IPL 2023: ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಸಮಸ್ಯೆ ವಿವರಿಸಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲಾ ತಂಡಗಳ ಬಲಾಬಲಗಳ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಐಪಿಎಲ್‌ನಲ್ಲಿ ಆರಂಭಿಕ ಆವೃತ್ತಿಯಿಂದಲೂ ಸಕ್ರಿಯವಾಗಿರುವ ಪಂಜಾಬ್ ಕಿಂಗ್ಸ್ ಬಗ್ಗೆ ಕುತೂಹಲಕಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನ ಮೊದಲ ಆವೃತ್ತಿಯಿಂದ ಟೂರ್ನಿಯ ಭಾಗವಾಗಿದ್ದರೂ ಚಾಂಪಿಯನ್ ಪಟ್ಟಕ್ಕೆರಲು ಸಾಧ್ಯವಾಗದಿರುವ ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ತಂಡ ಕೂಡ ಒಂದು. ಅತ್ಯುತ್ತಮ ಆಟಗಾರರ ಬಳಗವನ್ನು ಹೊಂದಿದ್ದರೂ ಪಂಜಾಬ್ ಕಿಂಗ್ಸ್ ತಂಡ ಪ್ರತಿ ಆವೃತ್ತಿಯಲ್ಲಿಯೂ ವಿಫಲವಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಇರ್ಫಾನ್ ಪಠಾಣ್ ಇದಕ್ಕೆ ಕಾರಣವೇನು ಎಂಬುದನ್ನು ವಿಶ್ಲೇಷಣೆ ಮಾಡಿದ್ದಾರೆ.

IPL 2023: Irfan Pathan explains Punjab Kings weakness said Their engine has always been the problem

ತಂಡದ ಇಂಜಿನ್‌ನಲ್ಲಿದೆ ಸಮಸ್ಯೆ ಎಂದ ಪಠಾಣ್: ಇರ್ಫಾನ್ ಪಠಾಣ್ ಕೂಡ ಪಂಜಾಬ್ ಕಿಂಗ್ಸ್(ಈ ಹಿಂದೆ ಕಿಂಗ್ಸ್ XI ಪಂಜಾಬ್) ತಂಡದ ಪರವಾಗಿ ಆಡಿದ್ದರು. 16ನೇ ಆವೃತ್ತಿಗೆ ಸಿದ್ಧವಾಗುತ್ತಿರುವ ಪಂಜಾಬ್ ತಂಡಕ್ಕೆ ಇರ್ಫಾನ್ ಪಠಾಣ್ ಬಹುಮುಖ್ಯ ಸಲಹೆ ನೀಡಿದ್ದಾರೆ. ಪಂಜಾಬ್ ತಂಡದ ಇಂಜಿನ್‌ನಲ್ಲಿ ಯಾವಾಗಲೂ ಸಮಸ್ಯೆಯಿದೆ ಎಂದು ಸೂಚ್ಯವಾಗಿ ಹೇಳಿರುವ ಪಠಾಣ್ ಪದೇ ಪದೇ ಇಂಜಿನ್ ಬದಲಾಯಿಸುತ್ತಿರುವುದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ.

"ಮೊದಲನೆಯದಾಗಿ ಅವರ ಇಂಜಿನ್ ಯಾವಾಗಲೂ ಸಮಸ್ಯೆಯಾಗಿದೆ. ಅವರು ಎಷ್ಟು ಐಪಿಎಲ್ ಆವೃತ್ತಿಯಲ್ಲಿ ಆಡಿದ್ದಾರೀ ಬಹುತೇಕ ಅಷ್ಟು ಸಂದರ್ಭಗಳಲ್ಲಿ ಇಂಜಿನ್ ಬದಲಾಯಿಸಿದ್ದಾರೆ. ನಾನು ಮೂರು ವರ್ಷ ಪಂಜಾಬ್ ಪರವಾಗಿ ಆಡಿದ್ದೇನೆ" ಎಂದು ಪಂಜಾಬ್ ಕಿಂಗ್ಸ್ ತಂಡದ ಕಾರ್ಯಶೈಲಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್.

ವಿರಾಟ್ ಕೊಹ್ಲಿಗಾಗಿ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ; ವೀರೇಂದ್ರ ಸೆಹ್ವಾಗ್ ಬಹಿರಂಗ

ಇನ್ನು ಇದೇ ಸಂದರ್ಭದಲ್ಲಿ ಈ ಬಾರಿಯ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಇರ್ಫಾನ್ ಪಠಾಣ್ ಭರವಸೆ ವ್ಯಕ್ತಪಡಿಸಿದ್ದು ಸ್ಯಾಮ್ ಕರನ್, ಕಗಿಸೋ ರಬಡಾ, ಹಾಗೂ ಅರ್ಶ್‌ದೀಪ್ ಅವರಂಥಾ ಬೌಲರ್‌ಗಳು ಈ ಬಾರಿ ಖಂಡಿತವಾಗಿಯೂ ವ್ಯತ್ಯಾಸವನ್ನುಂಟು ಮಾಡಬಲ್ಲರು ಎಂದಿದ್ದಾರೆ.

"ಅವರು ಗುಣಮಟ್ಟದ ಬೌಲರ್‌ಗಳಾಗಿದ್ದಾರೆ. ಅದರಲ್ಲಿ ಇಬ್ಬರು ಎಡಗೈ ವೇಗಿಗಳಾಗಿದ್ದು ರಬಡಾ ಬಲಗೈ ವೇಗಿಯಾಗಿದ್ದಾರೆ. ಇದು ಬಹಳ ದೊಡ್ಡ ವ್ಯತ್ಯಾಸವುಂಟು ಮಾಡಲಿದೆ. ಈ ಬಾರಿಯ ಐಪಿಎ್‌ನಲ್ಲಿ ಆಡಲು ಲಭ್ಯವಿರುವ ಬೌಲಿಂಗ್ ವಿಭಾಗವನ್ನು ನೀವು ಗಮನಿಸಿದರೆ ಎಲ್ಲಾ ತಂಡಗಳಿಗಿಂತಲೂ ಪಂಜಾಬ್ ಪಡೆ ಬಲಿಷ್ಠವಾಗಿ ತೋರುತ್ತದೆ" ಎಂದಿದ್ದಾರೆ ಇರ್ಫಾನ್ ಪಠಾಣ್.

ಇನ್ನು ಪಂಜಾಬ್ ಕಿಂಗ್ಸ್ ತಂಡ ಕಳೆದ ಐಪಿಎಲ್ ಆವೃತ್ತಿಯಲ್ಲಿಯೂ ನೀರಸ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲಿ 6ನೇ ಸ್ಥಾನಕ್ಕೆ ತೃಪ್ತಿ ಪಟ್ಟ ಪಂಜಾಬ್ ಕಿಂಗ್ಸ್ ತಂಡ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾಗಿತ್ತು. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೆಲ ಚಾಣಾಕ್ಷ ನಡೆಗಳನ್ನು ತೆಗೆದುಕೊಂಡ ಪಂಜಾಬ್ ಕಿಂಗ್ಸ್ ತಂಡ ಯುವ ಆಟಗಾರ ಸ್ಯಾಮ್ ಕರನ್ ಅವರನ್ನು ಸೇರ್ಪಡೆಗೊಳಿಸಲು 18.5 ಕೊಟಿ ಮೊತ್ತವನ್ನು ಖರ್ಚು ಮಾಡಿದೆ. ಸ್ಯಾಮ್ ಕರನ್ ಕಳೆದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟಕ್ಕೇರಲು ನಿರ್ಣಾಯಕ ಪಾತ್ರವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+