ಐಪಿಎಲ್ 2023: ನಾಯಕತ್ವದ ಜವಾಬ್ಧಾರಿ ತನಗೆ ಹೊಸತಲ್ಲ ಎಂದ ಕೆಕೆಆರ್‌ನ ನೂತನ ನಾಯಕ ನಿತೀಶ್ ರಾಣಾ
ಶ್ರೇಯಸ್ ಐಯ್ಯರ್ ಗಾಯಗೊಂಡಿರುವ ಕಾರಣ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಈ ಬಾರಿಯ ಆವೃತ್ತಿಯಲ್ಲಿ ನೂತನ ನಾಯಕನ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಕೆಕೆಆರ್ ಫ್ರಾಂಚೈಸಿ ನಿತೀಶ್ ರಾಣಾ ಅವರನ್ನು ನೂತನ ನಾಯಕ ಎಂದು ಈಗಾಗಲೇ ಘೋಷಣೆ ಮಾಡಿದ್ದು ಫ್ರಾಂಚೈಸಿಯ ಈ ನಿರ್ಧಾರ ಬಹುತೇಕರಿಗೆ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿರುವ ನಿತೀಶ್ ರಾಣಾ ಪ್ರತಿಕ್ರಿಯೆ ನೀಡಿದ್ದು ಇದು ಅಚ್ಚರಿಯ ನಿರ್ಧಾರವಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಕೆಕೆಆರ್ ಫ್ರಾಂಚೈಸಿ ನೀಡಿರುವ ಈ ಜವಾಬ್ಧಾರಿ ನಿರ್ವಹಿಸಲು ತಾನು ಸಿದ್ದನಿದ್ದೇನೆ ಎಂದಿರುವ ನಿತೀಶ್ ರಾಣಾ ಇದು ತನಗೆ ಒತ್ತಡನ್ನುಂಟು ಮಾಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಕಳೆದ ಎರಡ್ಮೂರು ವರ್ಷಗಳಿಂದ ತಾನು ನಾಯಕತ್ವದ ಗುಂಪಿನಲ್ಲಿರುವ ಕಾರಣ ಅದು ನನಗೆ ಸಹಾಯಕವಾಗಲಿದೆ ಎಂದಿರುವ ಅವರು ಆತ್ಮವಿಶ್ವಾಸದಿಂದ ತಂಡವನ್ನು ಮುನ್ನಡೆಸುವ ಭರವಸೆ ವ್ಯಕ್ತಪಡಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ನಿತೀಶ್ ರಾಣಾಗೆ ತಂಡವನ್ನು ಮುನ್ನಡೆಸಿರುವ ಅನುಭವ ಇದ್ದರೂ ಕೂಡ ಐಪಿಎಲ್‌ನಂತಾ ವೇದಿಕೆಯಲ್ಲಿ ಮೊದಲ ಬಾರಿಗೆ ಈ ಜವಾಬ್ಧಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

IPL 2023: ಧೋನಿ ಅಲ್ಲ, ಕೊಹ್ಲಿ ಅಲ್ಲ; ಈತ ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಎಂದ ಅನಿಲ್ ಕುಂಬ್ಳೆ
"ನಾಯಕತ್ವದ ಜವಾಬ್ಧಾರಿ ನನಗೆ ಹೊಸತಲ್ಲ. ಕಳೆದ ಎರಡ್ಮೂರು ವರ್ಷಗಳಿಂದ ಕೆಕೆಆರ್ ಫ್ರಾಂಚೈಸಿಯಲ್ಲಿ ನಾನು ನಾಯಕತ್ವದ ಗುಂಪಿನಲ್ಲಿದ್ದೇನೆ. ಈ ಬಾರಿ ನನಗೆ ನಾಯಕತ್ವದ ಹಣೆಪಟ್ಟಿ ದೊರೆತಿದೆ. ಕಳೆದ ಎರಡ್ಮೂರು ವರ್ಷಗಳಿಂದ ನಾಯಕತ್ವದ ಗುಂಪಿನಲ್ಲಿರುವ ಕಾರಣ ನಾಯಕತ್ವದ ಜವಾಬ್ಧಾರಿ ಬಂದಿದೆ ಎಂಬ ಕಾರಣಕ್ಕೆ ಹೆಚ್ಚಿನ ಒತ್ತಡವನ್ನು ಹೇರಿಕೊಳ್ಳುವುದಿಲ್ಲ. ಅದು ನನ್ನ ಆಟಕ್ಕೂ ಒಳ್ಳೆಯದಲ್ಲ. ಇದರಲ್ಲಿ ಹೊಸತೇನೂ ಇದೆ ಎಂದು ನನಗೆ ಅನಿಸುತ್ತಿಲ್ಲ. ಜವಾಬ್ಧಾರಿ ವಹಿಸಿಕೊಳ್ಳುವುದೆಂದರೆ ನನಗೆ ಇಷ್ಟ" ಎಂದಿದ್ದಾರೆ ನಿತೀಶ್ ರಾಣಾ.
29ರ ವರ್ಷದ ನಿತೀಶ್ ರಾಣಾ, ದೇಶೀಯ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿಕೊಂಡ ಅನುಭವ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಿತೀಶ್ ರಾಣಾ ಕೆಕೆಆರ್ ತಂಡದ ಪರವಾಗಿ ಒಟ್ಟು 74 ಪಂದ್ಯಗಳನ್ನು ಆಡಿದ್ದು 135.61ರ ಸ್ಟ್ರೈಕ್‌ರೇಟ್‌ನಲ್ಲಿ 1744 ರನ್‌ಗಳನ್ನು ಗಳಿಸಿದ್ದಾರೆ.
ಇನ್ನು ಇದಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸುನಿಲ್ ನರೈನ್ ಅವರನ್ನು ನಾಯಕನನ್ನಾಗಿ ನೇಮಕಗೊಳಿಸುವ ಸಾಧ್ಯತೆಗಳು ಇದೆ ಎಂಬ ಮಾತುಹಳ ಕೇಳಿಬಂದಿದ್ದವು. ಆದರೆ ನಾಯಕನಾಗಿ ಸುನಿಲ್ ನರೈನ್ ವಿಫಲನಾಗಿರುವ ಕಾರಣ ಹೊಸ ಆಯ್ಕೆಯತ್ತ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಚಿತ್ತ ನೆಟ್ಟಿರುವ ಸಾಧ್ಯತೆಯಿದೆ.
ಐಎಲ್‌ಟಿ20 ಲೀಗ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕತ್ವದ ಅಬುದಾಬಿ ನೈಟ್ ರೈಡರ್ಸ್ ತಂಡವನ್ನು ಕಳೆದ ಆವೃತ್ತಿಯಲ್ಲಿ ಸುನಿಲ್ ನರೈನ್ ಮುನ್ನಡೆಸಿದ್ದರು. ಆದರೆ ಈ ಆವೃತ್ತಿಯಲ್ಲಿ ಆಡಿದ 10 ಪಂದ್ಯಗಳಲ್ಲಿ ಸುನಿಲ್ ನರೈನ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ ಎರಡು ಗೆಲುವುಗಳನ್ನು ಮಾತ್ರವೇ ಕಂಡಿದ್ದು 8 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೆ ನರೈನ್‌ಗೆ ನಾಯಕತ್ವದ ಜವಾಬ್ಧಾರಿ ನೀಡುವ ನಿರ್ಧಾರ ಮಾಡದಿರಲು ಕೆಕೆಆರ್ ನಿರ್ಧರಿಸಿದೆ.
ಐಪಿಎಲ್ 2023: 5 ವರ್ಷಗಳ ಬಳಿಕ ಅದ್ದೂರಿ ಕಾರ್ಯಕ್ರಮದ ಮೂಲಕ ಚಾಲನೆಗೆ ಸಿದ್ಧತೆ: ಏನಿದೆ ವಿಶೇಷತೆ?
ಇನ್ನು ಸುನಿಲ್ ನರೈನ್ ಮಾತ್ರವಲ್ಲದೆ, ಕೆಕೆಆರ್ ತಂಡದ ನಾಯಕನ ರೇಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಇನ್ನೊಬ್ಬ ಆಲ್‌ರೌಂಡರ್ ಆಂಡ್ರೆ ರಸೆಲ್ ಕೂಡ ಇದ್ದರು. ಬಹು ವರ್ಷಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡುತ್ತಿರುವ ಆಂಡ್ರೆ ರಸೆಲ್ ನಾಯಕನ ಸ್ಥಾನಕ್ಕೆ ಸೂಕ್ತ ಆಟಗಾರ ಎನಿಸಿದ್ದರು ಆದರೆ ಈ ಎರಡು ಆಯ್ಕೆಯನ್ನು ಕೂಡ ಬಿಟ್ಟು ಭಾರತದ ಯುವ ಆಟಗಾರನ ಮೇಲೆ ಕೆಕೆಆರ್ ಭರವಸೆಯಿಟ್ಟಿದೆ.
ಕೊಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್(ಗಾಯದಿಂದ ಅಲಭ್ಯ), ನಿತೀಶ್ ರಾಣಾ(ನಾಯಕ), ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ರಿಂಕು ಸಿಂಗ್, ನಾರಾಯಣ್ ಜಗದೀಸನ್, ವೈಭವ್ ಅರೋರಾ, ಸುಯಾಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಮನ್‌ದೀಪ್ ಸಿಂಗ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್.












Click it and Unblock the Notifications