IPL 2023: ಭಾರತದ ಕ್ರಿಕೆಟ್ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದೇನೆ ಎಂದ ಹ್ಯಾರಿ ಬ್ರೂಕ್ ವಿರುದ್ಧ ಆಕ್ರೋಶ!
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹ್ಯಾರಿ ಬ್ರೂಕ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಶತಕ ಸಿಡಿಸಿ ಮಿಂಚಿದರು. ಶತಕದ ಬಳಿಕ ಮಾತನಾಡಿದ ಅವರು, ನನ್ನನ್ನು ಟ್ರೋಲ್ ಮಾಡುತ್ತಿದ್ದ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದೇನೆ ಎಂದು ಹೇಳಿದರು, ಬ್ರೂಕ್ ಹೇಳಿಕೆ ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.
ಇಂಗ್ಲೆಂಡ್‌ನ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಏಪ್ರಿಲ್ 14ರಂದು ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್ ಸಹಿತ ಅಜೇಯ 100 ರನ್ ಗಳಿಸುವ ಮೂಲಕ ಈ ಐಪಿಎಲ್‌ನ ಮೊದಲ ಶತಕ ಸಿಡಿಸಿದ ಆಟಗಾರ ಎನಿಸಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಬ್ರೂಕ್ ಶತಕದ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿತು.

ಬೃಹತ್ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 20 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ನಿತೀಶ್ ರಾಣಾ (41 ಎಸೆತಗಳಲ್ಲಿ 75) ಮತ್ತು ರಿಂಕು ಸಿಂಗ್ (31 ಎಸೆತಗಳಲ್ಲಿ ಅಜೇಯ 58) ಅವರ ಹೋರಾಟದ ನಂತರವೂ ಕೋಲ್ಕತ್ತಾ ಗೆಲುವಿನ ದಡ ತಲುಪಲು ಸಾಧ್ಯವಾಗಲಿಲ್ಲ. 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 205 ರನ್ ಗಳಿಸುವ ಮೂಲಕ 23 ರನ್‌ಗಳಿಂದ ಸೋಲೊಪ್ಪಿಕೊಂಡಿತು.
Ben Stokes: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಬೆನ್ ಸ್ಟೋಕ್ಸ್ ಅಲಭ್ಯ: ಸಿಎಸ್‌ಕೆ ಸಿಇಒ ಮಹತ್ವದ ಮಾಹಿತಿ
ಭಾರತದ ಅಭಿಮಾನಿಗಳನ್ನು ಕೆಣಕಿದ ಬ್ರೂಕ್
ಪಂದ್ಯದ ನಂತರ ಮಾತನಾಡಿದ ಹ್ಯಾರಿ ಬ್ರೂಕ್ ಭಾರತದ ಕ್ರಿಕೆಟ್ ಅಭಿಮಾನಿಗಳನ್ನು ಕೆಣಕಿದರು. "ಸಾಮಾಜಿಕ ಮಾಧ್ಯಮಗಳಲ್ಲಿ ಇದ್ದರೆ ಜನ ನಿಮ್ಮ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದರೆ ನೀವು ನಿಮ್ಮ ಮೇಲೆ ಅನುಮಾನ ಪಡಲು ಆರಂಭಿಸುತ್ತೀರಿ. ಇಂದು ಬಹಳಷ್ಟು ಭಾರತದ ಕ್ರಿಕೆಟ್ ಅಭಿಮಾನಿಗಳು ಚೆನ್ನಾಗಿ ಆಡಿದೆ ಎಂದು ಹೇಳುವರು, ಆದರೆ ಕೆಲವು ದಿನಗಳ ಹಿಂದೆ ನನ್ನನ್ನು ನಿಂದಿಸಿದ್ದರು, ಈಗ ನಾನು ಅವರ ಬಾಯಿ ಮುಚ್ಚಿಸಿದ್ದೇನೆ, ನನಗೆ ಸಂತೋಷವಾಗಿದೆ" ಎಂದು ಹೇಳಿದರು.

ಬ್ರೂಕ್ ಮೊದಲ ಮೂರು ಪಂದ್ಯಗಳಲ್ಲಿ ಸತತವಾಗಿ ರನ್ ಗಳಿಸಲು ವಿಫಲವಾದ ನಂತರ ಅಭಿಮಾನಿಗಳಿಂದ ಟೀಕೆಗೆ ಒಳಗಾಗಿದ್ದರು. ಹ್ಯಾರಿ ಬ್ರೂಕ್ ಪ್ರತಿಕ್ರಿಯೆ ನೋಡಿದ ನಂತರ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು, 13.25 ಕೋಟಿ ರುಪಾಯಿ ಪಡೆದುಕೊಂಡ ನಂತರ ಉತ್ತಮ ಪ್ರದರ್ಶನ ನೀಡದಿದ್ದರೆ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹಲವರು ಹೇಳಿದ್ದಾರೆ.
Harry Brook said, "there are a lot of Indian fans out there who'll say well done tonight. But they were slagging me off a few days ago. Glad I could shut them up". pic.twitter.com/QNlhtLfRdw
— Mufaddal Vohra (@mufaddal_vohra) April 14, 2023
ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ
ಬ್ರೂಕ್ ಹೇಳಿಕೆ ನಂತರ ಪ್ರತಿಕ್ರಿಯೆ ನೀಡಿದ ಹಲವರು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಮುಂದಿನ ಪಂದ್ಯಗಳಲ್ಲಿ ರನ್ ಗಳಿಸದಿದ್ದರೆ ಇನ್ನಷ್ಟು ಹೆಚ್ಚಿನ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಸ್ಪಿನ್ ಪಿಚ್‌ಗಳು ಸಿಗಲಿವೆ, ಆಗಲೂ ಹೀಗೆ ರನ್ ಗಳಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಕೆಲವು ಅಭಿಮಾನಿಗಳು ಬ್ರೂಕ್ ಬೆಂಬಲಕ್ಕೆ ನಿಂತಿದ್ದಾರೆ, ಒಂದೆರಡು ಪಂದ್ಯಗಳಲ್ಲಿ ಆಡದಿದ್ದರೆ ಅಂತಹ ಆಟಗಾರರನ್ನು ಹೆಚ್ಚಾಗಿ ಟ್ರೋಲ್ ಮಾಡುತ್ತಾರೆ, ಬ್ರೂಕ್ ಅಂತಹವರಿಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ಆಡದಿದ್ದರೆ ಟ್ರೋಲ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಅಭಿಮಾನಿಗಳು ಉತ್ತಮ, ಅವರು ತಮ್ಮ ಆಟಗಾರರ ಬಗ್ಗೆ ಇಷ್ಟೊಂದು ಟೀಕೆ ಮಾಡಲ್ಲ ಎಂದು ಹೇಳಿದ್ದಾರೆ.












Click it and Unblock the Notifications