IPL 2023: ಹೌದು ಒತ್ತಡ ಇದೆ, ಆದಕ್ಕೆ ಕಾರಣ ಕಳೆದ ಆವೃತ್ತಿ ಎಂದ ಸಂಜು ಸ್ಯಾಮ್ಸನ್!

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಗೆ ಎಲ್ಲಾ ತಂಡಗಳು ಕೂಡ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ಮುಂದಿನ ಶುಕ್ರವಾರದಿಂದ ಆರಂಭವಾಗಲಿರುವ ಈ ಮೆಗಾ ಟೂರ್ನಿಯ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕಳೆದ ಆವೃತ್ತಿಯಲ್ಲಿ ತಮ್ಮ ತಂಡ ನೀಡಿರುವ ಉತ್ತಮ ಪ್ರದರ್ಶನವನ್ನು ಸ್ಮರಿಸಿಕೊಂಡಿದ್ದು ಈ ಬಾರಿಯೂ ಅಂಥಾದ್ದೇ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಫೈನಲ್‌ಗೆ ಪ್ರವೇಶಿಸಿ ರನ್ನರ್‌ಅಪ್ ಸ್ಥಾನವನ್ನು ಪಡೆದುಕೊಂಡಿತ್ತು. ಹೀಗಾಗಿ ಕಳೆದ ಆವೃತ್ತಿಯಲ್ಲಿ ತಂಡ ನೀಡಿರುವ ಉತ್ತಮ ಪ್ರದರ್ಶನಕ್ಕೆ ಸಮನಾಗಿ ಪ್ರದರ್ಶನ ನೀಡಬೇಕಾದ ಒತ್ತಡ ತಮ್ಮ ಮೇಲಿದೆ ಎಂಬುದನ್ನು ಸಂಜು ಸ್ಯಾಮ್ಸನ್ ಹೇಳಿಕೊಂಡಿದ್ದಾರೆ.

IPL 2023: RR skipper Sanju Samson said Pressure of matching last years show will always be there

ರಾಜಸ್ಥಾನ್ ರಾಯಲ್ಸ್ ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ ನೀಡಿದ್ದು ಈ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ ತಂಡದ ಜೊತೆಗಿನ ಐಪಿಎಲ್ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್‌ನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆರ್‌ಆರ್ ತಂಡದ ಜೊತೆಗಿನ ಪ್ರಯಾಣ ಅತ್ಯಂತ ರೋಮಾಂಚಕ ಎಂದಿದ್ದಾರೆ ಸಂಜು ಸ್ಯಾಮ್ಸನ್. 2013ರಲ್ಲಿ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದ ಮೂಲಕ ಐಪಿಎಲ್ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಎರಡು ಆವೃತ್ತಿಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್(ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡಕ್ಕೆ ಸೇರ್ಪಡೆಯಾಗಿ ಬಳಿಕ ಮತ್ತೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮರಳಿದ್ದರು.

Afg Vs Pak T20: ಕೊನೆ ಪಂದ್ಯ ಗೆದ್ದ ಪಾಕಿಸ್ತಾನ : ಸರಣಿ ಗೆದ್ದು ಸಂಭ್ರಮಿಸಿದ ಅಫ್ಘಾನಿಸ್ತಾನ

"ನಾನು 18ನೇ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದೆ. ಈಗ ನನಗೆ 28 ವರ್ಷ. ಈವರೆಗಿನ ಪ್ರಯಾಣ ಅತ್ಯಂತ ಸ್ಮರಣೀಯ. ಕಳೆದ ಹತ್ತು ವರ್ಷಗಳ ಈ ಪ್ರಯಾಣ ಸಾಕಷ್ಟು ಉತ್ಸಾಹ ಹಾಗೂ ಸವಾಲಿನದ್ದಾಗಿದೆ. ಇದು ನನ್ನ ತಂಡ. ರಾಜಸ್ಥಾನ್ ರಾಯಲ್ಸ್ ತಂಡ ಯಾವಾಗಲೂ ಅದ್ಭುತವಾಗಿ ಪ್ರದರ್ಶನ ನೀಡುವುದನ್ನು ನಾನು ಬಯಸುತ್ತೇನೆ" ಎಂದಿದ್ದಾರೆ ಸಂಜು ಸ್ಯಾಮ್ಸನ್.

"ಕಳೆದ ವರ್ಷ ನೀಡಿದ ಉತ್ತಮ ಪ್ರದರ್ಶನದಂತೆ ಈ ಬಾರಿಯೂ ನೀಡಬೇಕಾದ ಒತ್ತಡ ನಮ್ಮ ಮೇಲಿದೆ. 2022ರಲ್ಲಿ ನಮ್ಮ ತಂಡ ಫೈನಲ್‌ಗೆ ಪ್ರವೇಶ ಪಡೆಯುವ ಮೂಲಕ ಸ್ಮರಣೀಯ ಆವೃತ್ತಿಯನ್ನು ಹೊಂದಿತ್ತು. ಕಳೆದ ವರ್ಷ ಫೈನಲ್‌ಗೆ ಪ್ರವೇಶ ಪಡೆದಿರುವ ಕಾರಣ ಈ ಬಾರಿ ಮತ್ತೆ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸುತ್ತಾರೆ. ಹಾಗಾಗಿ ಕಳೆದ ಬಾರಿಯ ಪ್ರದರ್ಶನಕ್ಕಿಂತ ಉತ್ತಮವಾದ ಪ್ರದರ್ಶನ ನೀಡಬೇಕಾಗಿದೆ" ಎಂದಿದ್ದಾರೆ ಸಂಜು ಸ್ಯಾಮ್ಸನ್.

ಇನ್ನು ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ಮುಖ್ಯ ಕೋಚ್ ಕುಮಾರ್ ಸಂಗಕ್ಕರ ಬಗ್ಗೆ ಮಾತನಾಡಿದ್ದಾರೆ. ಕುಮಾರ್ ಸಂಗಕ್ಕರ ಅವರಂತಾ ಕೋಚ್‌ ಪಡೆದಿರುವುದಕ್ಕೆ ಅದೃಷ್ಟ ಮಾಡಿದ್ದೇವೆ ಎಂದಿದ್ದಾರೆ ಕೇರಳ ಮೂಲಕ ಯುವ ಅಟಗಾರ ಸಂಜು ಸ್ಯಾಮ್ಸನ್.

"ಸಂಗಕ್ಕರ ಅವರನ್ನು ಕೋಚ್ ಆಗಿ ಹೊಂದಿರುವುದಕ್ಕೆ ನಾವು ಅದೃಷ್ಟ ಮಾಡಿದ್ದೇವೆ. ಅವರು ದಿಗ್ಗಜ ಆಟಗಾರ. ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ಹಾಗೂ ಅಭ್ಯಾಸ ಮಾಡುವ ಸಂದರ್ಭದಲ್ಲಿ ಮೈದಾನದಲ್ಲಿ ನಮ್ಮ ಜೊತೆಗಿರುವುದು ನಮಗೆ ದೊಡ್ಡ ಶಕ್ತಿ ನೀಡುತ್ತದೆ. ಅವರಲ್ಲಿರುವ ಅಪಾರವಾದ ಅನುಭವದಿಂದಾಗಿ ನಾವೆಲ್ಲಾ ಯಾವಾಗಲೂ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ತಂಡದ ಒಳಿತಿಗಾಗಿ ಅವರು ಸತತವಾಗಿ ವಿಭಿನ್ನವಾದ ರಣತಂತ್ರಗಳನ್ನು ಹೆಣೆಯುತ್ತಿರುತ್ತಾರೆ" ಎಂದಿದ್ದಾರೆ ಸಂಜು ಸ್ಯಾಮ್ಸನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+