IPL 2023: ಈತನ ಅನುಪಸ್ಥಿತಿಯಲ್ಲೂ ಈ ತಂಡ 2023ರ ಐಪಿಎಲ್ ಟ್ರೋಫಿ ಗೆಲ್ಲಲಿದೆ; ಸುನಿಲ್ ಗವಾಸ್ಕರ್ ಭವಿಷ್ಯ

ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವಿಗೆ ದಿನಗಣನೆ ಆರಂಭವಾಗಿದ್ದು.

ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವಿಗೆ ದಿನಗಣನೆ ಆರಂಭವಾಗಿದ್ದು. ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಹಾಲಿ ಗುಜರಾತ್ ಟೈಟನ್ಸ್ ತಂಡಗಳು ನಡುವಡ ಉದ್ಘಾಟನಾ ಪಂದ್ಯದ ಮೂಲಕ ಚಾಲನೆ ದೊರೆಯಲಿದೆ.

ಐಪಿಎಲ್ 2023ರ ಐಪಿಎಲ್‌ನಲ್ಲಿ ದೇಶದ 12 ವಿವಿಧ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದ್ದು, ಮೇ 28ರಂದು ಫೈನಲ್ ಪಂದ್ಯ ನಡೆಯಲಿದೆ. ಈ ವರ್ಷದ ಲೀಗ್‌ನಲ್ಲಿ ಪ್ರತಿ 10 ತಂಡಗಳು 7 ಪಂದ್ಯಗಳನ್ನು ಎದುರಾಳಿ ನೆಲದಲ್ಲಿ ಮತ್ತು 7 ಪಂದ್ಯಗಳನ್ನು ತವರಿನ ಅಂಗಳದಲ್ಲಿ ಆಡಲಿವೆ.

IPL 2023: Sunil Gavaskar Predicted That Mumbai Indians Team Will Win IPL 2023 Trophy

ಇನ್ನು ಮತ್ತೊಂದು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಐಪಿಎಲ್ ಅಭಿಯಾನವು ಎಪ್ರಿಲ್ 2ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.

ಇದೇ ವೇಳೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಮುಂಬರುವ 2023ರ ಐಪಿಎಲ್ ಟ್ರೋಫಿ ಗೆಲ್ಲುವ ತಂಡದ ಕುರಿತು ಭವಿಷ್ಯ ನುಡಿದಿದ್ದು, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 2023ರ ಐಪಿಎಲ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ದೀರ್ಘಕಾಲದ ಬೆನ್ನುನೋವಿಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿಯೂ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯಲಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

IPL 2023: Sunil Gavaskar Predicted That Mumbai Indians Team Will Win IPL 2023 Trophy

ಮುಂಬೈ ಇಂಡಿಯನ್ಸ್ ತಂಡದ ಪ್ರತಿಭೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಸುನಿಲ್ ಗವಾಸ್ಕರ್, ಮಾಜಿ ಚಾಂಪಿಯನ್ ಮುಂಬೈ ತಂಡ ಜಸ್ಪ್ರೀತ್ ಬುಮ್ರಾ ಅವರನ್ನು ಮಾತ್ರ ಕಳೆದುಕೊಳ್ಳಲಿದೆ. ಈ ತಂಡಕ್ಕೆ ಇನ್ನೂ ಚಾಂಪಿಯನ್‌ಶಿಪ್ ಗೆಲ್ಲುವ ಆಟಗಾರರನ್ನು ಹೊಂದಿದೆ. ಮುಂಬೈ ಇಂಡಿಯನ್ಸ್ ತಂಡವನನ್ನು ಮೊದಲ ಮೂರು ತಂಡಗಳಲ್ಲಿ ಖಂಡಿತವಾಗಿ ನೋಡುತ್ತೇನೆ,'' ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

ಐಪಿಎಲ್ ಇತಿಹಾಸದಲ್ಲಿ ದಾಖಲೆಯ ಐದು ಬಾರಿ ಪ್ರಶಸ್ತಿಯನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ ಜಸ್ಪ್ರೀತ್ ಬುಮ್ರಾ ಬದಲಿಗೆ ಯಾರೆಂಬುದನ್ನು ಎಂದು ಇನ್ನೂ ಪ್ರಕಟಿಸಿಲ್ಲ. ಪಂದ್ಯ ವಿಜೇತ ವೇಗದ ಬೌಲರ್ ಐಪಿಎಲ್‌ನಿಂದ ತಯಾರಾಗಿದ್ದಾರೆ ಎಂಬುದು ವಿಶೇಷ.

ಐಪಿಎಲ್ 2023: ಮುಂಬೈ ಇಂಡಿಯನ್ಸ್ ಪೂರ್ಣ ತಂಡ

ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಾಧ್ವಲ್, ಕ್ಯಾಮೆರಾನ್ ಗ್ರೀನ್, ಪಿಯೂಷ್ ಚಾವ್ಲಾ, ಡುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್.

IPL 2023: Sunil Gavaskar Predicted That Mumbai Indians Team Will Win IPL 2023 Trophy

ಮುಂಬೈ ಇಂಡಿಯನ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ

1) ಮುಂಬೈ ಇಂಡಿಯನ್ಸ್ vs ಆರ್‌ಸಿಬಿ - ಎಪ್ರಿಲ್ 2, ಬೆಂಗಳೂರು

2) ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ - ಎಪ್ರಿಲ್ 8, ಮುಂಬೈ

3) ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ - ಎಪ್ರಿಲ್ 11, ದೆಹಲಿ

4) ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ - ಎಪ್ರಿಲ್ 16, ಮುಂಬೈ

5) ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್ - ಎಪ್ರಿಲ್ 18, ಹೈದರಾಬಾದ್

6) ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ - ಎಪ್ರಿಲ್ 22, ಮುಂಬೈ

7) ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟನ್ಸ್- ಎಪ್ರಿಲ್ 25, ಅಹಮದಾಬಾದ್

8) ಮುಂಬೈ ಇಂಡಿಯನ್ಸ್ vs ರಾಜಸ್ಥಾನ ರಾಯಲ್ಸ್ - ಎಪ್ರಿಲ್ 30, ಮುಂಬೈ

9) ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ - ಮೇ 3, ಮೊಹಾಲಿ

10) ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ - ಮೇ 6, ಚೆನ್ನೈ

11) ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಮೇ 9, ಮುಂಬೈ

12) ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟನ್ಸ್ - ಮೇ 12, ಮುಂಬೈ

13) ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್- ಮೇ 16, ಲಕ್ನೋ

14) ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್ - ಮೇ 21, ಮುಂಬೈ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+