IPL 2023: ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ 10 ದಾಖಲೆಗಳು

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಇದೇ ಮಾರ್ಚ್ 31ರಂದು ಅದ್ಧೂರಿ ಚಾಲನೆ ಸಿಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ವಿಶ್ವದ ಶ್ರೀಮಂತ ಕ್ರಿಕೆಟ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರೋಚಕ ಪಂದ್ಯಗಳು, ರೋಮಾಂಚಕ ಕ್ಷಣಗಳು ಮತ್ತು ದಾಖಲೆಗಳನ್ನು ಬ್ರೇಕ್ ಮಾಡುವ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದೆ.

IPL 2023: 10 Records For Highest Runs Scored In IPL History

ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಪ್ರದರ್ಶಿಸುವ ಆಟವಾಗಿದೆ. ಹೀಗಾಗಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಹತ್ತು ದಾಖಲೆಗಳು ಇಲ್ಲಿವೆ.

1) ಕ್ರಿಸ್ ಗೇಲ್ - ಅಜೇಯ 175 ರನ್

2013ರ ಏಪ್ರಿಲ್ 23ರಂದು ನಡೆದ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಮಾತ್ರವಲ್ಲದೇ, ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದರು. ಕ್ರಿಸ್ ಗೇಲ್ ಕೇವಲ 66 ಎಸೆತಗಳಲ್ಲಿ 13 ಬೌಂಡರಿ ಮತ್ತು 17 ಸಿಕ್ಸರ್‌ಗಳ ಸಮೇತ ಅಜೇಯ 175 ರನ್ ಗಳಿಸಿ ಯೂನಿವರ್ಸ್ ಬಾಸ್ ತಮ್ಮ ಪರಾಕ್ರಮವನ್ನು ತೋರಿಸಿದ್ದರು.

IPL 2023: 10 Records For Highest Runs Scored In IPL History

2) ಬ್ರೆಂಡನ್ ಮೆಕಲಮ್ - ಅಜೇಯ 158 ರನ್

2008ರ ಏಪ್ರಿಲ್ 18ರಂದು ನಡೆದ ಉದ್ಘಾಟನಾ ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ವಿರುದ್ಧ ಕೆಕೆಆರ್ ತಂಡದ ಬ್ರೆಂಡನ್ ಮೆಕಲಮ್ ಅಜೇಯ 158 ರನ್ ಬಾರಿಸಿದ್ದರು. ಇದು ಪಂದ್ಯಾವಳಿಯ ಮೊದಲ ಶತಕವಾಗಿದೆ.

ಬ್ರೆಂಡನ್ ಮೆಕಲಮ್ ಕೇವಲ 73 ಎಸೆತಗಳಲ್ಲಿ 10 ಬೌಂಡರಿ ಮತ್ತು 13 ಸಿಕ್ಸರ್‌ಗಳ ನೆರವಿನಿಂದ ಸ್ಫೋಟಕ ಅಜೇಯ 158 ರನ್ ಬಾರಿಸಿ ತಂಡದ ಗೆಲುವಿಗೆ ಸಹಕಾರಿಯಾಗಿದ್ದರು.

3) ಕ್ವಿಂಟನ್ ಡಿ ಕಾಕ್ - ಅಜೇಯ 140 ರನ್

2022ರ ಮೇ 18ರಂದು ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅಜೇಯ 140 ರನ್ ಬಾರಿಸಿದರು. ಯಾವಾಗಲೂ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕ್ವಿಂಟನ್ ಡಿ ಕಾಕ್ ಕೇವಲ 70 ಎಸೆತಗಳಲ್ಲಿ ಔಟಾಗದೇ 140 ರನ್ ಗಳಿಸಿದ್ದರು.

4) ಎಬಿ ಡಿವಿಲಿಯರ್ಸ್ - ಅಜೇಯ 133 ರನ್

2015ರ ಮೇ 10ರಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅಜೇಯ 133 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 59 ಎಸೆತಗಳಲ್ಲಿ 19 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದರು.

IPL 2023: 10 Records For Highest Runs Scored In IPL History

5) ಕೆಎಲ್ ರಾಹುಲ್ - ಅಜೇಯ 132

2020ರ ಸೆಪ್ಟೆಂಬರ್ 24ರಂದು ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ಕೆಎಲ್ ರಾಹುಲ್ ಅಜೇಯ 132 ರನ್ ಗಳಿಸಿದ್ದರು. ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಕೇವಲ 69 ಎಸೆತಗಳಲ್ಲಿ ಮೂರಂಕಿ ಸಂಖ್ಯೆ ಮುಟ್ಟಿದ್ದರು.

6) ಎಬಿ ಡಿವಿಲಿಯರ್ಸ್ - ಅಜೇಯ 129 ರನ್

2016ರ ಮೇ 14ರಂದು ಗುಜರಾತ್ ಲಯನ್ಸ್ ವಿರುದ್ಧ ಆರ್‌ಸಿಬಿ ತಂಡದ ಎಬಿ ಡಿವಿಲಿಯರ್ಸ್ 52 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 12 ಬೌಂಡರಿಗಳ ಸಮೇತ ಅಜೇಯ 129 ರನ್ ಬಾರಿಸಿದರು.

7) ಕ್ರಿಸ್ ಗೇಲ್ - ಅಜೇಯ 128 ರನ್

2012ರ ಮೇ 17ರಂದು ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಕ್ರಿಸ್ ಗೇಲ್ 62 ಎಸೆತಗಳಲ್ಲಿ ಅಜೇಯ 128 ರನ್ ಬಾರಿಸಿದ್ದರು. ಅವರ ಬ್ಯಾಟಿಂಗ್ ಇನ್ನಿಂಗ್ಸ್ ನೋಡುವುದೇ ಸೊಗಸಾಗಿರುತ್ತದೆ.

8) ರಿಷಭ್ ಪಂತ್ - ಅಜೇಯ 128 ರನ್

2018ರ ಮೇ 10ರಂದು ನಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ ಕೇವಲ 63 ಎಸೆತಗಳಲ್ಲಿ ಅಜೇಯ 128 ರನ್ ಬಾರಿಸಿದರು.

9) ಮುರಳಿ ವಿಜಯ್ - 127 ರನ್

2010ರ ಏಪ್ರಿಲ್ 3ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭಿಕ ಬ್ಯಾಟರ್ ಮುರಳಿ ವಿಜಯ್ 56 ಎಸೆತಗಳಲ್ಲಿ 8 ಬೌಂಡರಿ ಮತ್ತು 11 ಸಿಕ್ಸರ್‌ಗಳು ಸೇರಿದಂತೆ 127 ರನ್ ಬಾರಿಸಿದ್ದಾರೆ.

10) ಡೇವಿಡ್ ವಾರ್ನರ್ - 126 ರನ್

2017ರ ಏಪ್ರಿಲ್ 30ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ 59 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಮೇತ 126 ರನ್ ಬಾರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+