಡಿದ 7 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ 10 ಅಂಕಗಳಿಸಿದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇನ್ನು ಗುರುವಾರ ನಡೆಯಲಿರುವ ಈ ಎರಡು ತಂಡಗಳ ನಡುವಿನ ಸೆಣೆಸಾಟದಲ್ಲಿ ಕೆಲ ಮಹತ್ವದ ಮೈಲಿಗಲ್ಲುಗಳು ದಾಖಲಾಗುವ ಅವಕಾಶಗಳಿದೆ. ಅಂಥಾ ಮೂರು ಸಂಭಾವ್ಯ ಮೈಲಿಗಲ್ಲುಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ.
RCB vs KKR: ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ವಿಶೇಷ ವ್ಯಕ್ತಿಗೆ ಅರ್ಪಿಸಿದ ವರುಣ್ ಚಕ್ರವರ್ತಿ!
ಬೌಂಡರಿಗಳ ಮೈಲಿಗಲ್ಲಿನ ಮೇಲೆ ರಹಾನೆ ಕಣ್ಣು
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಅಮೋಘ ಪ್ರದರ್ಶನ ನೀಡುತ್ತಿರುವ ಅಜಿಂಕ್ಯಾ ರಹಾನೆ ಐಪಿಎಲ್‌ನಲ್ಲಿ ಹಿಂದೆಂದಿಗಿಂತಲೂ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ರಹಾನೆ 209 ರನ್‌ಗಳನ್ನು ಬರೊಬ್ಬರಿ 199.05ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇನ್ನು ಈ ಆವೃತ್ತಿಯಲ್ಲಿ ಈವರೆಗೆ ರಹಾನೆ 18 ಬೌಂಡರಿಗಳನ್ನು ದಾಖಲಿಸಿದ್ದಾರೆ. ಈ ಮೂಲಕ ರಹಾನೆ ಐಪಿಎಲ್ ಇತಿಹಾಸದಲ್ಲಿ ಒಟ್ಟು 499 ಬೌಂಡರಿಗಳನ್ನು ಬಾರಿಸಿದಂತಾಗಿದೆ. ಇಂದಿನ ಪಂದ್ಯದಲ್ಲಿ ಒಂದು ಬೌಂಡರಿ ಬಾರಿಸಿದರೆ 450 ಬೌಂಡರಿ ಸಿಡಿಸಿದ ಮೈಲಿಗಲ್ಲು ದಾಟಿದಂತಾಗುತ್ತದೆ. ಈ ಸಾಧನೆ ಮಾಡಿದ ಕೇವಲ 9ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ ರಹಾನೆ.
ಟಿ20 ಕ್ರಿಕೆಟ್‌ನಲ್ಲಿ 300ನೇ ವಿಕೆಟ್ ಮೇಲೆ ಕಣ್ಣಿಟ್ಟ ಅಶ್ವಿನ್
ಭಾರತದ ಮತ್ತೋರ್ವ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ಈ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ರವಿಚಂದ್ರನ್ ಅಶ್ವಿನ್ 300 ವಿಕೆಟ್ ಪಡೆಯುವ ಅವಕಾಶ ಹೊಂದಿದ್ದಾರೆ. ಒಟ್ಟಾರೆಯಾಗಿ 300 ಟಿ20 ಇನ್ನಿಂಗ್ಸ್‌ಗಳಲ್ಲಿ ಆಡಿರುವ ಅಶ್ವಿನ್ 296 ವಿಕೆಟ್ ಪಡೆದಿದ್ದಾರೆ. ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಲು ಸಾಧ್ಯವಾದರೆ 300 ವಿಕೆಟ್‌ಗಳ ಮೈಲಿಗಲ್ಲು ಸಾಧಿಸಿದಂತಾಗುತ್ತದೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್ ಎನಿಸಿಕೊಳ್ಳಲಿದ್ದಾರೆ ಅಶ್ವಿನ್. ಚಾಹಲ್ ಮೊದಲ ಸ್ಥಾನದಲ್ಲಿದ್ದು 311 ವಿಕೆಟ್ ಪಡೆದುಕೊಂಡಿದ್ದಾರೆ.
RR ಪರ ವಿಶೇಷ ಮೈಲಿಗಲ್ಲು ಸಾಧಿಸಲು ಬಟ್ಲರ್ ಚಿತ್ತ
ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರ ಜೋಸ್ ಬಟ್ಲರ್ ಐಪಿಎಲ್‌ನಲ್ಲಿ ಯಾವಾಗಲೂ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. 2018ರಿಂದ ಆರ್‌ಆರ್ ತಂಡದ ಪರವಾಗಿ ಆಡುತ್ತಿರುವ ಬಟ್ಲರ್ 64 ಐಪಿಎಲ್ ಇನ್ನಿಂಗ್ಸ್‌ನಲ್ಲಿ 2548 ರನ್‌ಗಳನ್ನು ಗಳಿಸಿದ್ದಾರೆ. 44.7ರ ಸರಾಸರಿಯಲ್ಲಿ 150ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. 22 ಬಾರಿ ಅವರು 50ಕ್ಕೂ ಅಧಿಕ ರನ್‌ಗಳಿಸಿದ್ದಾರೆ. ಇನ್ನೊಂದು ಅರ್ಧ ಶತಕ ಸಿಡಿಸಿದರೆ 23 ಬಾರಿ 50ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದಂತಾಗಲಿದೆ. ಇದು ಆರ್‌ಆರ್ ಪರವಾಗಿ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿರುವ ಅಜಿಂಕ್ಯಾ ರಹಾನೆ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ.












Click it and Unblock the Notifications