IPL 2023: ರಿಷಬ್ ಪಂತ್‌ಗೆ ವಿಶೇಷ ಗೌರವ ನೀಡಲು ಡೆಲ್ಲಿ ಕ್ಯಾಪಿಟಲ್ಸ್ ಸಿದ್ಧತೆ

ಕಾರು ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ. ನಾಯಕ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ರಿಷಬ್ ಪಂತ್ ಜೊತೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ವಿಶೇಷ ಭಾವನಾತ್ಮಕ ಸಂಬಂಧವನ್ನು ಹೊಂದಿದೆ.

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ರಿಷಬ್ ಪಂತ್ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಹೃದಯ ಮತ್ತು ಆತ್ಮ ಎಂದು ಹೇಳಿದರು. ಈ ಬಾರಿಯ ಐಪಿಎಲ್‌ನಲ್ಲಿ ಸ್ಟಾರ್ ಆಟಗಾರನಿಗೆ ಗೌರವ ಸಲ್ಲಿಸಲು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಪಂತ್ ಅವರ ಜರ್ಸಿ ಸಂಖ್ಯೆಯ ಶರ್ಟ್ ಅಥವಾ ಕ್ಯಾಪ್‌ ಧರಿಸಬಹುದು ಎಂದು ಹೇಳಿದ್ದಾರೆ.

rishab pant

"ರಿಷಬ್ ಪಂತ್ ಪ್ರತಿ ಪಂದ್ಯದಲ್ಲಿ ಡಗೌಟ್‌ನಲ್ಲಿ ನನ್ನ ಪಕ್ಕ ಕುಳಿತುಕೊಳ್ಳುತ್ತಿದ್ದರು. ಈ ಬಾರಿ ಅದು ಸಾಧ್ಯವಾಗುವುದಿಲ್ಲ, ಆದರೂ ರಿಷಬ್ ಪಂತ್‌ರನ್ನು ಸಾಧ್ಯವಾದಷ್ಟು ತಂಡದ ಭಾಗವಾಗಿ ಇಡಲು ಪ್ರಯತ್ನಿಸುತ್ತೇವೆ. ಅವರ ಜೆರ್ಸಿ ನಂಬರ್ ಅನ್ನು ನಾವು ನಮ್ಮ ಶರ್ಟ್‌ಗಳಲ್ಲಿ ಅಥವಾ ಕ್ಯಾಪ್‌ಗಳಲ್ಲಿ ಹೊಂದಬಹುದು, ಅವರು ಆಡದಿದ್ದರೂ ನಮ್ಮ ತಂಡದ ನಾಯಕ ಎಂದು ಸ್ಪಷ್ಟವಾಗಿ ಹೇಳುತ್ತೇವೆ" ಎಂದು ಪಾಂಟಿಂಗ್ ಹೇಳಿದ್ದಾರೆ.

ಕೀಪರ್ ಯಾರು ಎಂದು ಇನ್ನೂ ನಿರ್ಧಾರವಾಗಿಲ್ಲ

ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ನಾಯಕನಾಗಿದ್ದರೂ, ವಿಕೆಟ್ ಕೀಪರ್ ಯಾರು ಎನ್ನುವುದನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಸರ್ಫರಾಜ್ ಖಾನ್ ತಂಡವನ್ನು ಸೇರಿಕೊಂಡಿದ್ದಾರೆ, ಅವರ ವಿಕೆಟ್ ಕೀಪಿಂಗ್‌ ಬಗ್ಗೆ ನಿರ್ಧರಿಸಲು ನಾವು ಅಭ್ಯಾಸ ಪಂದ್ಯಗಳನ್ನು ನೋಡಬೇಕಾಗುತ್ತದೆ. ರಿಷಬ್ ಪಂತ್ ಬಿಟ್ಟುಹೋದ ದೊಡ್ಡ ಕೊರತೆಯಾಗಿದೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರುವುದರಿಂದ ಹಲವು ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದೇವೆ" ಎಂದು ಹೇಳಿದರು.

delhi

ರಿಷಬ್ ಪಂತ್ ಸ್ಥಾನವನ್ನು ಯಾರಿಂದಲೂ ತುಂಬಲಾಗದು. ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಫಿನಿಶರ್ ಪಾತ್ರವನ್ನು ನಿಭಾಯಿಸುತ್ತಿದ್ದರು ಎಂದು ಪಾಂಟಿಂಗ್ ಹೇಳಿದರು. ಆದರೂ ಮುಂಬೈನ ಆಲ್‌ರೌಂಡರ್ ಅಮನ್ ಹಕೀಮ್ ಪಾಂಟಿಂಗ್ ಗಮನ ಸೆಳೆದಿದ್ದು, ಅವರಲ್ಲಿ ಆಸಕ್ತಿ ತೋರಿದ್ದಾರೆ.

"ಅಮನ್ ಖಾನ್ ನಿಜವಾಗಿಯೂ ಗಮನ ಸೆಳೆದಿದ್ದಾರೆ. ಶಾರ್ದೂಲ್ ಠಾಕೂರ್ ಕೂಡ ತಂಡದಲ್ಲಿರುವುದು ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿದೆ. ಅವರು ತರಬೇತಿ ಸಂದರ್ಭದಲ್ಲಿ ಅತ್ಯುತ್ತಮವಾಗಿದ್ದಾರೆ" ಎಂದು ಪಾಂಟಿಂಗ್ ಹೇಳಿದರು.

delhi

ಡೇವಿಡ್ ವಾರ್ನರ್ ಆರಂಭಿಸುತ್ತಾರೆ

ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಡೇವಿಡ್ ವಾರ್ನರ್, ಐಪಿಎಲ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಎಂದು ರಿಕಿ ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ.

ಡೇವಿಡ್ ವಾರ್ನರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾನು ಇಷ್ಟಪಡುವುದಿಲ್ಲ. ಕಳೆದ ಒಂದು ದಶಕದಲ್ಲಿ ಅವರು ಆರಂಭಿಕ ಆಟಗಾರನಾಗಿ ಯಶಸ್ಸು ಪಡೆದವರು. ಅದರಲ್ಲೂ ಐಪಿಎಲ್‌ನಲ್ಲಿ ಅವರು ಯಶಸ್ವೀ ಆರಂಭಿಕ ಆಟಗಾರ ಎಂದು ಪಾಂಟಿಂಗ್ ಹೇಳಿದರು.

"ಅಮನ್ ಖಾನ್, ರೋವ್ಮನ್ ಪೊವೆಲ್ ಮತ್ತು ಅಕ್ಷರ್ ಪಟೇಲ್ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ಕಂಡಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ, ಮಿಚೆಲ್ ಮಾರ್ಷ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ದೊಡ್ಡ ಪಾತ್ರವನ್ನು ವಹಿಸಬಹುದು, ಅವರು ಬೌಲಿಂಗ್ ಮಾಡುವ ಆಯ್ಕೆ ಕೂಡ ಹೊಂದಿದ್ದಾರೆ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+