IPL 2023: 'ಅಸಾಧಾರಣ' ತಂಡಕ್ಕೆ ಸೇರ್ಪಡೆಯಾಗುತ್ತಿದ್ದೇನೆ: ಐಪಿಎಲ್‌ಗೆ ಮರಳುವ ಬಗ್ಗೆ ಸ್ಟೀವ್ ಸ್ಮಿತ್ ಸುಳಿವು!
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಹಿಂದಕ್ಕೆ ಸರಿದಿರುವುದು ಈಗಾಗಲೇ ತಿಳಿದಿದೆ. ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ ಹರಾಜಿನಿಂದ ಹಿಂದಕ್ಕೆ ಸರಿದಿದ್ದ ಸ್ಟೀವ್ ಸ್ಮಿತ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡದಿರಲು ನಿರ್ಧರಿದ್ದರು. ಆದರೆ ಈಗ ಸ್ಟೀವ್ ಸ್ಮಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ತೀವ್ರ ಕುತೂಹಲ ಮೂಡಿಸಿದೆ.
2021ರ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡದ ಪರವಾಗಿ ಆಡಿದ್ದ ಸ್ಟೀವ್ ಸ್ಮಿತ್ ಅವರನ್ನು ಈ ಬಾರಿಯ ಹರಾಜಿಗೂ ಮುನ್ನ ಡಿಸಿ ತಂಡ ಹರಾಜಿಗೆ ಬಿಡುಗಡೆಗೊಳಿಸಿತ್ತು. ಆದರೆ ಬಳಿಕ ಹರಾಜಾಗದೆ ಉಳಿದಿದ್ದ ಸ್ಟೀವ್ ಸ್ಮಿತ್ 2023ರ ಐಪಿಎಲ್ ಹರಾಜಿನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದರು. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಸ್ಟೀವ್ ಸ್ಮಿತ್ ಹಿಂದಕ್ಕೆ ಸರಿದಿದ್ದರು.

ಆದರೆ ಇದೀಗ ಸ್ಟೀವ್ ಸ್ಮಿತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್‌ಗೆ ತಾನು ಮರಳುತ್ತಿರುವುದಾಗಿ ಘೋಷಣೆ ಮಾಡಿರುವ ಸ್ಟೀವ್ ಸ್ಮಿತ್ "ಅಸಾಧಾರಣ ಮತ್ತು ಬದ್ಧತೆಯ" ತಂಡಕ್ಕೆ ಸೇರಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಅನೇಕ ತಂಡಗಳು ಗಾಯದ ಸಮಸ್ಯೆಯಿಂದ ಕೆಲ ಆಟಗಾರರ ಸೇವೆಯನ್ನು ಕಳೆದುಕೊಳ್ಳುತ್ತಿರುವ ಸನ್ನಿವೇಶ ಇರುವ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆಯೇ ಎಂಬ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
IPL 2023: ಆರ್‌ಸಿಬಿ ತಂಡಕ್ಕೆ ಗಾಯಾಳುಗಳದ್ದೇ ಸಮಸ್ಯೆ: ಮೊದಲ ಪಂದ್ಯಕ್ಕೆ ಹೇಗಿರಲಿದೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್
ಸ್ಟೀವ್ ಸ್ಮಿತ್ ಹೇಳಿದ್ದೇನು?: ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಸ್ಟೀವ್ ಸ್ಮಿತ್ "ನಮಸ್ತೇ ಇಂಡಿಯಾ, ನಿಮಗಾಗಿ ನಾನು ವಿಶೇಷ ಸುದ್ದಿಯೊಂದನ್ನು ತಂದಿದ್ದೇನೆ. ನಾನು ಐಪಿಎಲ್ 2023ಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಭಾರತದ ಒಂದು ವಿಶೇಷವಾದ ಹಾಗೂ ಬದ್ಧತೆಯ ತಂಡವನ್ನು ಕೂಡಿಕೊಳ್ಳಲಿದ್ದೇನೆ" ಎಂದು ಸ್ಟೀವ್ ಸ್ಮಿತ್ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸ್ಟೀವ್ ಸ್ಮಿತ್ ಐಪಿಎಲ್‌ನಲ್ಲಿ ಒಟ್ಟು 103 ಪಂದ್ಯಗಳನ್ನು ಆಡಿದ್ದಾರೆ. 2012ರ ಐಪಿಎಲ್ ಆವೃತ್ತಿಯಿಂದ 2021ರವರೆಗೆ ಐಪಿಎಲ್‌ನಲ್ಲಿ ಸಕ್ರಿಯವಾಗಿದ್ದ ಸ್ಟೀವ್ ಸ್ಮಿತ್ ಒಂದು ಶತಕ ಸೇರಿದಂರೆ ಒಟ್ಟು 2485 ರನ್ ಗಳಿಸಿದ್ದಾರೆ. ಕೊನೆಯದಾಗಿ ಅವರು 2021ರ ಆವೃತ್ತಿಯಲ್ಲಿ ಡೆಲ್ಲು ಕ್ಯಾಪಿಟಲ್ಸ್ ತಂಡದ ಪರವಾಗಿ ಆಡಿದ್ದರು.
ಇಂದೋರ್‌ನ ಹೋಳ್ಕರ್ ಸ್ಟೇಡಿಯಂ ಪಿಚ್‌ಗೆ ನೀಡಿದ್ದ ರೇಟಿಂಗ್ ಬದಲಾವಣೆ ಮಾಡಿದ ಐಸಿಸಿ
ಕಾಮೆಂಟೇಟರ್ ಆಗಿ ಭಾಗಿಯಾಗಲಿದ್ದಾರಾ ಸ್ಟೀವ್ ಸ್ಮಿತ್: ಸ್ಟೀವ್ ಸ್ಮಿತ್ ಈ ಬಾರಿಯ ಐಪಿಎಲ್ ಟೂರ್ನಿಗೆ ಮರಳುವ ಬಗ್ಗೆ ಸುಳಿವು ನೀಡಿರುವುದು ನಿಜ. ಆದರೆ ಆಟಗಾರನಾಗಿ ಮರಳುವ ಬಗ್ಗೆ ಅವರು ಯಾವುದೇ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ಸ್ಟೀವ್ ಸ್ಮಿತ್ ಕಾಮೆಂಟೇಟರ್ ಆಗಿ ಮರಳುವ ಬಗ್ಗೆ ಸಾಧ್ಯತೆಗಳು ಇದೆ. ಮುಂದಿನ ಆವೃತ್ತಿಯಲ್ಲಿ ಐಪಿಎಲ್ ಡಿಜಿಟಲ್ ಹಾಗೂ ಬ್ರಾಡ್‌ಕಾಸ್ಟ್ ಪ್ರತ್ಯೇಕವಾಗಿ ವೇದಿಕೆಗಳನ್ನು ಪ್ರಸಾರವಾಗಲಿದ್ದು ಹೀಗಾಗಿ ಸ್ಮಿತ್ ಮೈದಾನದಾಚೆ ಕ್ರಿಕೆಟ್ ವಿಶ್ಲೇಷಕನ ಜವಾಬ್ಧಾರಿ ನಿರ್ವಹಿಸುವ ಸಾಧ್ಯತೆಗಳು ದಟ್ಟವಾಗಿದೆ.
ಭಾರತ ಪ್ರವಾಸದಲ್ಲಿ ನಾಯಕನಾಗಿ ಮಿಂಚಿದ ಸ್ಮಿತ್: ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತದ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕನಾಗಿ ಸ್ಮಿತ್ ಗಮನ ಸೆಳೆದಿದ್ದಾರೆ. ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯಲ್ಲಿ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದ ಸ್ಮಿತ್ ಒಂದು ಪಂದ್ಯದಲ್ಲಿ ಗೆಲುವು ಹಾಗೂ ಒಂದು ಡ್ರಾ ಸಾಧಿಸಲು ಕಾರಣವಾಗಿದ್ದರು. ಬಳಿಕ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ತಂಡ 2-1 ಅಂತರದಿಂದ ಗೆಲ್ಲುವಂತೆ ಮಾಡಿದ್ದರು. ಹೀಗಾಗಿ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸ್ಮಿತ್ ಸಾಬೀತುಪಡಿಸಿದ್ದರು.
ಬಿಗ್‌ಬ್ಯಾಶ್‌ನಲ್ಲಿ ಅಬ್ಬರಿಸಿದ್ದ ಸ್ಟೀವ್ ಸ್ಮಿತ್: ಇನ್ನು ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನ ಈ ಬಾರಿಯ ಆವೃತ್ತಿಯಲ್ಲಿ ಸ್ಟೀವ್ ಸ್ಮಿತ್ ಅಬ್ಬರದ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಸಿಡ್ನಿ ಸಿಕ್ಸರ್ ಪರವಾಗಿ ಆಡಿರುವ ಸ್ಟೀವ್ ಸ್ಮಿತ್ ಆರಂಭಿಕನಾಗಿ ಕಣಕ್ಕಿಳಿದು ಶತಕದ ಮೇಲೆ ಶತಕ ಸಿಡಿಸಿ ಗುಡುಗಿದ್ದರು. ಸ್ಮಿತ್ ಈ ಬಾರಿ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಎರಡು ಶತಕ ಸಿಡಿಸಿದ್ದಾರೆ.












Click it and Unblock the Notifications